ಮಡಿಕೇರಿ ದಸರಾ ಸಮಿತಿ ಕಾಯಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ.
ಮಡಿಕೇರಿ : ಮಡಿಕೇರಿಯಲ್ಲಿ ಗುರುವಾರ ನಡೆದ ದಶಮಂಟಪ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ವರು ಆಕಾಂಕ್ಷಿಗಳ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಚುನಾವಣೆ ಮೂಲಕ ಕಾರ್ಯಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ದಶಮಂಟಪ ಸಮಿತಿ ಅಧ್ಯಕ್ಷ ಸೇರಿದಂತೆ ದಶ ದೇವಾಲಯ, ಕರಗ ಪ್ರಮುಖರಿಂದ ಮತದಾನದ ಮೂಲಕ ಆಯ್ಕೆ ನಡೆದು ಅಂತಿಮವಾಗಿ ಅರುಣ್ ಕುಮಾರ್ ಆಯ್ಕೆಗೊಂಡರು.








