ಅರಣ್ಯ ಅಧಿಕಾರಿಗಳ ದಾಳಿ : ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರದ ದಿಮ್ಮಿಗಳು ವಶಕ್ಕೆ
ಸಕಲೇಶಪುರ : ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ವಾಹನ ಸಮೇತ ಮರದ ದಿಮ್ಮಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಕಲೇಶಪುರ ವಲಯ ವ್ಯಾಪ್ತಿಯ yadehalli planters club ಹತ್ತಿರ ಕಾಡು ಜಾತಿ ಬಿಲೆಟ್ಸ್ ಅನ್ನು ಅಕ್ರಮ ಸಾಗಾಟದಲ್ಲಿದ್ದ 02 ವಾಹನಗಳನ್ನು 1. ವಾಹನ ಸಂಖ್ಯೆ KA.13 4225 ರಲ್ಲಿ ತುಂಬಿಸಿದ್ದ ಕಾಡು ಜಾತಿ ಬಿಲೆಟ್ಸ್ 2.34 ಎಂ3 ಸತ್ತನ್ನು ಹಾಗೂ 2. Chasis no MA1RE2TTK56D25948 ನಲ್ಲಿ ತುಂಬಿಸಿದ 6.272 ಎಂ3 ಸತ್ತನ್ನು ಇಲಾಖೆ ಪರ ಅಮಾನತ್ತುಪಡಿಸಿ ಅ.ಮೊ.ಸಂಖ್ಯೆ 11/2025-26 ಹಾಗೂ12/2025-26 ದಿನಾಂಕ 24/07/2025ನ್ನು ದಾಖಲಿಸಿ ವಾಹನವನ್ನು ಸುರಕ್ಷತೆಗಾಗಿ ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.








