ಮಡಿಕೇರಿ : ಕಾಗಿ೯ಲ್ ವಿಜಯ್ ದಿವಸ್ ಹಿನ್ನಲೆಯಲ್ಲಿ ನಾಳೆ (ಶನಿವಾರ) ಸಂಜೆ ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ಹುತಾತ್ಮರಿಗೆ ಗೌರವ ನಮನ ಕಾಯ೯ಕ್ರಮ ದೀಪನಮನ, ಗಾನ ನಮನ ಮತ್ತು ಪುಪ್ಪ ನಮನ ಆಯೋಜಿಸಲಾಗಿದೆ.
ನಗರದ ಗೌಡ ಸಮಾಜದಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 85 ಸಂಘಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾಹಿತಿ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ಪಾವನ ಇವೆಂಟ್ಸ್ ನಿಂದ ದೇಶಭಕ್ತಿ ಗೀತೆ ಕಾಯ೯ಕ್ರಮ ಇದೇ ಸಂದಭ೯ಆಯೋಜಿತವಾಗಿದ್ದು ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮಕ್ಕೆ ಶಕ್ತಿ ಪ್ರತಿಷ್ಟಾನ, ಪತ್ರಿಕಾಭವನ ಟ್ರಸ್ಟ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ಗೌಡ ಸಮಾಜ, ಇನ್ನರ್ ವೀಲ್, ಮಡಿಕೇರಿ ರೋಟರಿ, ಮಡಿಕೇರಿ ರೋಟರಿ ವುಡ್ಸ್, ಸ್ವಾಗತ್ ಡೆಕೋರೇಟರ್ಸ್, ಅತ್ತೂರಿನ ಜ್ಞಾನಗಂಗಾ ರೆಸಿಡೆನ್ಶಿಯಲ್ ಶಾಲೆ, ಶಾಂತಿ ಸಾಗರ್ ರೆಸ್ಟೋರೆಂಟ್ ಮತ್ತು ಕೇಶವ ಪ್ರಸಾದ್ ಮುಳಿಯ ಸಹಯೋಗ ನೀಡಿದ್ದಾರೆ.








