ನೆಲ್ಯಹುದಿಕೇರಿ : ನೆಲ್ಯಹುದಿಕೇರಿ ನಾಲ್ವತ್ತೇಕೆರೆ ಶ್ರೀ ಮಹಾದೇವ ಮಾರಿಯಮ್ಮ ದೇವಸ್ಥಾನದಲ್ಲಿ ನಾಳೆ (ಜು. 29ರಂದು) ನಾಗಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿದೆ.
ಬೆಳಿಗ್ಗೆ 8.30ರಿಂದ 10=30 ರ ತನಕ ವಿಶೇಷ ಪೂಜೆ ನಡೆಯುವುದು. ತಂಬಿಲನೈವೇದ್ಯ ಹರಿದ್ದಾರ್ಚನೆ ಪೂಜೆಗೆ ರೂ 251 ಸಲ್ಲಿಸಬೇಕಾಗುತ್ತದೆ .
ವಸಂತಕುಮಾರ್ ಹೊಸಮನೆ ಮೊಬೈಲ್ 9448433189 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಮಹಾದೇವರ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.








