Breaking News :

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಉತ್ತೇಜಿಸುವ ಯೋಜನೆ

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಉತ್ತೇಜಿಸುವ ಯೋಜನೆ

ಮಡಿಕೇರಿ : ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‍ಐಸಿ) SPREE 2025 (Scheme for promotion of Registration of employers and employees ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಉತ್ತೇಜಿಸುವ ಯೋಜನೆ 2025) ಎಂಬ ನವೀಕೃತ ಯೋಜನೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ನಿಗಮದ 196 ನೇ ಸಭೆಯಲ್ಲಿ ಅನುಮೋದಿಸಿದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಉತ್ತೇಜಿಸುವ ಯೋಜನೆ (SPREE) 2025 ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ದಿನಾಂಕ 1 ನೇ ಜುಲೈ ರಿಂದ 31ನೇ ಡಿಸೆಂಬರ್ 2025 ರವರೆಗೆ ಸಕ್ರಿಯವಾಗಿದ್ದು, ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‍ಐ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಒಂದು ಬಾರಿಯ ಅವಕಾಶವನ್ನು ಒದಗಿಸುತ್ತದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯಡಿ ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‍ಐಸಿ ಪೆÇೀರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ ಪೆÇೀರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗದಾತರು ತಾವು ಘೋಷಿಸಿದ ದಿನಾಂಕದಿಂದ ನೋಂದಣಿಯನ್ನು ಪರಿಗಣಿಸಲಾಗುತ್ತದೆ. ನೋಂದಣಿಯ ಪೂರ್ವ ಅವಧಿಗೆ ಯಾವುದೇ ವಂತಿಗೆ ಮತ್ತು ಸೌಲಭ್ಯವು ಅನ್ವಯವಾಗುವುದಿಲ್ಲ್ಲ. ನೋಂದಣಿಯ ಪೂರ್ವ ಅವಧಿಯ ಯಾವುದೇ ದಾಖಲೆಗಳ ಪರಿಶೀಲನೆ ಅಥವಾ ಬಾಕಿ ಪಾವತಿ ಬೇಡಿಕೆ ಇರುವುದಿಲ್ಲ.

ಈ ಯೋಜನೆಯು ಸ್ವಯಂ ಪ್ರೇರಿತವಾದ ಅನುಸರಣೆಯನ್ನು ಪೆÇ್ರೀತ್ಸಾಹಿಸಿ, ಹಿಂದಿನ ಅವಧಿಗೆ ದಂಡ ಪಾವತಿ ಹೋಗಲಾಡಿಸಿ, ನೋಂದಾವಣಿಯ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ, SPREE 2025 ನ್ನು ಅನುಮೋದಿಸುವ ಮೊದಲು ನಿಗಧಿತ ಅವಧಿಯಲ್ಲಿ ನೋಂದಾವಣೆ ಮಾಡದಿದ್ದಲ್ಲಿ ಕಾನೂನು ಕ್ರಮ ಹಾಗೂ ಹಿಂದಿನ ಅವಧಿಯ ಬಾಕಿ ಬೇಡಿಕೆಗೆ ಕಾರಣವಾಗುತ್ತಿತ್ತು, SPREE 2025 ಈ ಅಡೆತಡೆಗಳನ್ನು ನಿವಾರಿಸಿ ನೋಂದಾವಣೆಯಿಂದ ಬಿಟ್ಟುಹೋದ ಘಟಕಗಳು ಮತ್ತು ಕಾರ್ಮಿಕರನ್ನು ಇಎಸ್‍ಐ ವ್ಯಾಪ್ತಿಯೊಳಗೆ ಸೇರಿಸಿ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುತ್ತದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ-2025 ರ ಪ್ರಾರಂಭವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಯ ಬೇಡಿಕೆಯಿಲ್ಲದೆ ನೋಂದಾವಣೆಯಾಗಿ ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ. ಈ ಯೋಜನೆಯು ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬಧ್ಧಗೊಳಿಸುವಿಕೆಯನ್ನು ಪೆÇ್ರೀತ್ಸಾಹಿಸುವುದಲ್ಲದೆ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ಗುತ್ತಿಗೆ ವಲಯದ ಕಾರ್ಮಿಕರು ಇಎಸ್‍ಐ ಕಾಯ್ದೆಯಡಿಯಲ್ಲಿ ದೊರೆಯುವ ಅಗತ್ಯ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ. ಇದರೊಂದಿಗೆ ಇಎಸ್‍ಐಸಿಯು ಅಗತ್ಯ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತದ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಮೈಸೂರು ಕಾ.ರಾ.ವಿ.ನಿ. ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

 

Share this article

ಟಾಪ್ ನ್ಯೂಸ್

More News