ವಿರಾಜಪೇಟೆ ಸುಂಕದಕಟ್ಟೆ ಬಳಿ ಚಿರತೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ
ವಿರಾಜಪೇಟೆ : ನೆನ್ನೆ ರಾತ್ರಿ 7.30 ಗಂಟೆ ಸುಮಾರಿಗೆ ವಿರಾಜಪೇಟೆ ವ್ಯಾಪ್ತಿಯ ಸುಂಕದಕಟ್ಟೆ ಡೆಂಟಲ ಕಾಲೇಜ್ ಗೆ ಹೋಗುವ ರಸ್ತೆಯಿಂದ ಸಿದ್ದಾಪುರ ರಸ್ತೆ ಕಡೆಗೆ ಚಿರತೆಯೊಂದು ಹಾದು ಹೋಗುವ ದೃಶ್ಯ ಕಂಡು ಬಂದಿದೆ. ಚಿರತೆ ರೋಡ್ ಕ್ರಾಸ್ ಮಾಡುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರು ಎಚ್ಚರದಿಂದ ಇರುವಂತೆ ಕೋರಲಾಗಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿರಾಜಪೇಟೆ ವ್ಯಾಪ್ತಿಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಗಿತ್ತು.








