ಸಿದ್ದಾಪುರ ಮುತ್ತಪ್ಪ ದೇವಾಲಯದಲ್ಲಿ ಶ್ರಾದ್ಧಭಕ್ತಿಯಿಂದ ನಾಗರ ಪಂಚಮಿ ಆಚರಣೆ
ಸಿದ್ದಾಪುರ : ಶ್ರಾವಣ ಮಾಸದ ಮೊದಲ ಹಬ್ಬನಾಗರ ಪಂಚಮಿ ಹಬ್ಬಯನ್ನು ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹರಕೆ ಹೊತ್ತ ಹಲವು ಭಕ್ತರು ನಾಗರ ಪಂಚಮಿಯ ಅಂಗವಾಗಿ ಇಲ್ಲಿನ ದೇವಾಲಯದ ನಾಗರ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಆವರಣದಲ್ಲಿರುವ ನಾಗನ ಕಟ್ಟೆಗೆ ಸಂಪ್ರದಾಯದಂತೆ ಹಾಲು ಎರೆಯುವುದು, ಎಳ ನೀರು ಸೇವೆ, ಕ್ಷೀರಾಭಿಷೇಕ ಸೇರಿದಂತೆ ಮತ್ತಿತರ ವಿಶೇಷ ಪೂಜೆ ಕೈಂಕರ್ಯಗಳು ನಡೆದವು.
ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.









