ಬಂಟರ ಶಾಂತಿ ಧಾಮ ಅಭಿವೃದ್ಧಿ ಗೆ ಡಾ.ಮಂತರ್ ಗೌಡ ರಿಂದ 10 ಲಕ್ಷ ರೂಗಳ ಅನುದಾನ
ಮಡಿಕೇರಿ : ನಗರದಲ್ಲಿರುವ ಕೊಡಗು ಜಿಲ್ಲಾ ಬಂಟರ ಶಾಂತಿ ಧಾಮ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಹತ್ತು ಲಕ್ಷರೂಗಳ ಅನುದಾನವನ್ನು ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ್ದಾರೆ.
ಮಡಿಕೇರಿ ನಗರ ಬಂಟರ ಸಂಘದ ಕೋರಿಕೆ ಮೇರೆಗೆ ಕಾಂಕ್ರೀಟ್ ರಸ್ತೆ,ಇಂಟರ್ ಲಾಕ್ ಅಳವಡಿಕೆ ಮತ್ತು ಶೆಡ್ ನಿರ್ಮಾಣದ ಉದ್ದೇಶಕ್ಕೆ ಅನುದಾನವನ್ನು ನೀಡಿದ್ದು ಇಂದು ನಗರ ಸಭೆಯ ಇಂಜಿನಿಯರ್ ಹೇಮ ಕುಮಾರ್ ರವರು ನಗರ ಬಂಟರ ಸಂಘದ ಅಧ್ಯಕ್ಷರಾದ ಪ್ರಭುರೈ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ರವಿ ಗೌಡ ರವರ ಸಮ್ಮುಖದಲ್ಲಿ ಕಾಮಗಾರಿಗೆ ಸಂಭಂದಿಸಿದಂತೆ ಸ್ಥಳ ಪರಿಶೀಲನೆ ನಡಸಿದರು.
ಶಾಸಕರಾದ ಡಾ ಮಂತರ್ ಗೌಡರವರ ನಿರ್ದೇಶನದ ಮೇರೆಗೆ ಅಂದಾಜು ಪಟ್ಟಿ ತಯಾರಿಸಿ ತಾಂತ್ರಿಕ ಅನುಮೋದನೆ ನೀಡಲಾಗುವುದು ಎಂದು ಇಂಜಿನಿಯರ್ ಹೇಮ ಕುಮಾರ್ ಮಾಹಿತಿ ನೀಡಿದ್ದಾರೆ.








