Breaking News :

ಮೇಕೇರಿ ಶಕ್ತಿ ನಗರದ ನಿವಾಸಿಗಳಿಗೆ ಶಾಸಕ ಪೊನ್ನಣ್ಣ ನೆರವು

ಮಡಿಕೇರಿ : ಕಳೆದ ಕೆಲದಿನಗಳಿಂದ ಸುರಿದ ಭಾರಿ ಮಳೆಗೆ ಬರೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು, ನಾಪೋಕ್ಲು ಬ್ಲಾಕ್ ಮೇಕೇರಿ ಗ್ರಾಮದ ಶಕ್ತಿನಗರ ಕಾಲೋನಿ ನಿವಾಸಿಗಳಿಗೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ತಮ್ಮ ಸ್ವಂತ ವೆಚ್ಚದಲ್ಲಿ ಟಾರ್ಪಲ್ ಗಳನ್ನು ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ.

ಕಾರ್ಯನಿಮಿತ್ತ ಬೆಂಗಳೂರಿನಲ್ಲಿರುವ ಶಾಸಕರು, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ ಮುಖಾಂತರ ಸಂತ್ರಸ್ತರಿಗೆ ಟಾರ್ಪಲ್ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮೇಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಪೂಜಾರಿರ ಧ್ರುವ, ಹಾಕತ್ತೂರು ವಲಯ ಅಧ್ಯಕ್ಷ ಪಿಯೂಷ್ ಪೆರೇರ, ಗ್ರಾಮ ಪಂಚಾಯತ್ ಸದಸ್ಯ ಹನೀಫ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಶೀರ್, ಸ್ಥಳೀಯ ಪ್ರಮುಖರಾದ ಹ್ಯಾರಿಸ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕರ ಸಂದೇಶವನ್ನು ಜನರಿಗೆ ತಲುಪಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಬೆಂಗಳೂರಿಂದ ಹಿಂತಿರುಗಿದ ಕೂಡಲೇ ಎಲ್ಲರನ್ನು ಖುದ್ದಾಗಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರದ ಕುರಿತು ವ್ಯವಸ್ಥೆ ಮಾಡುವುದಾಗಿ ಹೇಳಿದರು.

Share this article

ಟಾಪ್ ನ್ಯೂಸ್

More News