ಪ್ಲೀಸ್ ನೀವಾದ್ರೂ ಮನೆ ಕೊಡ್ಸಿ ಸಾ*ರ್ ಎಂದು ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಅಂಗಲಾಚಿದ ಮಹಿಳೆ.!
ಮಡಿಕೇರಿ : ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಪರಿಶೀಲನೆಗೆಂದು ತೆರಳಿದ್ದ ಸಂದರ್ಭ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯ ಕಾಲಿಗೆ ಬಿದ್ದು ಮನೆ ಕೊಡ್ಸಿ ಸಾರ್ ಎಂದು ಕಣ್ಣೀರಿಟ್ಟ ಪ್ರಸಂಗ ಮಡಿಕೇರಿಯಲ್ಲಿ ನಡೆದಿದೆ.
ಐದು ವರ್ಷದ ಹಿಂದೆ ಮನೆ ಕಳೆದುಕೊಂಡಿದ್ದೇನೆ. ನನಗೆ ಗಂಡ ಇಲ್ಲ. ಮನೆ ಮಾಡಿ ಕೊಡ್ತೇನೆ ಅಂತ ಹೇಳಿ ಇಲ್ಲಿವರೆಗೆ ಯಾರೂ ಮಾಡಿಕೊಟ್ಟಿಲ್ಲ. ದಯವಿಟ್ಟು ನೀವಾದ್ರು ಮನೆ ಮಾಡ್ಸಿ ಕೊಡಿ ಅಂತ ಡಿಸಿ ಕಾಲಿಗೆ ಬಿದ್ದು ವೃದ್ಧ ಮಹಿಳೆ ಅಂಗಲಾಚಿದ್ದಾರೆ. ಈ ಸಂದರ್ಭ ಡಿಸಿ ಜತೆಗಿದ್ದ ಮಡಿಕೇರಿ ತಾಲೂಕು ತಹಶೀಲ್ದಾರರು ಮಹಿಳೆಯ ವಿವರ ಹಾಗೂ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದು, ಶೀಘ್ರವಾಗಿ ಪ್ರಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.








