ಮತ್ತೆ ಹುಲಿ ಹೆಜ್ಜೆ ಪತ್ತೆ : ಹೆಚ್ಚಾದ ಆತಂಕ, ಕ್ಯಾಮರ ಅಳವಡಿಕೆಗೆ ಸ್ಥಳೀಯರ ಒತ್ತಾಯ
ಸಿದ್ದಾಪುರ: ನೆನ್ನೆ ಗುಹ್ಯ ವ್ಯಾಪ್ತಿಯ ಕೋಟನ್ ಎಸ್ಟೇಟ್ ಬಳಿ ಹುಲಿ ಹೆಜ್ಜೆ ಗುರುತು ಪತ್ತೆಯಾಗುವ ಮೂಲಕ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇಂದು ಸಮೀಪದ ವಾರ್ನಾಂಡಿ ಎಸ್ಟೇಟ್ ಕಡೆಗೆ ಹೋಗಿರುವ ಗುರು ಪತ್ತೆಯಾಗಿದ್ದು ಜನ ಜಾಗೃತೆ ವಹಿಸುವಂತೆ ತೋಟದ ವ್ಯವಸ್ಥಾಪಕ ದಾಸನ್ ಮಾಹಿತಿ ನೀಡಿದ್ದು, ಆತಂಕ ಗೊಂಡಿರುವ ಸ್ಥಳೀಯರು ಇಲಾಖೆಯಿಂದ ಹುಲಿ ಚಲನವಲನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಕ್ಯಾಮರ ಅಳವಡಿಸುವಂತೆ ಆಗ್ರಹಿಸಿದ್ದಾರೆ.








