ಪೊನ್ನಂಪೇಟೆ ಸಮೀಪ ರಸ್ತೆ ಮಧ್ಯೆ ಮಗುಚಿ ಬಿದ್ದ ಲಾರಿ : ಕುಟ್ಟ ಪೊನ್ನಂಪೇಟೆ ಸಂಪರ್ಕ ಕಡಿತ
ಮಡಿಕೇರಿ : ಪೊನ್ನಂಪೇಟೆ ಕುಟ್ಟ ರಾಜ್ಯ ಹೆದ್ದಾರಿ ಕಾನೂರು ಮಾರ್ಗದಲ್ಲಿ ಬೆಕ್ಕೆಸುಡ್ಲೂರು ಸಮೀಪ ಸರಕು ತುಂಬಿದ ಲಾರಿವೊಂದು ರಸ್ತೆ ಮಧ್ಯದಲ್ಲಿ ಮಗುಚಿಬಿದ್ದ ಘಟನೆ ನೆನ್ನೆ ತಡರಾತ್ರಿ ನಡೆದಿದೆ. ಲಾರಿ ಮಗುಚಿಬಿದ್ದ ಪರಿಣಾಮ ಕುಟ್ಟ ಪೊನ್ನಂಪೇಟೆ ನಡುವಿನ ರಸ್ತೆ ಸಂಪರ್ಕ ಕಡಿತವಾಗಿತ್ತು.
ಲಾರಿಯಲ್ಲಿ ತುಂಬಲಾದ ಸರಕು ಹಾಗೂ ಇರುವವರ ಬಗ್ಗೆ ಮತ್ತು ಅವರ ಯೋಗ ಕ್ಷೇಮದ ಬಗ್ಗೆ ಯಾವುದೇ ಮಾಹಿತಿ ತಡರಾತ್ರಿವರೆಗೆ ಲಭ್ಯವಾಗಿರುವುದಿಲ್ಲ.








