Breaking News :

ಕಾವಾಡಿಯಲ್ಲಿ ಕಥೆ ಹೇಳುವ ಸ್ಪರ್ಧೆ : ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ – ಬಾಚರಣಿಯಂಡ .ಪಿ.ಅಪ್ಪಣ್ಣ.

 


ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘ , ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನಿಂದ ಕಥಾ ಸಮಯ  

ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ – ಬಾಚರಣಿಯಂಡ ಪಿ. ಅಪ್ಪಣ್ಣ


ಮಡಿಕೇರಿ : ಜಾನಪದ ಕಥೆಗಳು ಪ್ರಕೖತ್ತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದ್ದಾರೆ.

ಕೊಡಗು ಪತ್ರಕತ೯ರ ಸಂಘದ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಪತ್ರಕತ೯ರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ – ಕಥೆ ಹೇಳುವ ಸ್ಪಧೆ೯ಯ ತೀಪು೯ಗಾರರಾಗಿ ಅವರು ಮಾತನಾಡಿದರು. 1940 ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕನಾ೯ಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತ್ತು ಎಂದೂ ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು. ನಾಡಿನ ಹೆಮ್ಮೆಯ ಕಥೆಗಾರರಾಗಿದ್ದ ಪೂಣ೯ಚಂದ್ರ ತೇಜಸ್ವಿ ನಮ್ಮಿಂದ ಮರೆಯಾಗಿದ್ದರೂ ಅವರ ಸಾಹಿತ್ಯ ಕೖತಿಗಳು ಸದಾ ಲೇಖಕರಿಗೆ ನವಚೈತನ್ಯ ನೀಡುವಂತಿದೆ. ಇಂಥ ಸಾಹಿತ್ಯ ಕೖತಿಗಳನ್ನು ವಿದ್ಯಾಥಿ೯ಗಳು ಹೆಚ್ಚು ಓದಿ ಜ್ಞಾನವಂತರಾಗಬೇಕೆಂದೂ ಅವರು ಕರೆ ನೀಡಿದರು.

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್. ಟಿ. ಕಥಾ ಸಮಯ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಕಾಲಘಟ್ಟದಲ್ಲಿ ಕಥೆ ಹೇಳಲು ಅಮ್ಮ- ಅಪ್ಪನಿಗೆ ವ್ಯವಧಾನವಿಲ್ಲ. ಕಥೆ ಕೇಳಲೂ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಮಕ್ಕಳಿಗೆ ಆಸಕ್ತಿ ಇಲ್ಲದಂತಾಗಿದೆ. ಇಂಥ ಕಾಲದಲ್ಲಿ ಕಥಾ ಸಮಯದಂಥ ಕಾಯ೯ಕ್ರಮಗಳು ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕಥೆಗಳನ್ನು ಕೇಳುವ ಹೊಸ ಚಿಂತನೆ ಸೖಷ್ಟಿಸುವಂತಾಗಬೇಕೆಂದು ಸಲಹೆ ನೀಡಿದರು. ಜಾನಪದದ ಕಥೆಯ ಹಾಡಾಗಿರುವ ಧರಣಿ ಮಂಡಲವು ಎಂದೆಂದಿಗೂ ಗೋವುಗಳ ಮಹತ್ವ ಸಾರುತ್ತವೆ. ಕಥಾ ಸಮಯ ಕಾಯ೯ಕ್ರಮ ಗೋಶಾಲೆಯಲ್ಲಿಯೇ ಆಯೋಜಿತವಾಗಿರುವುದು ವಿಶೇಷ ಎಂದೂ ಅನಿಲ್ ಹೇಳಿದರು.

ಹಿರಿಯ ಲೇಖಕ ಬಾರಿಯಂಡ ಜೋಯಪ್ಪ ಮಾತನಾಡಿ, ಕಾಲ ಬದಲಾದರೂ ಇತಿಹಾಸವನ್ನು ಮರೆಯದೇ ಇತಿಹಾಸದ ಪ್ರಮುಖ ಕಥೆಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರಲ್ಲದೇ, ಹಳೇ ಕಾಲದಲ್ಲಿ ದಟ್ಟಾರಣ್ಯದ ನಡುವೇ ಒಂಟಿ ಮನೆಗಳಲ್ಲಿ ಜನ ವಾಸವಾಗಿದ್ದರೂ ವನ್ಯಜೀವಿಗಳ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ ಬದಲಾದ ಕಾಲದಲ್ಲಿ ನಾಡಿಗೇ ವನ್ಯಜೀವಿಗಳು ನುಗ್ಗಿ ದಾಂಧಲೆ ಸೖಷ್ಟಿಸುತ್ತಿವೆ. ವನ್ಯಜೀವಿ- ಮಾನವನ ನಡುವಿನ ಸೌಹಾಧ೯ ಸಂಬಂಧಿತ ಕಥೆಗಳೂ ಇಂದಿನ ಅಗತ್ಯದಂತಿದೆ ಎಂದರು. ಕಥಾ ಸಮಯದಂಥ ಚಿಂತನೆಗೊಡ್ಡುವ ಕಾಯ೯ಕ್ರಮಗಳು ಅತ್ಯಂತ ಮೌಲ್ಯಯುತವಾಗಿದೆ ಎಂದೂ ಅವರು ಬಣ್ಣಿಸಿದರು.

ಅಸೀಮಾ ಮಾಸ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಸೖಷ್ಟಿಯ ಪ್ರತೀ ಅಂಶದಲ್ಲಿಯೂ ಒಂದೊಂದು ಕಥೆಯಿದೆ. ಬೇರೊಬ್ಬರ ಕಣ್ಣಲ್ಲಿ ಪ್ರತೀಯೋವ೯ರೂ ಒಂದು ಕಥೆಯಾಗುತ್ತೇವೆ ಎಂದರಲ್ಲದೇ ಕೂಡುಕುಟುಂಬ ಪದ್ದತಿ ಕಡಮೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ಕಥೆಗಳಲ್ಲ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ನಾದಿನಿಯ ಪಾತ್ರಗಳೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂಥ ಸಂಬಂಧಗಳ ಬಗ್ಗೆ ಮಕ್ಕಳಿಗೆ ಗೊತ್ತೇ ಇಲ್ಲದಾದಾಗ ಆ ಪಾತ್ರಗಳನ್ನು ಕಥೆಗಳಲ್ಲಿ ಹೇಗೆ ಸೖಷ್ಟಿಸಲು ಸಾಧ್ಯ ಎಂದೂ ಕಳವಳ ವ್ಯಕ್ತಪಡಿಸಿದರು.

ಕಥೆ ಬರೆಯುವವರು ವಿಮಶ೯ಕರ ವಿಮಶೆ೯ಗಳಿಗೆ ಮನಸ್ಸು ನೋಯಿಸಿಕೊಂಡು ಹೊಸ ಕಥೆಗಳನ್ನು ಬಲಿಗೊಡದಿರಿ. ಕಥೆಗಳು ಪಾತ್ರಗಳಾಗದೇ ಕಥೆಗಳು ಜೀವಂತವಾಗಿರುವಂತೆ ಕಥೆಗಾರರು ಬರೆಯಿರಿ ಎಂದೂ ಸಂತೋಷ್ ತಮ್ಮಯ್ಯ ಸಲಹೆ ಮಾಡಿದರು.

ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನ ರೀತಿಯಲ್ಲಿ ಕಥಾ ಸಮಯ ಆಯೋಜಿಸಿದ್ದು ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದೆ ಎಂದರು. ವಿದ್ಯಾಥಿ೯ಗಳಲ್ಲಿ ಕಥೆ ಬರೆಯಲು ಇಂಥ ಕಾಯ೯ಕ್ರಮ ಪ್ರೋತ್ಸಾಹ ನೀಡುತ್ತದೆ ಎಂದೂ ಅವರು ಹೇಳಿದರು.

ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಯಾವುದೇ ಬರಹ ಆಗಿರಲಿ ಅದರಲ್ಲಿ ಭಾಷಾ ಸೌಂದಯ೯, ಭಾಷೆಯ ಗಟ್ಟಿತನ ಮುಖ್ಯವಾಗಬೇಕು. ಕ್ರಿಯಾತ್ಮಕತೆ ಕಥೆಗಳ ಮೂಲವಾಗಿರಬೇಕು. ಬಾವಿಯೊಳಗಿನ ಕಪ್ಪೆಯಂತೆ ಕಥೆಗಾರನ ಕಥಾ ಸೖಷ್ಯಿ ಇರದೇ ಪ್ರತೀ ಕಥೆಯಲ್ಲಿಯೂ ನಾವೀನ್ಯತೆ ಕಂಗೊಳಿಸಬೇಕೆಂದು ಸಲಹೆ ನೀಡಿದರು.

ಕೊಡಗು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಮಕ್ಕಳಿಗೆ ಕಥೆ ಹೇಳುವ ಮತ್ತು ಕೇಳುವ ಆಸಕ್ತಿ ಇಂದಿಗೂ ಉಳಿದುಕೊಂಡಿದೆ. ಪ್ರತೀ ಕಥೆಯಲ್ಲಿಯೂ ಸಂದೇಶ ಹಾಸುಹೊಕ್ಕಾಗಿರಬೇಕು. ಕಥಾ ಸಮಯದಂಥ ಕಾಯ೯ಕ್ರಮಗಳು ವಿದ್ಯಾಥಿ೯ಗಳ ಪಾಲಿಗೆ ಕಥೆ ಬರೆಯುವ ಕಥಾ ಶಿಬಿರಗಳಂತಿರಬೇಕೆಂದು ಹೇಳಿದರು.

ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ರಾಮಚಂದ್ರ ಭಟ್ ಮಾತನಾಡಿ, ಗೋವುಗಳ ಪಾಲನೆಯಿಂದ ಮನೆ ಸಮೖದ್ದವಾಗುತ್ತದೆ. ಗೋಶಾಲೆಯಲ್ಲಿ ಹುಟ್ಟುಹಬ್ಬ, ವಿವಾಹ ವಾಷಿ೯ಕೋತ್ಸವದಂಥ ಕಾಯ೯ಕ್ರಮಗಳನ್ನು ಆಯೋಜಿಸಿ ಗೋವುಗಳ ಜತೆ ಸೌಹಾದ೯ತೆ ಬೆಳೆಸಿಕೊಳ್ಳಬೇಕು ನಮಗೆ ಗೋವು ಉತ್ಪನ್ನಗಳು ಬೇಕು. ಆದರೆ ಗೋವಿನ ಸಂರಕ್ಷಣೆ ಬೇಡ ಎಂಬ ಧೋರಣೆ ಸರಿಯಿಲ್ಲ ಎಂದೂ ಅವರು ಹೇಳಿದರು. ಗೋವುಗಳ ಸಂರಕ್ಷಣೆಯಾಗದೇ ಹೋದಲ್ಲಿ ಧಮ೯ವೂ ಸಂರಕ್ಷಣೆಯಾಗದು ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕೆಂದೂ ಅವರು ಹೇಳಿದರು. ಗೋವುಗಳ ಜತೆ ಬೆಸುಗೆಯೇ ಒಂದು ಕಥೆಯಾಗುತ್ತದೆ. ಗೋವುಗಳ ನಾಶವಾದರೆ ಅದೂ ಮತ್ತೊಂದು ದುರಂತದ ಕಥೆಯಾದೀತು ಎಂದೂ ಅವರು ಎಚ್ಚರಿಸಿದರು.

ಹಿರಿಯ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಮಾತನಾಡಿ, ಕಥೆ ರಚನೆಯಲ್ಲಿ ಸ್ವಂತಿಕೆ ಹೆಚ್ಚಾಗಿರಲಿ ಎಂದು ಸಲಹೆ ನೀಡಿದರು.

ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಟ್ರಸ್ಟಿ ಕೆ.ಕೆ. ಶ್ಯಾಮ,,ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಉಷಾ ಪ್ರೀತಮ್ ಸ್ವಾಗತಿಸಿ, ನಿರೂಪಿಸಿದರು. ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ವೀರಾಜಪೇಟೆ ತಾಲೂಕು ಸಂಘದ ನಿದೇ೯ಶಕರು, ಸದಸ್ಯರು, ಜಿಲ್ಲಾ ಸಂಘದ ನಿದೇ೯ಶಕರಾದ ಶಿವಪ್ಪ, ಗುರುದಶ೯ನ್, ಸಂಘದ ಸದಸ್ಯರು, ಗೋಶಾಲಾ ಸಂರಕ್ಷಣಾ ಟ್ರಸ್ಟ್ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ವಿದ್ಯಾಥಿ೯ಗಳು, ಸಾವ೯ಜನಿಕರು ಹಾಜರಿದ್ದು ಕಥೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.

ಕಥಾ ಸಮಯ ಸ್ಪಧಾ೯ ವಿಜೇತರು.

ಸಾವ೯ಜನಿಕ ವಿಭಾಗ – ಪ್ರಥಮ – ಕಿಗ್ಗಾಲು ಗಿರೀಶ್ , ದ್ವಿತೀಯ – ಮೀದೇರೀರ ಕವಿತಾ ರಾಮು . ತೖತೀಯ – ಕೂಡಕಂಡಿ ಓಂಶ್ರೀ ದಯಾನಂದ

ಕಾಲೇಜು ವಿಭಾಗ – ಪ್ರಥಮ – ಮದನ್ ಚೇರಂಬಾಣೆ. ದ್ವಿತೀಯ – ರಾದಿಕ. ತೖತೀಯ – ರಕ್ಷಿತಾ

ಪ್ರಾಥಮಿಕ , ಪ್ರೌಡಶಾಲಾ ಶಾಲಾ ವಿಭಾಗ – ಪ್ರಥಮ – ಡೀನ್ಸ್ ಸಾಲ್ವೋ ಡಿಸೋಜಾ, ದ್ವಿತೀಯ – ಹಷ್ಮಿತಾ, ತೖತೀಯ ಎಂ.ಪಿ. ತಷ್ಮಿತ 

Share this article

ಟಾಪ್ ನ್ಯೂಸ್

More News