ಕೂರ್ಗ್ ಸಿನೆಪ್ಲಕ್ಸ್ ಗೋಣಿಕೊಪ್ಪಲು -ಶೀಘ್ರವೇ ಚಿತ್ರಮಂದಿರ ಆರಂಭ
ಗೋಣಿಕೊಪ್ಪ : ಸಿನಿಮಾ ಮನರಂಜನೆಯ ಕ್ಷಾಮ ಎದುರಿಸುತ್ತಿದ್ದ ಗೋಣಿಕೊಪ್ಪಲಿನಲ್ಲಿ ಶೀಘ್ರದಲ್ಲಿಯೇ ನೂತನ ಚಿತ್ರಮಂದಿರ ಪ್ರದರ್ಶನ ಆರಂಭಗೊಳ್ಳಲಿದೆ.
ಗೋಣಿಕೊಪ್ಪಲು ಗ್ರಾಮಾಂತರ ಸಹಕಾರ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣದಲ್ಲಿ 182 ಸೀಟ್ ವ್ಯವಸ್ಥೆ ಇರುವ ಕೂರ್ಗ್ ಸಿನೆಪ್ಲಕ್ಸ್ ನಲ್ಲಿ ಇಂದು ಸರಳವಾಗಿ ಪೂಜಾ ಕಾರ್ಯಕ್ರಮ ನಡೆಯಿತು.
ಗೋಣಿಕೊಪ್ಪಲು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಆಗಸ್ಟ್ 15 ರಂದು ಪ್ರದರ್ಶನ ಆರಂಭಿಸುವ ಉದ್ಧೇಶ ಇದೆಯೆಂದು ಮಾಲೀಕರಲ್ಲಿ ಒಬ್ಬರಾದ ಯು.ಆರ್.ಉಮೇಶ್ ಮಾಹಿತಿ ನೀಡಿದರು.
ಇದೇ ಸಂದರ್ಭ ಮಾರ್ಷಲ್ ಕೆ.ಎಂ., ಆದರ್ಶ್ ಹೆಚ್.ಜಿ., ಲಲಿತಾ ಉಮೇಶ್, ನಿಶ್ಚಲಾ ಆದರ್ಶ್ ಹಾಗೂ ವ್ಯವಸ್ಥಾಪಕರಾದ ಮೋಹನ್ ಇದ್ದರು.








