ಕಾಡಾನೆ ಹಾವಳಿಯಿಂದ ಕಂಗೆಟ್ಟ ಕರಿಕೆ ಗ್ರಾಮಸ್ಥರು : ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ
ಮಡಿಕೇರಿ : ಗಡಿಗ್ರಾಮ ಕರಿಕೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು ರೈತರು ಬೆಳೆದಿದ್ದ ಕೃಷಿ ಫಸಲನ್ನು ನಾಶಪಡಿಸಿವೆ. ಇದರಿಂದ ಬೇಸತ್ತಿರುವ ಇಲ್ಲಿನ ಕೃಷಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಸಿದ್ದಾರೆ.
ಗ್ರಾಮದ ಪಚ್ಚೆ ಪಿಲಾವು ಎಚ್.ಎಂ.ನಂಜುಂಡ ರವರ ತೋಟ ಸೇರಿದಂತೆ ಸುತ್ತಮುತ್ತಲ ರೈತರ ಕೃಷಿ ಫಸಲನ್ನು ನಾಶ ಇದರಿಂದಮಾಡಿದೆ. ಸಮೀಪದ ಹೊಳೆಯನ್ನು ದಾಟಿ ಬಂದಿರುವ ಕಾಡಾನೆಗಳು ಅಡಿಕೆ ಮರ ಮತ್ತು ಬಾಳೆ ಗಿಡಗಳನ್ನು ದ್ವಂಶ ಮಾಡಿದೆ.
ಇದರಿಂದಾಗಿ ರೊಚ್ಚಿಗೆದ್ದಿರುವ ಕೃಷಿಕರು ಈ ಭಾಗದಲ್ಲಿ ಆನೆ ಕಂದಕಗಳನ್ನು ನಿರ್ಮಿಸಿದ್ದರು ಹೊಳೆಯನ್ನು ದಾಟಿಬರುತ್ತಿರುವ ಕಾಡಾನೆಗಳು ರೈತರು ಬೆಳೆದಿರುವ ಕೃಷಿ ಫಸಲನ್ನು ನಿರಂತರವಾಗಿ ನಾಶಪಡಿಸುತ್ತಿದ್ದು, ಇಲ್ಲಿನ ಬೆಳಗಾರರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಆದುದ್ದರಿಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆನೆಗಳು ಹೊಳೆ ದಾಟಿ ಬಾರದಂತೆ ತಡೆಗೋಡೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
✒️ ಶಿವಗಿರಿ ರಾಜೇಶ್ ಕರಿಕೆ








