Breaking News :

ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾಥಿ೯ಗಳಿಗೆ ವಿದ್ಯಾನಿಧಿ ನೀಡಿಕೆ : ಅಂಕಗಳಿಕೆಗಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯವಾಗಬೇಕು – ಎಂ.ಎ.ನಿರಂಜನ್


ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾಥಿ೯ಗಳಿಗೆ ವಿದ್ಯಾನಿಧಿ ನೀಡಿಕೆ : ಅಂಕಗಳಿಕೆಗಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯವಾಗಬೇಕು – ಎಂ.ಎ.ನಿರಂಜನ್


ಮಡಿಕೇರಿ : ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾಥಿ೯ಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾಥಿ೯ಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂವ೯ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ.

ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕತ೯ರ 47 ವಿದ್ಯಾಥಿ೯ಗಳಿಗೆ 2.19ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾಯ೯ಕ್ರಮಕ್ಕೆ ಚಾಲನೆ ನೀಡಿ ನಿರಂಜನ್ ಮಾತನಾಡಿದರು.

ಪತ್ರಕತ೯ರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್ ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೇ, ಜಿಲ್ಲೆಯಾದ್ಯಂತಲಿನ ಪತ್ರಕತ೯ರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ನಿರಂಜನ್ ಹೇಳಿದರು.

ಹಿಂದಿನ ಕಾಲದಲ್ಲಿ ಮನೆಯೊಳಕ್ಕೆ ಆಟದ ಮೈದಾನದಿಂದ ಮಕ್ಕಳನ್ನು ಕರೆತರುವುದೇ ಪೋಷಕರಿಗೆ ಸಮಸ್ಯೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ದಾಸರಾಗಿರುವ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕರೆತರುವುದೇ ಪೋಷಕರ ಪಾಲಿಗೆ ಸವಾಲಾಗಿದೆ ಎಂದು ವಿಷಾಧಿಸಿದ ನಿರಂಜನ್, ಪೋಷಕರಾಗಿ ನಾವೇನು ಮಾಡುತ್ತೇವೆಯೋ ಅದನ್ನೇ ಮಕ್ಕಳೂ ಅನುಸರಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಈಗಿನ ಮಕ್ಕಳು ತಗ್ಗಿಬಗ್ಗುವುದಕ್ಕೆ ವಿನಯವಂತಿಕೆ ಕಾರಣ ಎಂದು ಭಾವಿಸುವುದಕ್ಕಿಂತ ಮೊಬೈಲ್ ನಲ್ಲಿ ಹುದುಗಿ ಹೋಗಿ ಕತ್ತು ತಗ್ಗಿಬಗ್ಗಿರುವುದೇ ಮುಖ್ಯ ಕಾರಣ ಎಂದೂ ನಿರಂಜನ್ ಮೊಬೈಲ್ ವ್ಯಸನದ ಮಕ್ಕಳ ಬಗ್ಗೆ ವಿಶ್ಲೇಷಿಸಿದರು. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಮಕ್ಕಳು ಮೂಕರಂತೆ ಸಂಜ್ಞೆಗಳನ್ನು ಬಳಸಿಯೇ ವ್ಯವಹರಿಸುವ ಕಾಲವೂ ದೂರವಿಲ್ಲ ಎಂದೂ ಅವರು ಎಚ್ಚರಿಸಿದರು.

ಕೊಡಗು ಜಿಲ್ಲೆ ಕಿರಿಯರಿಲ್ಲದೇ ಹಿರಿಯರ ಬೀಡಾಗುತ್ತಿದೆ. ಉದ್ಯೋಗವರಸಿ ಕಿರಿಯರು ಮಹಾನಗರಗಳಿಗೆ ತೆರಳಿ ಹಿರಿಯರು ಮಾತ್ರ ಕೊಡಗಿನಲ್ಲಿರುವಂತಾಗಿದೆ. ಅಲೆಮಾರಿಗಳಂತೆ ಕೊಡಗಿನಿಂದ ವಿಮುಖರಾಗುತ್ತಿರುವ ಯುವಪೀಳಿಗೆಯನ್ನು ಮತ್ತೆ ಕೊಡಗಿನತ್ತ ಕರೆತರುವ ಪ್ರಯ್ತನವಾಗಬೇಕೆಂದೂ ನಿರಂಜನ್ ಹೇಳಿದರು.

ಆಸ್ಪತ್ರೆ, ಸೆರೆಮನೆ ಮತ್ತು ಶವಾಗಾರಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಲ್ಲಿನ ಸ್ಥಿತಿಗತಿ ಪರಿಚಯಿಸಿದರೆ ಜೀವನಮೌಲ್ಯದ ಅರಿವುಂಟಾಗುತ್ತದೆ ಎಂದೂ ಅವರು ಹೇಳಿದರು.

ತನ್ನ ಪುತ್ರ ತನ್ಮಯ್ ಎಸ್ ಎಸ್ ಎಲ್ ಸಿಯಲ್ಲಿ 625 ಅಂಕಗಳಿಗೆ 625 ರಷ್ಟು ಸಂಪೂಣ೯ ಅಂಕಗಳಿಸಿದ್ದರೂ ಸಕಾ೯ರ ಸನ್ಮಾನದ ಗೌರವ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನೀಡಲಿಲ್ಲ ಎಂದು ವಿಷಾಧಿಸಿದ ನಿರಂಜನ್ . ಹೀಗಾಗದೇ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ಭವಿಷ್ದದ ಶಿಕ್ಷಣಕ್ಕೆ ಪ್ರಯೋಜನಕಾರಿಯಾದ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ೯ರ ಗಮನ ಹರಿಸಿದರೆ ಸಾಧಕ ವಿದ್ಯಾಥಿ೯ಗಳಿಗೆ ಸಕಾ೯ರ ನಿಜವಾದ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದೂ ಸಲಹೆ ನೀಡಿದರು.

ಪತ್ರಿಕಾಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ಚಿಂತನೆಯೊಂದಿಗೆ ಪತ್ರಿಕಾಭವನ ಟ್ರಸ್ಟ್ ಕಾಯ೯ನಿವ೯ಹಿಸುತ್ತಿದ್ದು, ಮುಂದಿನ ಅಕ್ಟೋಬರ್ ನಿಂದ ಪತ್ರಿಕಾಭವನ ಟ್ರಸ್ಟ್ ನ ಬೆಳ್ಳಿ ಮಹೋತ್ಸವ ಕಾಯ೯ಕ್ರಮಗಳು ಪ್ರಾರಂಭವಾಗಲಿದೆ ಎಂದು ಹೇಳಿದರು. ಜಿಲ್ಲೆಯ ವಿದ್ಯಾಥಿ೯ಗಳೊಂದಿಗೆ ಸಮಾಜಮುಖಿಯಾಗಿರುವ ಅನೇಕ ಸಂಘಸಂಸ್ಥೆಗಳಿಗೆ ಪತ್ರಿಕಾಭವನ ಟ್ರಸ್ಟ್ ನೆರವಾಗುತ್ತಿದೆ ಎಂದೂ ರಮೇಶ್ ಹೇಳಿದರು.

ಪತ್ರಿಕಾಭವನ ಟ್ರಸ್ಟ್ ನ ಟ್ರಸ್ಟಿ ಜಿ.ಚಿದ್ವಿಲಾಸ್ ಮಾತನಾಡಿ, ಹಳೇ ಕಾಲದಲ್ಲಿ ಯಾರಿಗಾದರೂ ದಾನ ಕೊಟ್ಟದ್ದು ಬೇರೆಯವರಿಗೆ ಗೊತ್ತಾಗಬಾರದು ಎಂಬ ಮನೋಭಾವವಿತ್ತು. ಆದರೆ ಈಗಿನ ಕಾಲದಲ್ಲಿ ದಾನ, ಕೊಡುಗೆ ನೀಡಿದ್ದು ಸಾವ೯ಜನಿಕವಾಗಿ ತಿಳಿದಾಗ ಅಂಥ ದಾನಿಗಳಿಗೆ ತೖಪ್ತಿಯಾಗುತ್ತದೆಯಲ್ಲದೇ, ಇತರ ದಾನಿಗಳಿಗೂ ಕೊಡುಗೆ ನೀಡಲು ಪ್ರೇರಣೆಯಾಗುತ್ತದೆ ಎಂದರು. ವಿದ್ಯಾನಿಧಿ ಪಡೆದುಕೊಂಡ ವಿದ್ಯಾಥಿ೯ಗಳು ತಮ್ಮ ಹೊಣೆಗಾರಿಕೆ ಹೆಚ್ಚಾಗಿದೆ ಎಂಬ ಮನೋಭಾವನೆಯಿಂದ ಶೈಕ್ಷಣಿಕ ಸಾಧನೆಯತ್ತ ಹೆಚ್ಚಿನ ಗಮನ ನೀಡಬೇಕೆಂದೂ ಚಿದ್ವಿಲಾಸ್ ಕರೆ ನೀಡಿದರು.

ಪತ್ರಿಕಾಭವನ ಟ್ರಸ್ಟ್ ಪ್ರದಾನ ಕಾಯ೯ದಶಿ೯ ಎಸ್.ಜಿ. ಉಮೇಶ್ ಮಾತನಾಡಿ, ಕಳೆದ ವಷ೯ ಜಿಲ್ಲೆಯ 36 ವಿದ್ಯಾಥಿ೯ಗಳಿಗೆ 1.60 ಲಕ್ಷ ರು. ವಿದ್ಯಾನಿಧಿ ವಿತರಿಸಿದ್ದ ಟ್ರಸ್ಟ್ ಎರಡನೇ ವಷ೯ದಲ್ಲಿ 48 ವಿದ್ಯಾಥಿ೯ಗಳಿಗೆ 2.19 ಲಕ್ಷ ರುಪಾಯಿಗಳಷ್ಟು ವಿದ್ಯಾನಿಧಿಯನ್ನು ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಭವನ ಟ್ರಸ್ಟ್ ನ ಟ್ರಸ್ಟಿಗಳಾದ ಅನಿಲ್ ಹೆಚ್.ಟಿ. ನಿರೂಪಿಸಿ, ಖಜಾಂಜಿ ಕೆ. ತಿಮ್ಮಪ್ಪ ಸ್ವಾಗತಿಸಿ, ಮುಲ್ಲೇಂಗಡ ಮಧೋಷ್ ಪೂವಯ್ಯ ವಂದಿಸಿದ ಕಾಯ೯ಕ್ರಮದಲ್ಲಿ ನವೀನ್ ಚಿಣ್ಣಪ್ಪ ಪ್ರಾಥಿ೯ಸಿದರು. ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ವಿ.ಪಿ.ಸುರೇಶ್ ಹಾಜರಿದ್ದರು.

ಮಡಿಕೇರಿಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಿಂದ ಪತ್ರಕತ೯ರು, ಕುಟುಂಬ ವಗ೯ಕ್ಕೆ ರಾಖಿ ಕಟ್ಟಿ ಸಿಹಿ ನೀಡಿ ಶುಭ ಹಾರೈಸಲಾಯಿತು. ಈ ಸಂದಭ೯ ಮಾತನಾಡಿದ ಸಂಸ್ಥೆಯ ಪ್ರಮುಖರಾಧ ಧನಲಕ್ಷ್ಮಿ, ಇಡೀ ವಿಶ್ವವೇ ನಮ್ಮೆಲ್ಲರ ಪರಿವಾರ ಎಂಬುದನ್ನು ನೆನಪಿಸುವಂಥ ರಕ್ಷೆಯನ್ನು ಪ್ರತೀಯೋವ೯ರೂ ಸಂರಕ್ಷಿಸಿಕೊಳ್ಳುವಂತೆ ಕರೆ ನೀಡಿದರು. ದೇಹದೊಳಗಿನ ಅಗೋಚರ ಶಕ್ತಿಯಂತಿರುವ ಪರಮಾತ್ಮನ ಸಾನಿಧ್ಯವನ್ನು ಪ್ರತೀಯೋವ೯ರು ಕಂಡುಕೊಳ್ಳುವಂತಾಗಬೇಕೆಂದು ಅವರು ಹೇಳಿದರು. ಶಕ್ತಿ ಸ್ವರೂಪಿಯಾಗಿರುವ ಧ್ಯಾನವನ್ನು ಪ್ರತೀಯೋವ೯ರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತೀಯೋವ೯ರು ತಮ್ಮದೇ ಆದ ಸಮಯ ಮೀಸಲಿಡಬೇಕೆಂದೂ ಧನಲಕ್ಷ್ಮಿ ಹೇಳಿದರು. ಧ್ಯಾನದ ಮೂಲಕ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ಬ್ರಹ್ಮಕುಮಾರಿ ಸಂಸ್ಥೆಯ ರಮಾದೇವಿ, ಸುರೇಶ್ ಕಾರಂತ್ ಹಾಜರಿದ್ದರು.

Share this article

ಟಾಪ್ ನ್ಯೂಸ್

More News