ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರೋತ್ಸವ ಆಚರಣೆ
ಸಿದ್ದಾಪುರ : ಮಡಿಕೇರಿ ರಸ್ತೆಯಲ್ಲಿ ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಮಾಜಿ ಯೋಧ ಶಬೀರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಪಡೆಯಲು ಹಿರಿಯರು ಅನುಭವಿಸಿದ ನೋವು ಅವರ ತ್ಯಾಗ ಬಲಿದಾವನ್ನು ಸ್ಮರಿಸಿದರು
ಇದೇ ಸಂದರ್ಭ ಮಾಜಿ ಸೈನಿಕ ಶಬೀರ್ ಹಾಗೂ ಸಿದ್ದಾಪುರ ಪಂಚಾಯ್ತಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟೂರಿಸ್ಟ್ ಟ್ಯಾಕ್ಸಿ ಚಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







