ಜನವಾಹಿನಿ NEWS ಮಡಿಕೇರಿ : ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್ ದೊಡ್ಡಮಳ್ತೆ ಗ್ರಾಮ, ಇವರ ಸಹಯೋಗದೊಂದಿಗೆ ಶ್ರೀ ಸ್ವರ್ಣಗೌರಿ ಮಹೋತ್ಸವನ ಅಂಗವಾಗಿ ಬಾಗಿನ ಅರ್ಪಣೆ ಕಾರ್ಯಕ್ರಮವು ಆಗಸ್ಟ್, 26 ರಂದು ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ದೊಡ್ಡಮಳ್ತೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಹೊನ್ನಮ್ಮನ ಕೆರೆಯಲ್ಲಿ ನಡೆಯಲಿದೆ.
ಮೈಸೂರು ಕೊಡಗು ಲೋಕಾಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ವಿಧಾನ ಪರಿಷತ್ ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಬಿ.ಎ.ಜೀವಿಜಯ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್, ಅರಕಲಗೂಡು ವಿಧಾನಸಭಾ ಕ್ಷೇತ್ರ ಶಾಸಕರಾದ ಎ.ಮಂಜು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಜಿ.ಪಂ.ಮಾಜಿ ಅಧ್ಯಕ್ಷರಾದ ಚಂದ್ರಕಲಾ, ಗ್ರಾ.ಪಂ. ಅಧ್ಯಕ್ಷರಾದ ಹೆಚ್.ಎಂ.ಗೋಪಾಲಕೃಷ್ಣ, ಪ್ರಾ.ಕೃ.ಪ ಸ.ಸಂ ಗೌಡಳ್ಳಿ ಅಧ್ಯಕ್ಷರಾದ ಹೆಚ್.ಆರ್ ಸುರೇಶ್, ಬೆಂಗಳೂರು ರಾಜ್ಯ ವಕ್ಕಲಿಗರ ಸಂಘ ನಿರ್ದೇಶಕರಾದ ಹರಪಳ್ಳಿ ರವೀಂದ್ರ, ಹಾಸನ ಶೇಖರ್, ಕೆ.ಟಿ ಸತೀಶ್, ಶಿವಶಂಕರ್ ಇತರರು ಪಾಲ್ಗೊಳ್ಳಲಿದ್ದಾರೆ.







