Breaking News :

ಆ.30 ರಂದು ವಿರಾಜಪೇಟೆ ತಾಲೂಕಿನ ವಿವಿಧೆಡೆ ಕರೆಂಟ್ ಇರಲ್ಲ 

 


ಜನವಾಹಿನಿ NEWS ಮಡಿಕೇರಿ : 66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರ ಮಗ್ಗುಲ, 33/11 ಕೆವಿ ಮೂರ್ನಾಡು ಹಾಗೂ 33/11ಕೆವಿ ಸಿದ್ದಾಪುರ ವಿದ್ಯುತ್ ಉಪ ಕೆಂದ್ರದಲ್ಲಿ ನಿರ್ವಾಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಆಗಸ್ಟ್, 30 ರಂದು ಬೆಳಗ್ಗೆ 09.30 ರಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆದ್ದರಿಂದ ವಿರಾಜಪೇಟೆ ಪಟ್ಟಣ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಆರ್ಜಿ, ಬೇಟೋಳಿ, ಕದನೂರು, ಕಾಕೋಟುಪರಂಬು, ಕೆದಮುಳ್ಳೂರು, ಬಿಟ್ಟಂಗಾಲ, ಬಿ.ಶೆಟ್ಟಗೇರಿ, ಅಮ್ಮತ್ತಿ, ಚೆಂಬೆಬೆಳ್ಳೂರು, ಕಣ್ಣಂಗಾಲ, ಹಾಲುಗುಂದ, ಕೊಂಡಂಗೇರಿ, ಅಮ್ಮತ್ತಿ, ಬಿಳುಗುಂದ, ಮಾಲ್ದಾರೆ, ಕರಡಿಗೋಡು, ಗುಹ್ಯಾ, ಚೆನ್ನಯ್ಯನಕೋಟೆ, ಅಬ್ಬೂರು ತಾರಿಕಟ್ಟೆ, ಚೆನ್ನಂಗಿ, ಇಂಜಲಗೇರಿ, ಪುಲಿಯೇರಿ, ಮೂರ್ನಾಡು, ಪಾರಾಣೆ, ನಾಪೋಕ್ಲು, ಹೊದ್ದೂರು, ಮರಗೋಡು, ಹಾಕತ್ತೂರು, ಹೊಸ್ಕೇರಿ, ನರಿಯಂದಡ, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Share this article

ಟಾಪ್ ನ್ಯೂಸ್

More News