ಜನವಾಹಿನಿ News ಮಡಿಕೇರಿ : ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವತಿಯರಿಗೆ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುವ ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 50 ವರ್ಷ ವಯೋಮಿತಿಯೊಳಗಿನ ಯುವತಿಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಸಕ್ತಿ ಉಳ್ಳವರು ಸಂಸ್ಥೆಯನ್ನು ನೇರವಾಗಿ ಅಥವಾ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ವಿವರ ಈ ಕೆಳಗಿನಂತಿದೆ ::
ಬ್ಯೂಟಿ ಪಾರ್ಲರ್ ತರಬೇತಿಯೂ 01.04.2026 ರಿಂದ ಪ್ರಾರಂಭವಾಗಿ 05.05.2026 ರ ವರೆಗೆ 35 ದಿನಗಳ ಕಾಲ ನಡೆಯಲಿದೆ. ಹೊಲಿಗೆ ತರಬೇತಿಯೂ 06.05.2026 ರಿಂದ ಪ್ರಾರಂಭವಾಗಿ 05.06.2026 ರ ವರೆಗೆ 31 ದಿನಗಳ ಕಾಲ ಹಾಗೂ ಕಂಪ್ಯೂಟರ್ ಲೆಕ್ಕ ಪತ್ರ ನಿರ್ವಹಣೆ ( Computer Tally) ತರಬೇತಿಯೂ 13.05.2026 ರಿಂದ ಪ್ರಾರಂಭವಾಗಿ 19.06.2026 38 ದಿನಗಳು ನಡೆಯಲಿದ್ದರೆ. ಅಣಬೆ ಬೇಸಾಯ ತರಬೇತಿಯೂ 27.05.2026 ರಿಂದ ಪ್ರಾರಂಭವಾಗಿ 05.06.2026 ರ ವರೆಗೆ 10 ದಿನಗಳ ಕಾಲ ನಡೆಯಲಿದೆ.
ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣೆ ಸಂಖ್ಯೆಯನ್ನು ಸಂಪರ್ಕಿಸಬಹುದು. 9686406181, 9449402081, 8618471801, 9900142602.







