Breaking News :

ವೈದ್ಯರ ನಿರ್ಲಕ್ಷ್ಯಕ್ಷೆ ಯುವಕ ಬಲಿ; ಕುಟುಂಬಸ್ಥರ ಆರೋಪ

ವೈದ್ಯರ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿರುವ ಘಟನೆ  ಕಲ್ಬುರ್ಗಿಯಲ್ಲಿ ನಡೆದಿದೆ.

ಯುವಕನ ಸಾವಿನ ಬೆನ್ನಲ್ಲಿ ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ‌

24 ವರ್ಷದ ಶರಣಬಸಪ್ಪ ಮೃತ ಯುವಕ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ, ಹೊಟ್ಟೆ ನೋವು, ವಾಂತಿ ಹಿನ್ನೆಲೆಯಲ್ಲಿ ಜುಲೈ 22ರಂದು ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಾಗಿದ್ದ.

ಆದರೆ ಎರಡು ದಿನಗಳಿಂದ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,  ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Share this article

ಟಾಪ್ ನ್ಯೂಸ್

More News