ಮಳೆನೀರು ನೆಲಮಾಳಿಗೆಯಲ್ಲಿರುವ ಗ್ರಂಥಾಲಯಕ್ಕೆ ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯ ದೆಹಲಿಯ ಹಳೆಯ ರಾಜೇಂದರ್ ನಗರದಲ್ಲಿರುವ ರಾವ್ ಅವರ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ನಡೆದಿದೆ.
ಕೋಚಿಂಗ್ ಸೆಂಟರ್ ನಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರು. ಇಪ್ಪತ್ತೇಳು ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ರಾತ್ರಿ 10.30 ರ ವೇಳೆಗೆ, ಎನ್ಡಿಆರ್‌ಎಫ್ ವಿದ್ಯಾರ್ಥಿನಿಯೋರ್ವಳ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರಿಂದ ಅಧಿಕಾರಿಗಳು ಮೊದಲ ಸಾವನ್ನು ದೃಢಪಡಿಸಿದ್ದರು. ರಾತ್ರಿ 11.15 ರ ಸುಮಾರಿಗೆ ಎರಡನೇ ಶವವನ್ನು ಹೊರತೆಗೆಯಲಾಯಿತು. ಮುಳುಗುತಜ್ಞರು ಮಧ್ಯರಾತ್ರಿಯ ನಂತರ ಮೂರನೇ ಶವವನ್ನು ಹೊರ ತೆಗೆದಿದ್ದಾರೆ.
ನಿರ್ಲಕ್ಷ್ಯದಿಂದಾಗಿ ಸಾವಿಗೆ ಕಾರಣವಾದ ಆರೋಪದ ಮೇಲೆ ಕೋಚಿಂಗ್ ಸೆಂಟರ್ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.







