Breaking News :

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಪೊಕಲೇನ್ ಯಂತ್ರದ ಮೂಲಕ ಕಾರ್ಯಾಚರಣೆ; ಏನಿದು ಯಂತ್ರ?

ಉತ್ತರ ಕನ್ನಡ,: ಅಂಕೋಲಾ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ನಾಪತ್ತೆಯಾದವರ ಮೃತದೇಹ ಪತ್ತೆಗೆ ಹುಡುಕಾಟ ಮುಂದುವರಿದಿದೆ.

ಗಂಗಾವಳಿ ನದಿಯಲ್ಲಿ ಪೊಕಲೇನ್ (poclain) ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ

ಈ ಪೊಕಲೇನ್ ವೆಹಿಕಲ್, ನದಿಯ ಆಳದಲ್ಲಿರುವ ಮಣ್ಣನ್ನು ತೆರವು ಮಾಡುವ ಯಾಂತ್ರವಾಗಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕದ ಇಬ್ಬರು ಮತ್ತು ಕೇರಳದ ಓರ್ವರ‌ ಮೃತದೇಹ ಪತ್ತೆ ಮಾಡಬೇಕಿದೆ.

60 ಅಡಿ ಉದ್ದವಾದ ಡೀಪ್ ಪೊಕಲೇನ್ ಗೋಕಾಕಲ್ಲಿತ್ತು. ರಾಷ್ಟ್ರೀಯ ಹೆದ್ದಾರಿಯ ಮೇಲಿನ ಮಣ್ಣನ್ನು ತೆರವು ಮಾಡಲಾಗಿದ್ದು, ದೊಡ್ಡ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ.  ಪೊಕಲೇನ್ ಮೂಲಕ  ಕಾರ್ಯಚರಣೆ ನಡೆಯುತ್ತಿದೆ.

ಇನ್ನು ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಒಂದು ಟ್ರಕ್‌ ನೀರಿನಲ್ಲಿ ಮುಳುಗಿರುವುದು ಖಚಿತವಾಗಿದೆ ಹಾಗೂ ನೌಕಾಪಡೆಯ ಮುಳುಗು ತಜ್ಞರು ಅದನ್ನು ಮೇಲಕ್ಕೆ ತರಲಿದ್ದಾರೆ. ಲಾಂಗ್‌ ಆರ್ಮ್‌ ಬೂಮರ್‌ ಎಕ್ಸ್‌ಕವೇಟರ್‌ ಬಳಸಿ ನದಿ ನೀರಿನಲ್ಲಿ ಡ್ರೆಜ್ಜಿಂಗ್‌ ನಡೆಸಲಿದೆ. ಶೋಧಕ್ಕಾಗಿ ಡ್ರೋನ್‌ ಆಧರಿತ ಇಂಟಲಿಜೆಂಟ್‌ ಅಂಡರ್‌ಗ್ರೌಂಡ್‌ ಬರೀಡ್‌ ಆಬ್ಜೆಕ್ಟ್‌ ಡಿಟೆಕ್ಷನ್‌ ಸಿಸ್ಟಂ ಕೂಡ ಬಳಸಲಾಗಿದೆ. ನಾಪತ್ತೆಯಾದವರ ಮೃತದೇಹಗಳಿಗಾಗಿ ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಮೂಲಕವೂ ಶೋಧ ನಡೆಸಲಾಗುವುದು ಎಂದು ಹೇಳಿದ್ದಾರೆ‌.

 

 

 

 

Share this article

ಟಾಪ್ ನ್ಯೂಸ್

More News