Breaking News :

ವಿಶ್ವ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲಿರುವ ಹೊನಲಿ ಕಿಶೋರ್ ಗೆ ಅಭಿನಂದಿಸಿದ ಮಂತರ್

ವಿಶ್ವ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲಿರುವ ಹೊನಲಿ ಕಿಶೋರ್ ಗೆ ಅಭಿನಂದಿಸಿದ ಮಂತರ್ ಮಡಿಕೇರಿ : ಮಲೇಶಿಯಾದ ಕೌಲಾಲಂಪುರದಲ್ಲಿ ಆಗಸ್ಟ್ 7ರಂದು ನಡೆಯಲಿರುವ ಇಂಟರ್ನ್ಯಾಷನಲ್ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವ ಸೋಮವಾರಪೇಟೆ ಮೂಲದ ವಿದ್ಯಾರ್ಥಿನಿ ” ಹೊನಲಿ ಕಿಶೋರ್” ರವರನ್ನು ಶಾಸಕ ಮಂತರ್ ಗೌಡ ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಿ, ಶುಭಹಾರೈಸಿದರು.

ಪಹಲ್ಗಾಮ್ ದಾಳಿಯ ರೂವಾರಿ ಸೇರಿ ಮೂವರು ಉಗ್ರರರನ್ನು ಬೇಟೆಯಾಡಿದ ಭದ್ರತಾ ಪಡೆಗೆ ಉಗರರ ಸುಳಿವು ಹೇಗೆ ಸಿಕ್ತು.?..ಕಾರ್ಯಾಚರಣೆಗೆ ಆಪರೇಷನ್ ಮಹಾದೇವ ಹೆಸರಿಡಲು ಕಾರಣವೇನು..? ಇಲ್ಲಿದೆ ಕಂಪ್ಲೀಟ್ ಮಾಹಿತಿ 

ಪಹಲ್ಗಾಮ್ ದಾಳಿಯ ರೂವಾರಿ ಸೇರಿ ಮೂವರು ಉಗ್ರರರನ್ನು ಬೇಟೆಯಾಡಿದ ಭದ್ರತಾ ಪಡೆ..! ಭದ್ರತಾ ಪಡೆಗೆ ಉಗರರ ಸುಳಿವು ಹೇಗೆ ಸಿಕ್ತು.?..ಕಾರ್ಯಾಚರಣೆಗೆ ಆಪರೇಷನ್ ಮಹಾದೇವ ಹೆಸರಿಡಲು ಕಾರಣವೇನು..? ಇಲ್ಲಿದೆ ಕಂಪ್ಲೀಟ್ ಮಾಹಿತಿ ನವದೆಹಲಿ : ಶ್ರೀನಗರದ ನಗರದ ಹೊರವಲಯದ ಮಹಾದೇವ ಬೆಟ್ಟ ಶ್ರೇಣಿಯ ದಾಚೀಗಾಮ್‌ನಲ್ಲಿ ‘ಆಪರೇಷನ್‌ ಮಹಾದೇವ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಯ ಸಿಬ್ಬಂದಿಗಳು, ಪಹಲ್ಗಾಮ್ ದಾಳಿಯ ರೂವಾರಿ ಸೇರಿದಂತೆ ಪಾಕಿಸ್ತಾನದ ಮೂವರು ಉಗ್ರರನ್ನು ಬೇಟೆಯಾಡಿದ್ದಾರೆ. ಮೃತ ಉಗ್ರರನ್ನು ಹಸೀಮ್ ಮುಸಾ ಅಲಿಯಾಸ್ ಸುಲೇಮಾನ್, ಪಾಕಿಸ್ತಾನದ ಯಾಸಿರ್ […]

ಮಹಿಳಾ ವಿಶ್ವ ಚೆಸ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..!

ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..! ನವದೆಹಲಿ : ಭಾರತದ ಇಬ್ಬರು ಮಹಿಳಾ ಚೆಸ್ ಪಟುಗಳು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿ ಫಿಡೆ ಮಹಿಳಾ ವಿಶ್ವಕಪ್‌ ಪ್ರಶಸ್ತಿ ಸುತ್ತಿನಲ್ಲಿ ಇಬ್ಬರು ಭಾರತೀಯರು ಸೆಣಸುತ್ತಿದ್ದು ಅನುಭವಿ ಆಟಗಾರ್ತಿ ಹಂಪಿ ಕೊನೇರು ಮತ್ತು ಯುವ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಮುಖಾಮುಖಿಯಾಗಲಿದ್ದಾರೆ . ಈ ಮೂಲಕ ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನವಾಗಲಿದೆ. […]

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರ ಭಾರತಕ್ಕೆ ತರಲು ಸರಕಾರದಿಂದ ನೆರವು 

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸರಕಾರದಿಂದ ನೆರವು ಮಡಿಕೇರಿ : ಶಾಸಕ ಪೊನ್ನಣ್ಣ ರವರ ಪ್ರಯತ್ನದಿಂದ, ಅಮೆರಿಕದ ಗಯಾನ ದೇಶದಲ್ಲಿ ನಿಧನರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆನಾಡು ಗ್ರಾಮದ, ಗಿರೀಶ್ ಪಾಲೆ ಬಾಬು ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು. ಇತ್ತೀಚೆಗೆ ಅಮೆರಿಕದ ಗಯಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಗಿರೀಶ್ ರವರ ಮೃತ ದೇಹವನ್ನು ಭಾರತಕ್ಕೆ ತರಲು ಅವರ ಬಡ ಕುಟುಂಬಕ್ಕೆ ಸಾಧ್ಯವಾಗದನ್ನು ಸ್ಥಳೀಯರಿಂದ ಮಾಹಿತಿ ಪಡೆದ […]

ವಿರಾಜಪೇಟೆಯ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆ

ವಿರಾಜಪೇಟೆಯ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆ ಕೊಡಗು : ಜಿಲ್ಲೆಯ ವಿರಾಜಪೇಟೆ ನಗರದ ತೆಲುಗರ ಬೀದಿ ನಿವಾಸಿಗಳಾದ ಅಜಯ್ ಸಿಂಗ್ ಹಾಗು ವಿಭಾ ದಂಪತಿಗಳ ಮಗಳು ಹಾಗೂ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 2025-26ನೇ ಸಾಲಿನ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, ಇದರಲ್ಲಿ ಜೂನಿಯ‌ರ್ ವಿಭಾಗದಲ್ಲಿ […]

ಸುನೀತಾ ವಿಲಿಯಂ, ವಿಲ್ಮೋರ್‌ ಅವರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ವಾಪಾಸ್ಸಾದ ಸ್ಟಾರ್ ಲೈನರ್

ಗಗನಯಾತ್ರಿಗಳಾದ ಸುನೀತಾ ವಿಲಿಯಂ ಹಾಗೂ ಬುಚ್‌ ವಿಲ್ಮೋರ್‌ ಅವಬಾಹ್ಯಾಕಾಶಕ್ಕೆ ಕರೆದೊಯ್ದಿದ್ದ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್‌ ಅವರಿಬ್ಬರನ್ನೂ ಅಲ್ಲೇ ಬಿಟ್ಟು ಭೂಮಿಗೆ ಮರಳಿದೆ. ಬೋಯಿಂಗ್‌ ಸಂಸ್ಥೆಯ ನೌಕೆ ಸ್ಟಾರ್‌ಲೈನರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ, ಅದರಲ್ಲಿ ಗಗನಯಾತ್ರಿಗಳನ್ನು ಕರೆಸಿಕೊಳ್ಳುವ ರಿಕ್ಸ್‌ ತೆಗೆದುಕೊಳ್ಳಲು ಇಚ್ಛಿಸದ ನಾಸಾ (NASA),ಅವರಿಲ್ಲದೇ ಸ್ಟಾರ್‌ಲೈನರ್‌ ಅನ್ನು ಮರಳಿ ತರಿಸಿದೆ. ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (Internationa Space Station – ISS) ಉಳಿದಿದ್ದಾರೆ. ತಡರಾತ್ರಿ ಐಸ್‌ಎಸ್‌ನಿಂದ ಕಳಚಿಕೊಂಡು ಹೊರಟ ಕ್ಯಾಪ್ಸುಲ್, […]

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಜೈ ಶಾ: ಅಮಿತ್ ಶಾ ಪುತ್ರನಿಗೆ ನೀಡುತ್ತಾ 16 ರಾಷ್ಟ್ರಗಳು ಬೆಂಬಲ?

ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ. ಜೈಶಾಗೆ ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ. ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ.ಅವರ ಜಾಗಕ್ಕೆ ಅಮಿತ್ ಶಾ […]

ವಿದಾಯ ಭಾಷಣ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾವುಕ

ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೋಮವಾರ ರಾತ್ರಿ ತಮ್ಮ ರಾಜಕೀಯದ ಕೊನೆಯ ಭಾಷಣ ಮಾಡಿದ್ದು ಈ ವೇಳೆ ನೆರೆದಿದ್ದ ಜನಸಮೂಹ ಚಪ್ಪಾಳೆಯ ಸುರಿಮಳೆ ಗೈದಿದ್ದಾರೆ. ಭಾಷಣದ ವೇಳೆ ಬೈಡನ್ ಭಾವುಕರಾದ ಪ್ರಸಂಗವು ನಡೆಯಿತು. ಡೆಮಾಕ್ರಟಿಕ್ ನ್ಯಾಷನಲ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್​ಗೆ ಅಮೆರಿಕಾದ ಜನರು ವಿದಾಯ ಹೇಳಿದರು. ಸಮಾವೇಶದಲ್ಲಿ ನೆರೆದಿದ್ದವರು, ಡೆಮಾಕ್ರಟಿಕ್ ನ್ಯಾಷನಲ್ ಪಕ್ಷದ ಬೆಂಬಲಿಗರು ನಿರಂತರ 4 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಧ್ಯಕ್ಷನನ್ನು ಬೀಳ್ಕೊಟ್ಟರು. ಕೆಲವೊಂದು […]

ಆಫ್ರಿಕನ್ ದೇಶದಲ್ಲಿ ಏಕಾಏಕಿ ಉಲ್ಬಣಗೊಂಡ ಎಂಪಾಕ್ಸ್  ವೈರಸ್: ಮನುಷ್ಯನಿಂದ ಮನುಷ್ಯನಿಗೆ ಹರಡುವ ಈ ವೈರಸ್ ಬಗ್ಗೆ ಜಗತ್ತಿಗೆ ಹೆಚ್ಚಿದ ಭೀತಿ

ಎಂಪಾಕ್ಸ್  ವೈರಸ್ ಆಫ್ರಿಕನ್ ದೇಶದಲ್ಲಿ ಏಕಾಏಕಿ ಉಲ್ಬಣಗೊಂಡಿದೆ. ಈ ಹಿಂದೆ ಮಂಕಿಪಾಕ್ಸ್ ಎಂದು ಕರೆಯಲ್ಪಡುವ ಈ ವೈರಸ್ ವೇಗವಾಗಿ ಹರಡುವ ಕಾಯಿಲೆಯಾಗಿದ್ದು, ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ  ಎಂದು ಘೋಷಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಚರ್ಚೆ ನಡೆಸುತ್ತಿದೆ. ಆಫ್ರಿಕನ್ ದೇಶಗಳಲ್ಲಿ ಎಂಪಾಕ್ಸ್ ವೈರಸ್‌ನ ಮಾರಣಾಂತಿಕ ರೂಪಾಂತರದ ಪ್ರಕರಣಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಬುಧವಾರ ಅಂತರಾಷ್ಟ್ರೀಯ ತಜ್ಞರ ತುರ್ತು ಸಭೆ ಕರೆದಿದ್ದರು. Mpox ವೈರಸ್ ಎಂದರೇನು? ಮಂಕಿಪಾಕ್ಸ್ ಎಂದು […]

ಸೌದಿ ಅರೇಬಿಯಾ; ಹವಾಂತರ ಸೃಷ್ಟಿಸಿದ ಮಳೆ; 9 ಮಂದಿ ಮೃತ್ಯು

ಜೆದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ನೈಋತ್ಯ ಪ್ರದೇಶದ ಜೀಝಾನ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಜಸ್ಸಾನ್ ನ ಸಬಿಯಾ ಮತ್ತು ಅಬು ಅರಿಶ್ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಭಾಗಶಃ ಕುಸಿದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ. ಈಗೆ ಸೌದಿ ಅರೇಬಿಯಾದ ವಿವಿಧೆಡೆ ಇಂದು ಸುರಿದ ಭಾರೀ ಮಳೆಗೆ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.