Breaking News :

ಜಪಾನ್ ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ, ಆತಂಕದಲ್ಲಿ ಜನ

ಜಪಾನ್ ನ ಕ್ಯೂಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನವು ಸಂಭವಿಸಿದೆ. ಭೂಕಂಪನದ ಜೊತೆ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಜಪಾನಿನ ಕ್ಯೂಶು ದ್ವೀಪದಾದ್ಯಂತ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭೂಕಂಪ ಸಂಭವಿಸಿದ ಸ್ಥಳದಲ್ಲಿನ ಸಾವು- ನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

ದೇಶ ತೊರೆದ ಶೇಖ್ ಹಸೀನಾಗೆ ವ್ಯಂಗ್ಯ ಮಾಡಿದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌

ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರದಿಂದಾಗಿ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಈ ಬಗ್ಗೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್‌ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದಾತ್ಮಕ ಲೇಖಕಿಯಾಗಿರುವ ತಸ್ಲೀಮಾ ನಸ್ರೀನ್,  ಇಸ್ಲಾಂಮಿಸ್ಟ್ ಗಳನ್ನು ಮೆಚ್ಚಿಸಲು ಶೇಖ್ ಹಸೀನಾ ನನ್ನನ್ನು ಬಾಂಗ್ಲಾದೇಶದಿಂದ ಹೊರ ಹಾಕಿದ್ದರು. ಈಗ ಅದೇ ಜನರು ವಿದ್ಯಾರ್ಥಿ ಚಳವಳಿ ಮೂಲಕ ಶೇಖ್ ಹಸೀನಾ ಅವರನ್ನು ದೇಶ ತೊರೆಯುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾನು 1999ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿಯನ್ನು ನೋಡಲು ಬಾಂಗ್ಲಾಕ್ಕೆ […]

ಹಸೀನಾ ಬಾಂಗ್ಲಾದೇಶ ತೊರೆಯುತ್ತಿದ್ದಂತೆ ಜೈಲಿನಿಂದ ಮಾಜಿ ಪ್ರಧಾನಿ ಖಲೀದಾ ಜಿಯಾ ಬಿಡುಗಡೆ

ಬಾಂಗ್ಲಾದೇಶದಲ್ಲಿ ವ್ಯಾಪಕವಾದ ಹಿಂಸಾಚಾರದ ಬೆನ್ನಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಇದರ ಬೆನ್ನಲ್ಲಿ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್, ಜೈಲಿನಲ್ಲಿದ್ದ ವಿರೋಧ ಪಕ್ಷದ ನಾಯಕಿ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿದ ನಂತರ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಅಧ್ಯಕ್ಷರನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಲು ಅಧ್ಯಕ್ಷ […]

ಬಾಂಗ್ಲಾದೇಶದ ಪ್ರಧಾನಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರತಿಭಟನಾಕಾರರು; ಶ್ರೀಲಂಕಾ ಬಿಕ್ಕಟ್ಟನ್ನು ಮರು ನೆನಪಿಸಿದ ಘಟನೆ

ಬಾಂಗ್ಲಾದೇಶದಲ್ಲಿ  ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ಮಂದಿ ಬಾಂಗ್ಲಾದೇಶಿಯರು ಮೃತಪಟ್ಟಿದ್ದಾರೆ. ಹಿಂಸಾಚಾರ ವ್ಯಾಪಕವಾಗುತ್ತಿದ್ದಂತೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಬಂದಿಳಿದಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು ಬಾಂಗ್ಲಾದೇಶದ ಪ್ರಧಾನಿಯ ಮನೆಗೆ ನುಗ್ಗಿದ್ದು, ಪ್ರಧಾನಿ ಮಲಗುತ್ತಿದ್ದ ಮಂಚದ ಮೇಲೆ ಮಲಗಿ ದುಸ್ಸಾಹಾಸ ಮೆರೆದಿದ್ದಾನೆ. ವಿದ್ಯಾರ್ಥಿಗಳು ಪ್ರಧಾನಿ ಮನೆಯ ಒಳಗಡೆ ನುಗ್ಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ತಾರಕಕ್ಕೇರಿದ್ದು, ಪ್ರತಿಭಟನಾಕಾರರು ನುಗ್ಗುವ ಮುನ್ನವೇ ಅಪಾಯದ ಮುನ್ಸೂಚನೆ […]

ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥರ ಹತ್ಯೆ; ವರದಿ

ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್‌ನ ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮೂಲದ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಪ್ರೆಸ್ ಟಿವಿ ವರದಿ ಪ್ರಕಾರ, ಹಮಾಸ್ ನ್ನು ನಾಶಮಾಡುವುದಾಗಿ  ಈ ಮೊದಲು ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಆದ್ದರಿಂದ ಹತ್ಯೆಯ ಹಿಂದೆ ಇಸ್ರೇಲ್‌ನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಘಟನೆಯಲ್ಲಿ ಇಸ್ಮಾಯಿಲ್ ಹನಿಯೆಹ್ ಅವರ ಅಂಗ ರಕ್ಷಕ ಕೂಡ ಹತರಾಗಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.

ಉಕ್ರೇನ್ ವಿರುದ್ಧ ರಷ್ಯಾ ಒತ್ತಾಯವಾಗಿ ಯುದ್ಧಕ್ಕೆ ನೇಮಿಸಿದ್ದ ಭಾರತೀಯ ಮೃತ್ಯು

ಉಕ್ರೇನ್ ಜೊತೆಗಿನ ಯುದ್ಧಕ್ಕೆ ರಷ್ಯಾ ನೇಮಿಸಿದ್ದ ಭಾರತೀಯ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಈ ಯುದ್ಧದಲ್ಲಿ ಭಾಗವಹಿಸಿದ್ದ ಹರಿಯಾಣದ ಕೈತಾಲ್ ಜಿಲ್ಲೆ ಮಾತೋರ್ ಗ್ರಾಮದ ರವಿ ಮೌನ್ ಮೃತಪಟ್ಟಿದ್ದಾರೆ. ರವಿ ಸಾವಿನ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕಳೆದ ಐದು ತಿಂಗಳಿನಿಂದ ರಶ್ಯದಲ್ಲಿರುವ ರವಿ ಬಗ್ಗೆ ಮಾಹಿತಿ ಇಲ್ಲದ ಕಾರಣ ರವಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ, ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಲು ರವಿಯನ್ನು ರಷ್ಯಾ […]

ಇಥಿಯೋಪಿಯಾದಲ್ಲಿ ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ ನೂರಾರು ಮಂದಿ; ರಕ್ಷಣಾ ಕಾರ್ಯಾಚರಣೆಗೆ ಬೇಕಿದ್ದ ಯಂತ್ರಗಳೇ ಇಲ್ಲದೆ ಪರಿಸ್ಥಿತಿ ಶೋಚನೀಯ

ಭಾರೀ ಮಳೆಯಿಂದಾಗಿ ದಕ್ಷಿಣ ಇಥಿಯೋಪಿಯಾದ ಪ್ರಾದೇಶಿಕ ರಾಜ್ಯದಲ್ಲಿನ ಗೋಫಾ ವಲಯದಲ್ಲಿ ಭೂಕುಸಿತದಿಂದ ಹಲವಾರು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ. ಅಲ್ಲಿನ ಸ್ಥಿತಿ ಶೋಚನೀಯವಾಗಿದ್ದು, ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ ಪರದಾಟವೇ ನಡೆಯುತ್ತಿದೆ. ಭಾರೀ ಮಳೆಯಿಂದ ಇಥಿಯೋಪಿಯಾದ ಭಾಗದಲ್ಲಿ ಭೂ ಕುಸಿತವಾಗಿ 157 ಜನರು ಸಾವನ್ನಪ್ಪಿದ್ದಾರೆ. ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸ್ಥಳದಿಂದ ಕೆಂಪು ಮಣ್ಣನ್ನು ಜನರು ಕೈಯಿಂದ ಅಗೆಯುತ್ತಿರುವುದು ಕಂಡು ಬರುತ್ತಿದೆ. ಅವರ ಬಳಿ ಮಣ್ಣು ತೆಗೆಯುವ ಯಂತ್ರ ಕೂಡ ಇಲ್ಲ. […]

ಯುಎಇಯಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ 53 ಮಂದಿಗೆ 10 ವರ್ಷ ಜೈಲು ಶಿಕ್ಷೆ

ಬಾಂಗ್ಲಾದೇಶದಲ್ಲಿನ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯುಎಇಯಲ್ಲಿ ಪ್ರತಿಭಟನೆ ನಡೆಸಿದ 57 ಬಾಂಗ್ಲಾದೇಶಿಗರನ್ನು ಯುಎಇ ನ್ಯಾಯಾಲಯ 10 ವರ್ಷ ಜೈಲಿಗೆ ತಳ್ಳಿದೆ. ಬಾಂಗ್ಲಾದೇಶ ಸರ್ಕಾರವು ತೆಗೆದುಕೊಂಡ ಮಿಸಲಾತಿ ನಿರ್ಧಾರಗಳನ್ನು ವಿರೋಧಿಸಿ ಯುಎಇಯ ಹಲವಾರು ಬೀದಿಗಳಲ್ಲಿ ಬಾಂಗ್ಲಾದೇಶಿಗಳು ಪ್ರತಿಭಟನಾ ಜಾಥಾವನ್ನು ನಡೆಸಿದ್ದರು. ಯುಎಇಯಲ್ಲಿ ಬಾಂಗ್ಲಾದೇಶದ ವಲಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು, ಅಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಇದೀಗ ಬಾಂಗ್ಲಾದೇಶದ ವಿರುದ್ದ ಯುಎಇಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಅಬುಧಾಬಿ ಫೆಡರಲ್ ಮೇಲ್ಮನವಿ ನ್ಯಾಯಾಲಯವು 53 ಬಾಂಗ್ಲಾದೇಶದ ಪ್ರಜೆಗಳಿಗೆ […]

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಕಮಲಾ ಹ್ಯಾರಿಸ್ ಹಿನ್ನೆಲೆಯೇನು ಗೊತ್ತಾ?

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕ ದೇಶದ ಅಧ್ಯಕ್ಷೀಯ ಚುನಾವಣೆ ನವೆಂಬರ್ ನಲ್ಲಿ ನಡೆಯಲಿದೆ.  ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌  ಅವರು ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರೆ, ಅಮೆರಿಕಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಲಿದ್ದಾರೆ. ಕಪ್ಪುವರ್ಣಿಯ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಏಷ್ಯಾ ಮೂಲದ ಮಹಿಳೆ […]

ಸಿಕ್ಕಾಪಟ್ಟೆ ತಿನ್ನುವುದಕ್ಕೆ ಹೆಸರುವಾಸಿಯಾಗಿದ್ದ ಯುವತಿ ಸ್ಪರ್ಧೆಯ ನೇರಪ್ರಸಾರದ ವೇಳೆಯೇ ಮೃತ್ಯು

ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಜಾಲತಾಣದ ತಾರೆಯೊಬ್ಬರು ಕಾರ್ಯಕ್ರಮದ ನೇರ ಪ್ರಸಾರದ ವೇಳೆಯೇ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ. ಜುಲೈ 14ರಂದು ಈ ಘಟನೆ ನಡೆದಿದೆ. ಪ್ಯಾನ್ ಕ್ಸಿಯಾಟಿಂಗ್(24) 10 ಗಂಟೆಗಳಿಗೂ ಹೆಚ್ಚು ಕಾಲ ತಿನ್ನುವಂತಹ ಸವಾಲುಗಳನ್ನು ಸ್ವೀಕರಿಸಿ ಹೆಸರುವಾಸಿಯಾಗಿದ್ದರು. ಕ್ಸಿಯಾಟಿಂಗ್ ಪ್ರತಿ ಊಟಕ್ಕೆ 10 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಆಕೆಯ ಪೋಷಕರು ಮತ್ತು ಹಿತೈಷಿಗಳ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ಕ್ಸಿಯಾಟಿಂಗ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದರು ಎಂದು ವರದಿಯು ಉಲ್ಲೇಖಿಸಿದೆ. ಕ್ಸಿಯಾಟಿಂಗ್ ಅವರ ಮರಣೋತ್ತರ ವರದಿಯಲ್ಲಿ, ಆಕೆಯ […]