ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಬಂಧಿಯಾಗಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್

ಖ್ಯಾತ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್, ಕಾರ್ಮಿಕ ಕಾನೂನು ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಪ್ರಸ್ತುತ ತನ್ನ ತಾಯ್ನಾಡಿನಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಕಿರುಬಂಡವಾಳ ಆಂದೋಲನದ ಪ್ರವರ್ತಕರಾಗಿರುವ ಯೂನಸ್, 1983ರಲ್ಲಿ ಗ್ರಾಮೀಣ ಬ್ಯಾಂಕ್ ಪರಿಕಲ್ಪನೆಯನ್ನು ರೂಪಿಸಿದರು, ಇದು ಬಡ ಜನರಿಗೆ ಸಣ್ಣ ಸಾಲಗಳನ್ನು ನೀಡುವ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈ ಕಲ್ಪನೆಯು ಜಾಗತಿಕವಾಗಿ ಗಮನವನ್ನು ಸೆಳೆದಿದೆ. ಇದು ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ. […]
ಟ್ರಂಪ್ ಗೆ ಗುಂಡೇಟು ಘಟನೆಯನ್ನು ರಿಕ್ರಿಯೇಟ್ ಮಾಡಿದ ಉಗಾಂಡದ ಮಕ್ಕಳು!

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ವಿಶ್ವದಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಉಗಾಂಡದ ಕೆಲವು ಮಕ್ಕಳು ಮನರಂಜನೆಗಾಗಿ ಮರದ ಆಟಿಕೆ ಬಂದೂಕು ಮತ್ತು ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸಿ ಘಟನೆ ಮರುಸೃಷ್ಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬುಲೆಟ್ ತಗುಲಿದಾಗ ಟ್ರಂಪ್ ಅವರ ಮುಖಭಾವ, ಕೆಳಗೆ ಬಾಗಿದ ದೃಶ್ಯ, ಗುಪ್ತದಳದ ಸಿಬ್ಬಂದಿ ತಕ್ಷಣ ಅವರನ್ನು ಸುತ್ತುವರಿದು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದ ಘಟನೆಗಳನ್ನು ಉಗಾಂಡಾ ಮಕ್ಕಳು ಹಾಗೆಯೇ ಅಭಿನಯಿಸಿದ್ದಾರೆ. ಈ ಗುಂಪಿನಲ್ಲಿ […]
ಬಾಂಗ್ಲಾದಲ್ಲಿ ಹಿಂಸಾಚಾರ; ಆಶ್ರಯ ಅರಸಿ ಭಾರತಕ್ಕೆ ಬರುತ್ತಿರುವ ಜನ!

ಬಾಂಗ್ಲಾದೇಶದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಮೃತರ ಸಂಖ್ಯೆ 105 ತಲುಪಿದೆ. ಈ ಮಧ್ಯೆ ಅಲ್ಲಿನ ನಾಗರಿಕರು ದೇಶದ ಗಡಿ ದಾಟಿ ಭಾರತಕ್ಕೆ ಪಲಾಯನ ಮಾಡುತ್ತಿರುವುದು ಕಂಡು ಬಂದಿದೆ. ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಾಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ […]
ಗಾಝಾದಲ್ಲಿ ಕದನ ವಿರಾಮಕ್ಕೆ ಬೆಂಬಲ ಪುನರುಚ್ಚರಿಸಿದ ಭಾರತ

ಭಾರತವು ಗಾಝಾದಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮದ ಕರೆಯನ್ನು ಬುಧವಾರ ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ್ದು, ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಆಗ್ರಹಿಸಿದೆ. ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಉಪ ಪ್ರತಿನಿಧಿ ಆರ್.ರವೀಂದ್ರ ಅವರು, ‘2023,ಅ.7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ವೇಳೆ ನಾಗರಿಕರ ಜೀವಹಾನಿಯನ್ನೂ ನಾವು ಖಂಡಿಸಿದ್ದೇವೆ. ಸಂಯಮವನ್ನು […]