Breaking News :

ವಿಟ್ಲ; ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ; ಸ್ಕೂಟರ್ ಸವಾರನ ಸ್ಥಿತಿ ಗಂಭೀರ

ವಿಟ್ಲ; ಸ್ಕೂಟರ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಚನೆ ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮುಝಮ್ಮಿಲ್ ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲದಿಂದ ಮುಡಿಪು ಕಡೆ ಸಂಚರಿಸುತ್ತಿದ್ದ ಖಾಸಗಿ ಬಸ್ ಹಾಗೂ ಮೆದು ಕಡೆ ತೆರಳುತ್ತಿದ್ದ ಮುಝಮ್ಮಿಲ್ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ.

ಮಂಗಳೂರು; ಟಾರ್ಗೆಟ್ ಇಲ್ಯಾಸ್ ಮರ್ಡರ್ ಕೇಸ್ ಆರೋಪಿಯ ಬರ್ಬರ ಹತ್ಯೆ

ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀ‌ರ್ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಕಲ್ಲಾಪು ಬಳಿ ಭಾನುವಾರ ರಾತ್ರಿ ನಡೆದಿದೆ. ತನ್ನ ತಾಯಿಯೊಂದಿಗೆ ಕಲ್ಲಾಪು ರೆಸ್ಟೋರೆಂಟ್‌ ಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಐದಾರು ಮಂದಿ ಇದ್ದ ತಂಡ ಹತ್ಯೆಗೈದು ಪರಾರಿಯಾಗಿದೆ. ದರೋಡೆ ಕೇಸಿನಲ್ಲಿ ಜೈಲು ಪಾಲಾಗಿದ್ದ ಸಮೀ‌ರ್ ಎರಡು ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದ ಎಂದು ತಿಳಿದು ಬಂದಿದೆ.  

ಕಾರ್ಕಳ; ಓಮ್ನಿ- ಆಲ್ಟೋ ಕಾರಿನ ನಡುವೆ ಅಪಘಾತ; ಓರ್ವನ ಸ್ಥಿತಿ ಗಂಭೀರ

ಕಾರ್ಕಳ: ಓಮಿನಿ ಮತ್ತು ಆಲ್ಟೊ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ  ಓರ್ವ ಗಂಭೀರವಾಗಿ ಗಾಯಗೊಂಡು ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸಾಣೂರು ಕೋಳಿ ಫಾರಂ ಬಳಿ ನಡೆದಿದೆ. ಅಪಘಾತದಲ್ಲಿ ಓಮಿನಿ ಕಾರಿನಲ್ಲಿದ್ದ ಮೂಡಬಿದ್ರೆ ನಿವಾಸಿಗಳಾದ ಆಫ್ರಿದ್, ಗಂಭೀರವಾಗಿ ಗಾಯಗೊಂಡಿದ್ದು,  ಅನ್ವಿಸ್, ಅಶ್ವಿನ್ ಮತ್ತು ಅಗ್ಮ  ಗಾಯಗೊಂಡಿದ್ದಾರೆ. ಮೂಡುಬಿದಿರೆಯಿಂದ ಕಾರ್ಕಳದ ರೆಸಾಟ್೯ ಕಡೆಗೆ ಬರುತ್ತಿದ್ದ ಓಮಿನಿ ಕಾರು ಹಾಗೂ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ […]

ಉಡುಪಿ; ಬಸ್ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ; ಪ್ರಕರಣ ದಾಖಲು

ಬಸ್‌ ಟೈಮಿಂಗ್‌ ವಿಚಾರದಲ್ಲಿ ಗಲಭೆ ಸೃಷ್ಟಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡ ಘಟನೆ ಉಡುಪಿಯ ಹಿರಿಯಡಕ ಜಂಕ್ಷನ್‌ ಬಳಿ ನಡೆದಿದೆ. ಘಟನೆ ಬಗ್ಗೆ ನಾಲ್ವರ ವಿರುದ್ಧ  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೈಮಿಂಗ್‌ ವಿಚಾರದಲ್ಲಿ ಬಸ್‌ ಅನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಗಲಭೆ ಸೃಷ್ಟಿಸಿದ ಶಶಿಕಾಂತ್‌ (25) ರಾಜೇಶ್‌ (35) ಉಮೇಶ್‌ (54) ಮತ್ತು ಪ್ರಶಾಂತ್‌ (40) ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಖಾಸಗಿ ಬಸ್ ಗೆ ಲಾರಿ ಢಿಕ್ಕಿ; ವಿದ್ಯಾರ್ಥಿಗಳಿಗೆ ಗಾಯ

ಕುಂದಾಪುರ; ಖಾಸಗಿ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಘಟನೆ ತಲ್ಲೂರು ಪ್ರವಾಸಿ ಬಳಿ ನಡೆದಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಅಪಘಾತದ ಪರಿಣಾಮ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸಾದ್ ಎಂಬಾತ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಅದೇ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್, ಕೋಟ ಆಶ್ರಿತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ಮಿತಾ ಹಾಗೂ ಅಶ್ವಿನಿ, ಇತರ ಪ್ರಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ […]

ಹೆಬ್ರಿ; ಕೆರೆಯಲ್ಲಿ ಮುಳುಗಿ ಬಾಲಕ‌ ಮೃತ್ಯು

ಹೆಬ್ರಿ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಶಿವಪುರದ ಹಾಳ್‌ಬೆಟ್ಟು ಎಂಬಲ್ಲಿ ನಡೆದಿದೆ. ಹಾಳ್‌ಬೆಟ್ಟು ನಿವಾಸಿ ಸಿದ್ವಿಕ್‌ ಶೆಟ್ಟಿ (16) ಮೃತ ವಿದ್ಯಾರ್ಥಿ. ಸಿದ್ವಿಕ್‌ ಶೆಟ್ಟಿ ನಿನ್ನೆ ಸ್ನಾನಕ್ಕೆಂದು ಕೆರೆಗೆ ಹೋಗಿದ್ದಾಗ ಅಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ ಮೂಲದ ಮದ್ರಸಾ ಶಿಕ್ಷಕ ಹಠಾತ್ ನಿಧನ

ಬಳ್ಳಾರಿ; ಉಳ್ಳಾಲ ಮೂಲದ ಮದ್ರಸಾ ಶಿಕ್ಷಕರೋರ್ವರು ಬಳ್ಳಾರಿಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ‌ ಮೃತಪಟ್ಟ ಮದ್ರಸಾ ಶಿಕ್ಷಕರನ್ನು ಝೈನುದ್ದೀನ್ ಸಹದಿ ಎಂದು ಗುರುತಿಸಲಾಗಿದೆ. ಶುಕ್ರವಾರದ ನಮಾಝ್ ಗೆ ಸಿದ್ಧತೆ ನಡೆಸುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಮಂಗಳೂರಿನಿಂದ ಬಳ್ಳಾರಿಗೆ ಹೋಗಿ ಮದ್ರಸಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಂಗಳೂರು; ನಕಲಿ ಉತ್ಪನ್ನ ಮಾರಾಟ; ಎಫ್ ಐಆರ್ ದಾಖಲು

ಮಂಗಳೂರು  ನಗರದ ಬೀಬಿ ಅಲಾಬಿ ರಸ್ತೆಯಲ್ಲಿರುವ ಲಕ್ಷ್ಮಣ್‌ ಹರಿ ಕಟ್ಟಡದಲ್ಲಿರುವ ಅಂಗಡಿಯೊಂದರಲ್ಲಿ ಗೋದ್ರೆಜ್‌ ಕಂಪೆನಿ ಹೆಸರಿನ ನಕಲಿ ಹಾಗೂ ದೋಷಪೂರಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೇಸ್ ದಾಖಲಾಗಿದೆ. ಕಂಪೆನಿಯ ಅಧಿಕೃತ ಪ್ರತಿನಿಧಿಗಳು ಆ.1ರಂದು ಮಂಗಳೂರಿಗೆ ಬಂದು ಮಾಹಿತಿ ಸಂಗ್ರಹಿಸುವಾಗ  ಗೋದ್ರೆಜ್‌ ಕಂಪೆನಿಯ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಅಂಗಡಿಯ ಮಾಲಕರ ವಿರುದ್ಧ ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಇದೀಗ ಪ್ರಕರಣ ದಾಖಲಾಗಿದೆ.

ಬಂಟ್ವಾಳ; ಎಸೆಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ: ಎಸ್ಸೆಸೆಲ್ಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಜನಪದವು ಬಳಿ ನಡೆದಿದೆ. ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಡಕಬೈಲಿನ ಖಾಸಗಿ ಶಾಲೆಯಲ್ಲಿ  ಈತ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ.  ನಿನ್ನೆ ರಾತ್ರಿ ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ […]

ಜೋಕಟ್ಟೆಯಲ್ಲಿ ಬಾಲಕಿಯ ಕೊಲೆ ಪ್ರಕರಣ; ತನಿಖೆಯ ವೇಳೆ ಮಹತ್ವದ ಅಂಶಗಳು ಬಯಲು

ಮಂಗಳೂರು: ಜೋಕಟ್ಟೆಯಲ್ಲಿ ಬೆಳಗಾವಿ ಮೂಲದ 14 ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆಯ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ. ಆರೋಪಿಯನ್ನು ಫಕೀರಪ್ಪ ಹಣಮಪ್ಪ ಮಾದರ(51) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದೂರುದಾರರಿಗೆ ಫಕೀರಪ್ಪ ಪರಿಚಯವಿದ್ದು, ಅವರ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಆಗಸ್ಟ್ 6 ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ […]