Breaking News :

ಬಂಟ್ವಾಳ; ಚೂರಿ ಇರಿತ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್

ಬಂಟ್ವಾಳ; ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿಗಳಾದ ಅಶ್ವಥ್, ಶರಣ್ ಮತ್ತು ವಸಂತ ಎಂಬವರು ಬಂಧಿತ ಆರೋಪಿಗಳು. ಇನ್ನುಳಿದವರ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಬಂಟ್ವಾಳ ಬೈಪಾಸ್ ಎಂಬಲ್ಲಿ ಎರಡು ತಂಡಗಳ ನಡುವೆ ಪರಸ್ಪರ ಗಲಾಟೆ ನಡೆದಿದೆ. ಬಳಿಕ ಚೂರಿಯಿಂದ ಇರಿದು ಒಂದು ತಂಡ ಪರಾರಿಯಾಗಿತ್ತು. ಘಟನೆಯಲ್ಲಿ ಪೃಥ್ವಿರಾಜ್ ಮತ್ತು ವಿನೀತ್ ಅವರು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ; ಹಾಡಹಗಲೇ ಕಾರಿನಲ್ಲಿ ಅನೈತಿಕ ಚಟುವಟಿಕೆ; ಕಾರು ಅಲುಗಾಟ ಕಂಡು ಹೋದ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಜೋಡಿ

ಉಡುಪಿ ನಗರದಲ್ಲಿ ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿಯನ್ನು  ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ವೇಳೆ ಜೋಡಿ ಪರಾರಿಯಾಗಿದ್ದಾರೆ. ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು, ಕಾರು ನಿಲುಗಡೆಗೊಳಿಸಿತ್ತು. ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿತ್ತು. ನಿಂತಿದ್ದ ಕಾರನ್ನು  ಅಲುಗಾಟ ಕಂಡು ಸಂಶಯಗೊಂಡ ಸ್ಥಳಿಯರು ಇಣುಕಿ ನೋಡಿದಾಗ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಈ ವೇಳೆ ಯುವಕ ಮತ್ತು ಯುವತಿಯ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. […]

ಬಂಟ್ವಾಳ; ಕೆಲಸ ಸಿಗದೆ ಮನನೊಂದು ಯುವಕ ಆತ್ಮಹತ್ಯೆ

ಬಂಟ್ವಾಳ; ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪ ಪಟ್ಲಕೋಡಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತಿಲಕ್‌ ಪೂಜಾರಿ (34) ಎಂದು ಗುರುತಿಸಲಾಗಿದೆ. ತಿಲಕ್‌ ಪೂಜಾರಿ ಅವಿವಾಹಿತರಾಗಿದ್ದು, ಎಲ್ ಎಲ್ ಬಿ ಪದವಿ ಪಡೆದಿದ್ದರು. ವಕೀಲಿಕೆಗೆ ಪದವಿ ಪಡೆದರೂ ಸರಿಯಾದ ಅವಕಾಶ ಸಿಗದೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸರಿಯಾಗಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದಿದ್ದರು ಎನ್ನಲಾಗಿದೆ. ಇದರಿಂದ ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು; ಜೋಕಟ್ಟೆಯಲ್ಲಿ ಬಾಲಕಿಯ ಕೊಲೆ ಪ್ರಕರಣ; ಇಬ್ಬರು ವಶಕ್ಕೆ!

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ನಡೆದಿದೆ. ಪಣಂಬೂರಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು . ಮನೆಯಲ್ಲಿರುವವರೆಲ್ಲಾ ಕೆಲಸಕ್ಕೆ ಹೋದ ನಂತರ ಬೆಳ್ಳಿಗ್ಗೆ ಸರಿ ಸುಮಾರು 10.30 ಗಂಟೆಗೆ ಅಪ್ರಾಪ್ತ ಮೃತ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ಕರೆ […]

ಮಂಗಳೂರು ಹೋಂಸ್ಟೇ ದಾಳಿ ಪ್ರಕರಣ; ಭಾರೀ ಸದ್ದು ಮಾಡಿದ್ದ ಪ್ರಕರಣದ ಅಂತಿಮ ತೀರ್ಪು ಪ್ರಕಟ

ಮಂಗಳೂರು: ದೇಶದ ಎಲ್ಲೆಡೆ ಭಾರೀ ಸುದ್ದಿಯಾಗಿದ್ದ 2012ರ ಜು. 28ರಂದು ನಡೆದಿದ್ದ ಮಂಗಳೂರಿನ ಹೋಂಸ್ಟೇ ದಾಳಿ ಪ್ರಕರಣ ಎಲ್ಲಾ ಆರೋಪಿಗಳು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪುನೀಡಿದೆ. ನ್ಯಾಯಾಧೀಶ ಕಾಂತರಾಜು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದು, ಓರ್ವ ಪತ್ರಕರ್ತ ನವೀನ್ ಸೂರಿಂಜೆ ಮೇಲಿದ್ದ ಪ್ರಕರಣ ನ್ಯಾಯಾಲಯ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ […]

ಪುತ್ತೂರು; ಕೆರೆಗೆ ಹಾರಿ ಪಾಪತ್ತಡ್ಕ ನಿವಾಸಿ ಆಟೋ ಚಾಲಕ ಆತ್ಮಹತ್ಯೆ

-ಮೊಹಮ್ಮದ್ ಆತ್ಮಹತ್ಯೆ ಮಾಡಿಕೊಂಡವರು. ಪುತ್ತೂರು; ಪಾಪತ್ತಡ್ಕ‌ನಿವಾಸಿ ಆಟೋ ಚಾಲಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯದಲ್ಲಿ ನಡೆದಿದೆ. ಪಾಪತ್ತಡ್ಕ ನಿವಾಸಿ ಮೊಹಮ್ಮದ್ ಮೃತರು. ಇವರು ಮೂಲತಃ ಪಾಪತ್ತಡ್ಕದವರಾಗಿದ್ದು, ಸಂಪ್ಯದಲ್ಲಿ ವಾಸಿಸುತ್ತಿದ್ದರು. ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಪುತ್ತೂರಿನ ಆಸ್ಪತ್ರೆಯಲ್ಲಿರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.    

ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಚಾಲನೆಗೆ ಬ್ರೇಕ್: ವಾಹನ ಚಾಲಕರಿಗೆ ಬಹುಮುಖ್ಯ ಮಾಹಿತಿ

ಮಂಗಳೂರು: ಮಳೆ ಹಿನ್ನಲೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ವೇಗಕ್ಕೆ ಮಿತಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಆಡಳಿತವು ಜಿಲ್ಲೆಯ ಎನ್‌ಎಚ್-66ನಲ್ಲಿ ಸುರತ್ಕಲ್‌ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಮತ್ತು ಬಿ.ಸಿ ರೋಡ್ ನಿಂದ ನಂತೂರು ಜಂಕ್ಷನ್ ವರೆಗೆ ಎನ್‌ಎಟಚ್-73 ರಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಘನ ವಾಹನಗಳನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 60 ಕಿಮೀ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗಿದೆ ಎಂದು ಭಾರತೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ಅನುಷ್ಟಾನ ಘಟಕದ ಯೋಜನಾ […]

ಮಂಗಳೂರಿನಿಂದ ವಯನಾಡಿಗೆ ಟ್ರಕ್ ಗಳಲ್ಲಿ ಪರಿಹಾರ ಸಾಮಾಗ್ರಿಗಳ ರವಾನೆ

ಕೇರಳದ ವಯನಾಡಿನಲ್ಲಿನ ಭೂಕುಸಿತದ ಸಂತ್ರಸ್ತರಿಗೆ ಮಂಗಳೂರಿನ ಬಿ ಹ್ಯೂಮನ್ ಮತ್ತು ಹೋಪ್ ಫೌಂಡೇಶನ್ ಸಂಸ್ಥೆಗಳು ಸಂಗ್ರಹಿಸಿದ ನೆರವು ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಆಹಾರ, ಔಷಧಿ, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಎರಡು ಟ್ರಕ್‌ಗಳಲ್ಲಿ ಮಂಗಳೂರಿನಿಂದ ಸೋಮವಾರ ಕಳುಹಿಸಿಕೊಡಲಾಗಿದೆ. ಟ್ರಕ್‌ಗಳಿಗೆ ತೆರಳಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಹಸಿರು ನಿಶಾನೆ ತೋರಿದ್ದಾರೆ. ಈ ವೇಳೆ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸಂಕಷ್ಟದಲ್ಲಿರುವ ವಯನಾಡ್ ಜನತೆಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯ ಕೈಗೊಂಡಿರುವ ಬಿ ಹ್ಯೂಮನ್ ಮತ್ತು ಹೋಪ್ ಸಂಸ್ಥೆಯ […]

ಮಂಗಳೂರು; ಪಬ್ ನಲ್ಲಿ ಮಹಿಳೆಗೆ ನಿಂದನೆ; ಪುತ್ತೂರಿನ ನಾಲ್ವರು ಅರೆಸ್ಟ್

ಮಂಗಳೂರು:  ಪಾಂಡೇಶ್ವರದ ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32), ಪ್ರಿತೇಶ್ (33) ಬಂಧಿತ ಆರೋಪಿಗಳು. ಪಾಂಡೇಶ್ವರದಲ್ಲಿರುವ ಪಬ್‌ಗೆ ಮಹಿಳೆ ತನ್ನ ಗೆಳತಿ ಜತೆ ತೆರಳಿದ್ದರು. ಅಲ್ಲಿ ಪುತ್ತೂರಿನ ಯುವಕರ ತಂಡವೊಂದು ಪಾರ್ಟಿಯಲ್ಲಿ ತೊಡಗಿತ್ತು. ಅವರು ಮಹಿಳೆಗೆ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು […]

ಉಡುಪಿ ಬಸ್ ನಲ್ಲಿ ಯುವತಿ ಅಸ್ವಸ್ಥ; ಬಸ್ ನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಸಿಬ್ಬಂದಿಗಳು

ಉಡುಪಿ: ಬಸ್ ನಲ್ಲಿ ತೆರಳುತ್ತಿರುವಾಗ ಯುವತಿಯೋರ್ವಳು ಅಸ್ವಸ್ಥಗೊಂಡಿದ್ದು, ಬಸ್ ಚಾಲಕ ಮತ್ತು ನಿರ್ವಾಹಕ ಬಸ್ ನ್ನು ಆಸ್ಪತ್ರೆಗೆ ಕೊಂಡೊಯ್ದ ಘಟನೆ ಉಡುಪಿ ನಗರದಲ್ಲಿ  ನಡೆದಿದೆ. ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ  ಯುವತಿ ಅಸ್ವಸ್ಥಳಾಗಿದ್ದು, ಬಸ್ ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಎಚ್ಚೆತ್ತು ಬಸ್ ನ್ನು ನೇರ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವತಿಗೆ ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಯುವತಿಯ ಮನೆಯವರಿಗೆ ಮಾಹಿತಿ […]