Breaking News :

ವಯನಾಡಿನ ರೀತಿಯ ದುರಂತದ ಭೀತಿಯಲ್ಲಿ ಮಂಗಳೂರಿನ ಕೆತ್ತಿಕಲ್ ನಿವಾಸಿಗಳು

ವಯನಾಡಿನಲ್ಲಿ ಭೀಕರ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 360ರ ಗಡಿ ದಾಟಿದೆ. ಇನ್ನು ಕೂಡ 300 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ದುರಂತಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಸಾಂಭವ್ಯ ಘಟನೆಯನ್ನು ತಡೆಯಲು ವಿವಿಧ ರಾಜ್ಯಗಳು ಮುಂದಾಗಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯೂ ಅಂಥದ್ದೇ ಅನಾಹುತ ಸಂಭವಿಸಬಹುದಾದ ಭೀತಿ ಎದುರಾಗಿದೆ. ಮಂಗಳೂರು ನಗರ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಬಳಿ ಗುಡ್ಡೆ ಮಣ್ಣು ಕುಸಿಯುತ್ತಲೇ ಇದ್ದು ಆತಂಕ ಸೃಷ್ಟಿಸಿದೆ. ಈ ಗುಡ್ಡದ […]

ಸಂಪಾಜೆಯಲ್ಲಿ ಬೈಕ್ ಅಪಘಾತ; ಧರ್ಮಸ್ಥಳಕ್ಕೆ ಬರುತ್ತಿದ್ದ ಇಬ್ಬರು ಯುವಕರು ಮೃತ್ಯು

ಮಡಿಕೇರಿ; ರಸ್ತೆ ಬದಿಯ ಮೋರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಪಾಜೆ ಅರಣ್ಯ ಇಲಾಖಾ ಕಚೇರಿ ಬಳಿ ನಡೆದಿದೆ. ಮೃತರನ್ನು ಮೈಸೂರು ಮೂಲದ ಪವನ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ಇವರು ಬುಲೆಟ್ ಬೈಕ್ ನಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೊಯ್ನಾಡಿನ ಫಾರೆಸ್ಟ್ ಐಬಿ ಬಳಿ ಮುಖ್ಯರಸ್ತೆಯಲ್ಲಿ ರಸ್ತೆ ಬದಿಯ ಮೋರಿಗೆ ವೇಗವಾಗಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಈ ವೇಳೆ ಚರಂಡಿಗೆ ಇಬ್ಬರು ಯುವಕರು ಎಸೆಯಲ್ಪಟ್ಟು […]

ಕುಂದಾಪುರ: ಪತ್ನಿಯನ್ನು ಕೂಡಿ ಹಾಕಿ ಕೊಲೆಗೆ ಯತ್ನಿಸಿದ ಪತಿ; ಮಹಿಳೆಯನ್ನು ರಕ್ಷಿಸಲು ಹರಸಾಹಸ ಪಟ್ಟ ಪೊಲೀಸರು

ಕುಂದಾಪುರದಲ್ಲಿ; ಪತ್ನಿಯನ್ನು ಕೂಡಿಹಾಕಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಸಾಹಸಸಿಯವಾಗಿ ಬಂಧಿಸಿದ ಘಟನೆ ಬಸ್ರೂರಿನಲ್ಲಿ  ನಡೆದಿದೆ. ಲಕ್ಷ್ಮಣ (38) ಬಂಧಿತ ಆರೋಪಿ. ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಬಳಿಕ ಆರೋಪಿಯು ಮನೆಯ ಒಳಗಿನಿಂದ ಬಾಗಿಲನ್ನು ಹಾಕಿ ಕೊಠಡಿಗೆ ಯಾರೂ ಪ್ರವೇಶಿಸದಂತೆ ಕೂಡಿ ಹಾಕಿ ಬೆದರಿಸಿದ್ದಾನೆ. ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆಯಲು ಹರಸಾಹಸಪಟ್ಟಿದ್ದಾರೆ. ಆರೋಪಿಯು ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಆತನಿದ್ದ […]

ಉಪ್ಪಿನಂಗಡಿ: ದಾರುಸ್ಸಲಾಂ ದರ್ಸ್ ವಿದ್ಯಾರ್ಥಿ ನಿಧನ

ಉಪ್ಪಿನಂಗಡಿ; ದಾರುಸ್ಸಲಾಂ ದರ್ಸ್ ಕರಾಯ ವಿದ್ಯಾರ್ಥಿಯೋರ್ವ ದಿಡೀರ್ ಮೃತಪಟ್ಟ ಘಟನೆ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಿರಾಜುದ್ದೀನ್ ಗಂಡಿಬಾಗಿಲು ಮೃತ ವಿದ್ಯಾರ್ಥಿ. ಆತೂರು ನಿವಾಸಿಯಾಗಿರುವ ಸಿರಾಜುದ್ದೀನ್ ಕಳೆದ ಎರಡು ವರ್ಷಗಳಿಂದ ದಾರುಸ್ಸಲಾಂ ಬೆಳ್ತಂಗಡಿ ಸಂಸ್ಥೆಯಲ್ಲಿ ಕಲಿಯುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿ ಅನಾರೋಗ್ಯದಿಂದ ಮರಣ ಹೊಂದಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…  

ಮಂಗಳೂರು; ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು ಬಳಿ ನಡೆದಿದೆ. ಮಂಗಳೂರು ಅಲೋಶಿಯಸ್ ಕಾಲೇಜು ಗೇಟ್ ಮುಂಭಾಗದ ರಸ್ತೆಯಲ್ಲಿ ಎರಡು ಪ್ರತ್ಯೇಕ ಬಣ್ಣದ ಯುನಿಫಾರಂ ಧರಿಸಿರುವ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಕಾಲೇಜು ಬಿಟ್ಟ ಬಳಿಕ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಉಡುಪಿ; ಮುಸುಕುಧಾರಿಗಳಿಂದ ಪ್ಲ್ಯಾಟ್ ಗೆ ನುಗ್ಗಲು ಯತ್ನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಾಲ್ವರು ಮುಸುಕುಧಾರಿಗಳು ಫ್ಲ್ಯಾಟ್ ವೊಂದಕ್ಕೆ ನುಗ್ಗಲು ಯತ್ನಿಸಿ, ವಿಫಲರಾಗಿ ವಾಪಾಸ್ಸಾಗಿರುವ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಮುಸುಕುಧಾರಿಗಳು ಬಂದಿರುವುದು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ನಾಲ್ವರು ಮುಸುಕುಧಾರಿಗಳು ರಾಡ್ ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್ ಗೆ ನುಗ್ಗಲು ಯತ್ನಿಸಿದ್ದಾರೆ. ಅಪರಿಚಿತರು ಪ್ಲ್ಯಾಟ್ ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ್ದ ಫ್ಲ್ಯಾಟ್ ನಲ್ಲಿ ವಯಸ್ಸಾದ ದಂಪತಿ ವಾಸಿಸುತ್ತಿದ್ದರು. ಈ ದಂಪತಿ ಒಂದು ವಾರದ […]

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ; ಸಂಚಾರ ಬಂದ್

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ ಸಂಭವಿಸಿದ್ದು, ಸಂಚಾರ ಬಂದ್ ಆಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಮಾಣಿ- ಮೈಸೂರು ಹೆದ್ದಾರಿಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇದರ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದ ವೇಳೆ ವಾಹನ ಸಂಚಾರ ಇಲ್ಲದಿರುವುದರಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ […]

ಭಾರೀ ಮಳೆ ಹಿನ್ನೆಲೆ; ಆ.2ರಂದು ಉಡುಪಿ ಜಿಲ್ಲಾ- ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಆ.2ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.  

ಶಿರಾಡಿ ಘಾಟ್ ನ ದೊಡ್ಡತಪ್ಲು ಬಳಿ ಭೂಕುಸಿತ

ಶಿರಾಡಿ ಘಾಟ್ ನ ದೊಡ್ಡತಪ್ಲು ಬಳಿ ಮತ್ತೆ ಭೂಕುಸಿತ ಸಂಭವಿಸಿದ್ದು, ಎರಡು ಕಂಟೇನರ್ ಗಳು ಮಣ್ಣಲ್ಲಿ ಮುಳುಗಿದ್ದು, ಟ್ಯಾಂಕರ್‌ನಲ್ಲಿ ಸಿಲುಕಿದ್ದ ಚಾಲಕರನ್ನು ರಕ್ಷಿಸಲಾಗಿದೆ. ಮೂವರು ಚಾಲಕರನ್ನು ರಕ್ಷಿಲಾಗಿದ್ದು, ಸ್ಥಳದಲ್ಲಿ ಮತ್ತಷ್ಟು ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ ಕಂಟೇನರ್ ರೈಲ್ವೆ ಹಳಿ‌ ಮೇಲೆ ಬೀಳುವ ಆತಂಕ ಎದುರಾಗಿದೆ. ರೈಲ್ವೆ ಹಳಿ‌ ಮೇಲೆ ಹಾದು ಹೋಗಿರುವ ರಸ್ತೆಯ ತುದಿಯಲ್ಲಿ ಕಂಟೇನರ್‌ ಉರುಳಿಬಿದ್ದಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ […]

ಮಂಗಳೂರು; ಭಾರೀ ಮಳೆಗೆ ಬಜಾಲ್ ನಲ್ಲಿ ಮನೆ ಕುಸಿತ

ಮಂಗಳೂರು: ಭಾರೀ ಮಳೆಗೆ ಮನೆಯೊಂದು ಕುಸಿದಿರುವ ಘಟನೆ ಬಜಾಲ್ ಫೈಸಲ್ ನಗರದಲ್ಲಿ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿದ್ದ ಅಜ್ಜಿ ಮತ್ತು ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ. ಯಮುನಾ ಎಂಬವರಿಗೆ ಸೇರಿದ ಮನೆ ಕುಸಿತವಾಗಿದೆ.  ಮನೆ ಕುಸಿಯುವ ವೇಳೆ ಯಮುನಾರ ತಾಯಿ ಮತ್ತು ಮಗಳು ಮನೆಯಲ್ಲಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಅಶ್ರಫ್ ಬಜಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.