Breaking News :

ಕಾರ್ಕಳ; ಬೈಕ್ ಗೆ ಟಿಪ್ಪರ್ ಢಿಕ್ಕಿ; ಯುವಕ ಮೃತ್ಯು

ಕಾರ್ಕಳ: ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಕಾರ್ಕಳ ಪುಕ್ಕೇರಿ ಬಳಿಯ ಫುಡ್ ಬಾಸ್ಕೆಟ್ ಮುಂಭಾಗದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಪಾಸ್ ನಿವಾಸಿ, ಕಾರ್ ಮೆಕ್ಯಾನಿಕ್ ನಿಝಾಂ (21) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಬೈಪಾಸ್ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಬೈಪಾಸ್ ನಿಂದ ಕಾರ್ಕಳದತ್ತ ಬರುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸವಾರ ಕಾರ್ ಮೆಕ್ಯಾನಿಕ್ ನಿಝಾಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಾರ್ಕಳ ಸರ್ಕಾರಿ ಮೃತದೇಹ ಆಸ್ಪತ್ರೆಯಲ್ಲಿ […]

8 ತಿಂಗಳಿನಿಂದ ಕೋಮಾದಲ್ಲಿರುವ ನಿಫಾ ಸೋಂಕಿತರ ಆರೈಕೆ ಮಾಡಿದ್ದ ಕಡಬದ ಯುವಕ

ಕೇರಳದಲ್ಲಿ  ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ಯುವ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಯಂಡ್ ರಿಸರ್ಚ್ ಸೆಂಟರ್ […]

ಕುಂದಾಪುರ: ಪೊಲೀಸರ ಸೋಗಿನಲ್ಲಿ ಉದ್ಯಮಿಯ ಮನೆಗೆ ಬಂದ ಅಪರಿಚಿತರ ತಂಡ

ಕುಂದಾಪುರ: ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್‌ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರ ತಂಡವೊಂದು ಬಂಧಿರುವ ಬಗ್ಗೆ ವರದಿಯಾಗಿದೆ. ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ […]

ವಿಟ್ಲ; ಬಾಲಕಿ ಅನಾರೋಗ್ಯದಿಂದ ನಿಧನ

ವಿಟ್ಲ: ಬಾಲಕಿಯೋರ್ವಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿಟ್ಲದ ಪರ್ತಿಪ್ಪಾಡಿಯಲ್ಲಿ ನಡೆದಿದೆ. ಪರ್ತಿಪ್ಪಾಡಿ  ನಿವಾಸಿ ಗ್ಲೀನಾ ಡಿಸೋಜಾ(14) ಮೃತ ಬಾಲಕಿ. ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಗ್ಲೀನಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಂದೆ ವಿನ್ಸೆಂಟ್ ಡಿಸೋಜಾ ತಾಯಿ ಲವಿನಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಬಂಟ್ವಾಳ: ಹಫ್ತಕ್ಕಾಗಿ ಬೆದರಿಕೆ ಆರೋಪ, ಮೂವರ ವಿರುದ್ಧ ದೂರು ದಾಖಲು

ಬಂಟ್ವಾಳ: ಮೂವರು ವ್ಯಕ್ತಿಗಳು ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉದ್ಯಮಿಗಳು ನ್ಯಾಯಾಲಯದ ಮೂಲಕ ಖಾಸಗಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ಖಾಲಿದ್ ನಂದಾವರ, ಇಕ್ಬಾಲ್ ಮತ್ತು ಮತ್ತೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಉದ್ಯಮಿಗಳು ಗಣಿ ಇಲಾಖೆಯ ಪರವಾನಿಗೆ ಪಡೆದು ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಆರೋಪಿಗಳು ಲಾರಿ ಚಾಲಕ, ಹಿಟಾಚಿ ಚಾಲಕ, ಮಾಲಕರಿಗೆ ಪ್ರತೀ ಟ್ರಿಪ್ ಲಾರಿಗೆ 500 ರೂ. ಇಲ್ಲವೇ ಒಂದು ಸಾವಿರ ರೂ. ಕೊಡಬೇಕು, […]

ಬೆಳ್ತಂಗಡಿ; ಬೈಕ್ ಗೆ ಬೊಲೆರೋ ಢಿಕ್ಕಿ; ಬಾಲಕಿ ಮೃತ್ಯು

ಬೆಳ್ತಂಗಡಿ:  ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಕಲ್ಮಂಜ ಗ್ರಾಮದ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿಯಾದ ಅನರ್ಘ್ಯ ಮೃತ ಬಾಲಕಿ. ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯಲ ಆರನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೈಕ್​ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಬೊಲೆರೊ 30 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಅನರ್ಘ್ಯ ಕೊನೆಯುಸಿರೆಳೆದಿದ್ದಾಳೆ. ಅಪಘಾತ ಬಳಿಕ ವಾಹನದ ಸಮೇತ ಪರಾರಿಯಾಗುತ್ತಿದ್ದವನನ್ನು […]

ಉಳ್ಳಾಲ: ಸಯ್ಯದ್ ಅಲವಿ ತಂಙಳ್ ನಿಧನ

ಉಳ್ಳಾಲ:  ಸಯ್ಯದ್ ಆಲವಿ ತಂಙಳ್  ಅವರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳರಿಂಗೆಯಲ್ಲಿ ನಡೆದಿದೆ. ಕಿನ್ಯ ಸುನ್ನೀ ಸೆಂಟರ್ ಎಸ್ ವೈ ಎಸ್ ಕಚೇರಿಯಲ್ಲಿ ನಡೆದ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಸಯ್ಯದ್ ಆಲವಿ ತಂಙಳ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ‌‌ ಈ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಂಙಳ್ ಅವರು ಹೊಸನಗರ, ಬಾಳೆಹೊನ್ನೂರು, ಚಿಕ್ಕಮಗಳೂರು ಸಹಿತ ವಿವಿಧೆಡೆ ಖತೀಬ್ ರಾಗಿ ಸೇವೆ ಸಲ್ಲಿಸಿದ್ದರು.

ಬೆಳ್ತಂಗಡಿ; ನೆರಿಯ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ, ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

ಬೆಳ್ತಂಗಡಿ: ಭಾರೀ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನ ನೆರಿಯ ಸೇರಿದಂತೆ ವಿವಿಧೆಡೆ ವ್ಯಾಪಕ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಣಿಯೂರಿನಿಂದ ನೆರಿಯ ಗ್ರಾಮ ಪಂಚಾಯತ್ ವರೆಗೆ ರಸ್ತೆ ಬದಿಯಲ್ಲಿದ್ದ ಮರಗಳು ಧರೆಗೆ ಉರುಳಿವೆ. ಪೆರಿಯಡ್ಕ ರಸ್ತೆಯಲ್ಲೂ ಹಲವು ಮರಗಳು ನೆಲಕ್ಕುರುಳಿವೆ. ಅಣಿಯೂರು ಬೀಟಿಗೆ ರಸ್ತೆ, ಅಪ್ಪಿಲ ಕುಕ್ಕೆಜಾಲು ರಸ್ತೆ ಸೇರಿದಂತೆ ವಿವಿಧೆಡೆ ಮರಗಳು ಮುರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯರ ಮಾಹಿತಿ ಪ್ರಕಾರ 40ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿಬಿದ್ದಿವೆ. ಇದರಿಂದ ನೆರಿಯ […]

ಬಂಟ್ವಾಳ; ಮನೆಯೊಳಗೆ ಜುಗಾರಿ ಅಡ್ಡೆ; ಪೊಲೀಸ್ ದಾಳಿ, ಹಲವರು ವಶಕ್ಕೆ

ಬಂಟ್ವಾಳ:  ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಯಚಂದ್ರ ಬೊಳ್ಳಾರ್ ಎಂಬಾತನ ಒಡೆತನದ ಪಿಲಿಮೊಗರು ಗ್ರಾಮದ ನಡಾಯಿ ಎಂಬಲ್ಲಿರುವ ಮನೆಯೊಳಗೆ ಇಸ್ಪೀಟ್ ಎಲೆಗಳನ್ನು ಬಳಸಿ ಆಟವಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ […]

ವಿಟ್ಲ: ರಿಕ್ಷಾ & ಕಾರಿನ ನಡುವೆ ಭೀಕರ ಅಪಘಾತ: ರಿಕ್ಷಾ ಚಾಲಕ ಮೃತ್ಯು

ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತರು. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.