ಮಂಗಳೂರು: ಅಪಘಾತದಲ್ಲಿ ಯುವಕ ಮೃತ್ಯು

ಮಂಗಳೂರು: ಭೀಕರ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್ ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಹಳೆಯಂಗಡಿ ಇಂದಿರಾನಗರ ನಿವಾಸಿ ಗಣೇಶ ದೇವಾಡಿಗ(27) ಮೃತ ದುರ್ದೈವಿ. ಗಣೇಶ ಅವರು ಪಣಂಬೂರಿಗೆ ಕೆಲಸಕ್ಕೆ ಹೋಗುವಾಗ ಮುಕ್ಕ ಜಂಕ್ಷನ್ ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಬಳಿ ಸ್ಕೂಟರ್ ಗೆ ವಾಹನವೊಂದು ಢಿಕ್ಕಿ ಹೊಡೆದಿದೆ. ಗಂಭೀರವಾಗಿದ್ದ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ […]
ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ; ಯುವಕ ಮೃತ್ಯು

ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲೂಕಿನ ಗುತ್ತಿಹಳ್ಳ ಬಳಿ ನಡೆದಿದೆ. ಶಿವಮೊಗ್ಗ ತಾಲೂಕಿನ ಸಂಪಿಗೆಹಳ್ಳ ನಿವಾಸಿಯಾಗಿರುವ ಮಂಜುನಾಥ್ ಗದ್ದೆಮನೆ(27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಆಯನೂರಿನಿಂದ ಬೆಜ್ಜವಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್ ಡೈರಿಗೆ ಹಾಲು ಹಾಕಿ ಸಂಪಿಗೆಹಳ್ಳದ ಮನೆಗೆ ಬರುತ್ತಿದ್ದ ಮಂಜುನಾಥ್ ಬೈಕಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಇಬ್ಬರೂ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತದಲ್ಲಿ […]
ಹಿಜಾಬ್ ವಿವಾದ: ಕುಂದಾಪುರ ಕಾಲೇಜಿನ ಪ್ರಾಂಶುಪಾಲರನ್ನು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯಿಂದ ಕೈಬಿಟ್ಟ ಸರಕಾರ

ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಟೀಕೆಗೆ ಗುರಿಯಾಗಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಅವರನ್ನು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯಿಂದ ಕೊನೆಯ ಕ್ಷಣದಲ್ಲಿ ರಾಜ್ಯ ಸರಕಾರ ಕೈಬಿಟ್ಟಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿದ್ದಾಗ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆವರಣದಲ್ಲೇ ತಡೆದು ಪ್ರವೇಶ ನಿರಾಕರಿಸಿದ್ದರು. ಇದೀಗ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ ಪ್ರಕಟಗೊಂಡಿದ್ದರ ಬಗ್ಗೆ ಒಂದು ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಆಕ್ರೋಶಕ್ಕೆ ಮಣಿದ […]
ಮಂಗಳೂರು; ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕ ಹೃದಯಾಘಾತದಿಂದ ಮೃತ್ಯು

ಮಂಗಳೂರು:ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕರೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ. ಬಜಾಲ್ ವಿದ್ಯಾ ನಗರದ ನಿವಾಸಿ ಇಕ್ಬಾಲ್ (47)ಮೃತ ಚಾಲಕ. ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು. ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್ ರವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಮೂರು ಮಕ್ಕಳು ಮತ್ತು […]
ಮಂಗಳೂರು: ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಯುವಕ ಮೃತ್ಯು

ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕನೋರ್ವ ಸಾವನ್ನಪ್ಪಿದ ಘಟನೆ ಮೂಡುಪೆರಾರ ಕಾಯರಾಣೆಯಲ್ಲಿ ನಡೆದಿದೆ. ಮೂಡುಪೆರಾರ ಕಾಯರಾಣೆ ನಿವಾಸಿ ಪ್ರದೀಪ್ ಪೂಜಾರಿ(31)ಮೃತ ದುರ್ದೈವಿ. ಭಾನುವಾರ ಸಂಜೆ ಮೂಡುಪೆರಾರ ಕಾಯಾರಣೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪ್ರದೀಪ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಮೊದಲಿಗೆ ಕೈಕಂಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಬಜ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರದೀಪ್ ಪಡುಪೆರಾರ ಗ್ರಾಮ ಪಂಚಾಯತ್ […]
ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ಶಶಿಕಾಂತ್ ಸೆಂಥಿಲ್

ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಇದೀಗ ತಮಿಳುನಾಡಿನಲ್ಲಿ ಸಂಸದರಾಗಿದ್ದಾರೆ. ಜಿಲ್ಲಾಧಿಕಾರಿ ಹುದ್ದೆಗೆ ದಿಡೀರ್ ರಾಜೀನಾಮೆ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದ ಶಶಿಕಾಂತ್ ಸೆಂಥಿಲ್ ಇದೀಗ ತನ್ನ ರಾಜೀನಾಮೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮಂಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಹೆಂಡತಿಯೊಟ್ಟಿಗೆ ಕುಳಿತು ಟಿವಿ ನೋಡುವಾಗ, ಆಕೆ ನೀನು ಕಾಲೇಜು ದಿನಗಳಲ್ಲಿ ಎಷ್ಟು ರೆಬೆಲ್ ಆಗಿದ್ದೆ ನೆನಪಿದೆಯಾ.? ಎಂದು ಹೇಳಿದಳು. ಈ ಒಂದೇ ಒಂದು ಮಾತಿನಿಂದ ರಾತ್ರಿಯಿಡೀ ಮನಸ್ಸಿಗೆ ಭಾರಿ ನೋವುಂಟಾಯಿತು.ಮರುದಿನ ಬೆಳಗ್ಗೆ ನನ್ನ ಹೆಂಡತಿಗೆ ಡಿಸಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ತಿಳಿಸಿದೆ. […]
ಕಾರ್ಕಳದಲ್ಲಿ ವಿವಾದಾತ್ಮಕ ಬ್ಯಾನರ್ ಅಳವಡಿಸಿದ ಕಿಡಿಗೇಡಿಗಳು

ಕಾರ್ಕಳ: ಕಾರ್ಕಳದಲ್ಲಿ ವಿವದಾತ್ಮಕ ಬ್ಯಾನರ್ ವೊಂದು ಪತ್ತೆಯಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. ಸಾಣೂರು ಗ್ರಾಮದ ಕಮಲಾಕ್ಷ ನಗರ ಎಂಬಲ್ಲಿ “ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್! ಜಾಗ್ರತೆ ಎಂದು ಸತೀಶ್, ಒನ್ ಆಫ್ ದಿ ಫ್ರೀಡಂ ಫೈಟರ್ ಎಂಬ ಹೆಸರಿನಲ್ಲಿ ಕಿಡಿಗೇಡಿಗಳು ಬ್ಯಾನರ್ ಅಳವಡಿಸಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯ ಹದಗೆಡಿಸಲು ಮಾಡಿರುವ ಕುತಂತ್ರ ಎನ್ನುವುದನ್ನು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಸಾಣೂರು ಗ್ರಾಮದ ಮುರತಂಗಡಿ ಕಮಲಾಕ್ಷ […]
ಬಜ್ಪೆ; ವಿಮಾನದಲ್ಲಿ ಸಿಗರೇಟು ಸೇದಿದ ಯುವಕ; ಪ್ರಕರಣ ದಾಖಲು

ಮಂಗಳೂರು: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ವಿಮಾನದಲ್ಲಿ ಸಿಗರೇಟ್ ಸೇದಿದ ಆರೋಪದ ಮೇಲೆ ಪ್ರಯಾಣಿಕನೋರ್ವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜೇಶ್ವರ ನಿವಾಸಿ ಮುಶಾದಿಕ್ ಹುಸೇನ್ (24) ಎಂಬಾತನ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 31ರ ಸಂಜೆ ಅಬುದಾಬಿಯಿಂದ ಇಂಡಿಗೋ ವಿಮಾನದ ಮೂಲಕ ಮುಶಾದಿಕ್ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ಮುಷಾದಿಕ್ ವಿಮಾನದ ವಾಶ್ ರೂಂನಲ್ಲಿ ಸಿಗರೇಟ್ ಸೇದಿದ್ದಾರೆ ಎನ್ನಲಾಗಿದೆ. ಈ […]
ಮಂಗಳೂರು: ಆಟವಾಡುತ್ತಿದ್ದ ಮಗುವಿನ ಅಪಹರಣ; ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು

ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್ ಕುಮಾರ್(59)ಬಂಧಿತ ಆರೋಪಿ. ಪಡೀಲ್‌ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ 4.30ರ ವೇಳೆಗೆ […]
ಉಡುಪಿ: ತಾಯಿ ಮಕ್ಕಳ ಕೊಲೆ ಪ್ರಕರಣ, ಆರೋಪಿಯ ವಿಚಾರಣೆಗಿದ್ದ ತಡೆಯಾಜ್ಞೆ ತೆರವು

ಉಡುಪಿಯ ನೇಜಾರಿನಲ್ಲಿ ನಡೆದಿದ್ದ ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದ ವಿಚಾರಣೆಗೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಇದಲ್ಲದೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲು ಅನುಮತಿ ನೀಡಿದೆ. ಬೆದರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾ ಯಿಸುವಂತೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು […]