ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಲೈಂಗಿಕ ದೌರ್ಜನ್ಯದ ಫೋಟೊ, ಸೆಲ್ಫಿ ವೀಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿರುವುದಾಗಿ ಆರೋಪಿಸಲಾಗಿದೆ. ಅರುಣ್ ಕುಮಾರ್ ಪುತ್ತಿಲ ವಿರುದ್ಧ ಐಪಿಸಿ ಸೆಕ್ಷನ್ 417, 354A, 506ರಡಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. 47 ವರ್ಷದ ಮಹಿಳೆಯಿಂದ ಬೆಂಗಳೂರಿನ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, 2023 ಜೂನ್ನಲ್ಲಿ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಫೋಟೊ, […]
ಕಾಪು: ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ

ಕಾಪು: ಸಮುದ್ರ ಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಇಂದು ಕಾಪು ಬೀಚ್ ನಲ್ಲಿ ನಡೆದಿದೆ. ಕಾಪು ಪಡುಗ್ರಾಮದ ನಿವಾಸಿ ಸಚಿನ್(31) ಸ್ಥಳೀಯ ಮೀನುಗಾರರಿಂದ ರಕ್ಚಿಸಲ್ಪಟ್ಟ ಯುವಕ. ಸಚಿನ್ ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು. ಇದನ್ನು ಗಮನಿಸಿದ ಮೀನುಗಾರಿಕಾ ವೃತ್ತಿನಿರತರಾದ ಶರ್ಮಾ, ಹರೀಶ್ ಕರ್ಕೇರ ಅವರು ಸಮುದ್ರಕ್ಕೆ ಇಳಿದು ಯುವಕನ ಪ್ರಾಣ ರಕ್ಷಿಸಿದ್ದಾರೆ. ಯುವಕನನ್ನು ರಕ್ಷಿಸಿ ಮೇಲಕ್ಕೆ ಕರೆತರುವಾಗ ರಕ್ಷಣಾ ದೋಣಿ ಕೂಡಾ […]
ಮಂಗಳೂರು: ಯುವತಿ ಮೇಲೆ ಹಲ್ಲೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು: ಅನುಪಮ್ ಅಗರ್ ವಾಲ್

ಮಂಗಳೂರು ನಗರದ ಲಾಲ್‌ಬಾಗ್ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ಯುವತಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.25ರಂದು ಘಟನೆ ನಡೆದಿದ್ದು, ಹೊಟೇಲ್‌ನ ಪಾರ್ಕಿಂಗ್ ಜಾಗದಲ್ಲಿ ಗಲಾಟೆಯಾಗಿದೆ. ಯುವತಿ ನೀಡಿದ ದೂರಿನ ಪ್ರಕಾರ ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಿಸಿ […]
ಮಂಗಳೂರು: ಬಸ್ ಢಿಕ್ಕಿಯಾಗಿ ಆಟೋ ಚಾಲಕ ಮೃತ್ಯು

ಮಂಗಳೂರು: ಬಸ್ ಆಟೋಗೆ ಡಿಕ್ಕಿಯಾಗಿ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಹಂಪನಕಟ್ಟೆ ಖಾಸಗಿ ಹೊಟೇಲ್ ಬಳಿ ಇಂದು ನಡೆದಿದೆ. ಆಟೋ ಚಾಲಕ ದೇವರಾಜ್ ಮೃತರು. ಅವಘಡದಲ್ಲಿ ಆಟೋ ಚಾಲಕ ದೇವರಾಜ್ ಅವರಿಗೆ ಗಂಭೀರ ಗಾಯವಾಗಿದ್ದರಿಂದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೇವರಾಜ್ ಅವರು ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಇನ್ನು ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು: ಅನುಮಾನಾಸ್ಪದ ಚಟುವಟಿಕೆ ಆರೋಪ; ಇಬ್ಬರು ಮಹಿಳೆಯರು ವಶಕ್ಕೆ

ಪುತ್ತೂರು: ಬನ್ನೂರು ಕರ್ಮಲದ ಪೊಲೀಸ್ ವಸತಿ ನಿಲಯದ ಸಮೀಪದ ಬಾಡಿಗೆ ಮನೆಯೊಂದರ ಮೇಲೆ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಮಹಿಳೆಯರು ಮಾತ್ರ ಇದ್ದು ಬೇರೆ ಯಾರೂ ಕಂಡು ಬಂದಿಲ್ಲ. ವಿಚಾರಣೆ ವೇಳೆ ಇನ್ನೋರ್ವ ಮಹಿಳೆ ಮನೆಯೊಡತಿಯ ಗೆಳತಿ ಎಂದು ಹೇಳಿದ್ದಾಳೆನ್ನಲಾಗಿದೆ. ಇಬ್ಬರು ಮಹಿಳೆಯರ ಪೈಕಿ ಒಬ್ಬರು ಮುಸ್ಲಿಂ, […]
ಉಪ್ಪಿನಂಗಡಿ: ವಾಹನ ತಡೆದು ಹಲ್ಲೆ, ಪ್ರಕರಣ ದಾಖಲು

ವಾಹನವನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ವ್ಹಕ್ತಿಯೋರ್ವರು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಣಿಯೂರು ನಿವಾಸಿ ಸಿದ್ದಿಕ್(43) ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ ಎಂಬವರು ಅಲ್ಲಿ ಪೋನ್ ನಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆ […]
ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ತೇಲಿ ಹೋದ ಮೃತದೇಹ

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹವೊಂದು ತೇಲಿ ಹೋಗಿದೆ. ಪ್ರವಾಹ ರಕ್ಷಣಾ ತಂಡದವರು ಮೃತದೇಹವನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನೀಲಿ ಬಣ್ಣದ ಒಳ ಉಡುಪನ್ನು ಧರಿಸಿದ್ದ ವ್ಯಕ್ತಿಯ ಮೃತದೇಹವೊಂದು ನದಿಯಲ್ಲಿ ತೇಲಿ ಹೋಗುತ್ತಿರುವುದನ್ನು ಸಾರ್ವಜನಿಕರು ಮಠ ಪ್ರದೇಶದಲ್ಲಿ ನೋಡಿದ್ದರು. ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲೆ ನಿಂತಿದ್ದ ಸಾರ್ವಜನಿಕರಿಗೂ ಅದು ಕಾಣಸಿಕ್ಕಿತ್ತು. ಅವರು ಗೃಹರಕ್ಷಕ ದಳ ಹಾಗೂ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದರು. ರಕ್ಷಣಾ ತಂಡವು ಸ್ಥಳಕ್ಕೆ ಬರುವಷ್ಟರಲ್ಲಿ ದೇಹವು ನದಿಯಲ್ಲಿ ಮುಂದಕ್ಕೆ […]
ಕಾಪು ಪುರಸಭೆ ಚುನಾವಣೆ; ಎಸ್ ಡಿಪಿಐ ಸದಸ್ಯೆ ಬಿಜೆಪಿ ಸೇರ್ಪಡೆ, ಉಪಾಧ್ಯಕ್ಷೆಯಾಗಿ ಆಯ್ಕೆ

ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಆಪರೇಷನ್ ಕಮಲ ಸದ್ದು ಮಾಡಿದ್ದು, ಎಸ್‌ಡಿಪಿಐಗೆ ಭಾರತೀಯ ಜನತಾ ಪಕ್ಷ ಆಪರೇಷನ್ ಮಾಡಿದೆ. ಎಸ್‌ಡಿಪಿಐನಿಂದ ಗೆದ್ದಿರುವ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗಿ ಮಧ್ಯಾಹ್ನ ಪುರಸಭೆ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಧ್ಯಕ್ಷ /ಉಪಾಧ್ಯಕ್ಷ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ […]
ಉಪ್ಪಿನಂಗಡಿ: ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಅರೆಸ್ಟ್

ಉಪ್ಪಿನಂಗಡಿ: ರಸ್ತೆ ಕನ್ ಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಕಳ್ಳ ಹಾಗೂ ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಡಬ ತಾಲೂಕು ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಅಬ್ದುಲ್ ಹಮೀದ್ ಅಲಿಯಾಸ್ ಹಮೀದ್(27) ಎಂದು ಗುರುತಿಸಲಾಗಿದೆ. ಈತ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಆರೋಪಿಯು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪರಿಯಶಾಂತಿ, […]
ಎಂಎಲ್ ಸಿ ಐವನ್ ಡಿಸೋಜಾ ಮನೆಗೆ ಕಲ್ಲು ಎಸೆತ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಎಂಎಲ್ ಸಿ ಐವನ್ ಡಿಸೋಜಾ ಮನೆಗೆ ಕಲ್ಲು ಎಸೆದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲಡ್ಕದ ದಿನೇಶ್(20) ಮತ್ತು ಭರತ್(24) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತರಿಬ್ಬರೂ ವಿಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಎಂದು ಹೇಳಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯವನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಬುಧವಾರ ರಾತ್ರಿ ಬೈಕ್ ನಲ್ಲಿ ಹೆಲ್ಮೆಟ್ ಹಾಕಿ ಬಂದ ಇಬ್ಬರು ಕಿಡಿಗೇಡಿಗಳು ಐವನ್ ಮನೆಗೆ ಕಲ್ಲುತೂರಾಟ ನಡೆಸಿ, ಪರಾರಿಯಾಗಿದ್ದರು.