ಕಾರ್ಕಳ ಅತ್ಯಾಚಾರ ಪ್ರಕರಣ; ಆರೋಪಿಯ ತಾಯಿ ಮತ್ತು ಸಹೋದರ ಹೇಳುವುದೇನು? ಡಿಟೇಲ್ಸ್….

ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಆರೋಪಿ ಅಲ್ತಾಫ್ ತಾಯಿ ಆಯಿಷಾ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ದುಡಿಯುತ್ತಾನೆ ರಾತ್ರಿ 12 ಗಂಟೆಗೆ ಬರುತ್ತಾನೆ. ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಪೊಲೀಸರು ನಮ್ಮ ಬಳಿ ಏನೂ ಕೇಳಿಲ್ಲ. ನಮ್ಮ ಊರು ತೀರ್ಥಹಳ್ಳಿ. ನನ್ನ ಮಗ ಮರಳಿನ ವ್ಯಾಪಾರ ಮಾಡುತ್ತಿದ್ದಾನೆ, ಮದುವೆಯಾಗಿದೆ. ಎರಡು ಮಕ್ಕಳು ಇದ್ದಾರೆ. ಘಟನೆ ನಡೆದ ಮೇಲೆ ನಾವು ಪೊಲೀಸ್ ಠಾಣೆಗೆ ಹೋದಾಗ ಮತ್ತೆ […]
ಮಂಗಳೂರು: ಮಾದಕ ವಸ್ತು ಸೇವನೆ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು:ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ನಗರದ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಸೀರ್(27) ಮತ್ತು ಶಾಂತಿನಗರದ ಮೊಹಮ್ಮದ್ ನೌಶೀನ್(29) ಬಂಧಿತ ಆರೋಪಿಗಳು. ಆ.23ರಂದು ರಾತ್ರಿ ಕಾವೂರು ಶಾಂತಿನಗರದ ಮೈದಾನದ ಬಳಿ ಇದ್ದ ಕೂಳೂರಿನ ಮೊಹಮ್ಮದ್ ಆಸೀರ್(27) ಮತ್ತು ಶಾಂತಿನಗರದ ಮೊಹಮ್ಮದ್ ನೌಶೀನ್(29)ನನ್ನು ಅನುಮಾನದಿಂದ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಪುತ್ತೂರು: ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳ ಬಂಧನ, ಜಾಮೀನಿನಲ್ಲಿ ಬಿಡುಗಡೆ

ಪುತ್ತೂರು: ಕೋರ್ಟ್ ರಸ್ತೆಯಲ್ಲಿನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಕೋಡಿಂಬಾಡಿಯ ಧನ್‌ರಾಜ್, ರಾಮಕುಂಜದ ಬಾರಿಂಜ ನಿವಾಸಿ ಕಿರಣ್ ಕುಮಾರ್ ಮತ್ತು ಬೆಳ್ತಂಗಡಿ ಊರಮಾಲ್ ನಿವಾಸಿ ಸಂಜಯ್ ಗೌಡ ಅಲಿಯಾಸ್ ಸಂಜೀವ ಗೌಡ ಬಂಧಿತ ಆರೋಪಿಗಳು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಅಡ್ಡೂರು ಗ್ರಾಮದಲ್ಲಿ ಭರತ್ ಶೆಟ್ಟಿಗೆ 826 ಮತ ಹಾಕಿದ್ದು ಪಾಕಿಸ್ತಾನಿಯರೇ? ಇನಾಯತ್ ಅಲಿ ಪ್ರಶ್ನೆ

ಅಡ್ಡೂರು ಗ್ರಾಮವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಶಾಸಕ ಭರತ್ ಶೆಟ್ಟಿ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ. ಅಡ್ಡೂರು ಗ್ರಾಮದಲ್ಲಿ 826 ಮತಗಳು ಭರತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಹಾಗಾದ್ರೆ ಮಿಸ್ಟರ್ ಭರತ್ ಶೆಟ್ರೇ ನಿಮಗೆ ಮತ ಹಾಕಿ ಗೆಲ್ಲಿಸಿದವರು ಪಾಕಿಸ್ತಾನಿಯರೇ? ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪ್ರಶ್ನಿಸಿದ್ದಾರೆ. ಶಾಸಕ ಭರತ್ ಶೆಟ್ಟಿ ಪಾಕಿಸ್ತಾನ ಹೇಳಿಕೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಇನಾಯತ್ ಆಲಿ ಕರಡಿಗೆ ಗೊತ್ತಿರೋದು ನಾಲ್ಕೇ ಹಾಡು ಎಲ್ಲ ಜೇನುತುಪ್ಪದ ಬಗ್ಗೆ ಅನ್ನುವಂತೆ […]
ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ; ಅಳಿಯ, ಮೊಮ್ಮಗನ ಬಂಧನ; ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಬೆಳ್ತಂಗಡಿಯ ಬೆಳಾಲು ಗ್ರಾಮಾದಲ್ಲಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಜ್ಯೋತಿಷಿಯಾಗಿರುವ, ಮೃತರ ಅಳಿಯ ರಾಘವೇಂದ್ರ ಕೆದಿಲಾಯ (53) ಹಾಗೂ ಮೊಮ್ಮಗ ಮುರಳೀಕೃಷ್ಣ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮೆರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. […]
ಅನಾಥ ಯುವತಿಗೆ ಮುಂದೆ ನಿಂತು ವಿವಾಹ ಮಾಡಿಸಿಕೊಟ್ಟ ಉಡುಪಿ ಡಿಸಿ

ಅನಾಥೆಯಾಗಿದ್ದ ವಧುವನ್ನು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದ್ದಾರೆ. 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ.ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ.(29) ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಉಡುಪಿ ಸಮೀಪದ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ […]
ಕಾರ್ಕಳ ಯುವತಿ ಮೇಲಿನ ಅತ್ಯಾಚಾರ ಪ್ರಕರಣ; ಐಜಿಪಿ ಅಮಿತ್ ಸಿಂಗ್ ಪ್ರತಿಕ್ರಿಯೆ, ಪ್ರಕರಣದಲ್ಲಿನ ಗೊಂದಲದ ಬಗ್ಗೆ ಸ್ಪಷ್ಟೀಕರಣ

ಉಡುಪಿ ಜಿಲ್ಲೆಯ ಕಾರ್ಕಳದ ಹಿಂದೂ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿನ ಕೆಲವು ಗೊಂದಲದ ಬಗ್ಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಕಳದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಯುವಕರಿಬ್ಬರು, ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ […]
ಮನೆಯ ಮೇಲೆ ಕಲ್ಲು ಎಸೆತ; ಐವನ್ ಡಿಸೋಜಾ ಹೇಳಿದ್ದೇನು ಗೊತ್ತಾ?

ತನ್ನ ಮನೆಯ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ. ಕೆಲವರು ನನ್ನ ಮನೆಗೆ ದಾಳಿಯಾಗಿದ್ದು ತಡವಾಯ್ತು ಅಂತಾ ಹೇಳಿದ್ದಾರೆ. ಅಂಥವರಿಗೆ ನಾನು ಶುಭ ಕೋರುತ್ತೇನೆ.ನನ್ನ ಮನೆಗೆ ಕಲ್ಲು ತೂರಬಹುದು ಆದರೆ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂತದ್ದಕ್ಕೆಲ್ಲ ಜಗ್ಗಲ್ಲ ಎಂದು ಹೇಳಿದ್ದಾರೆ. ಭರತ್ ಶೆಟ್ಟಿ ಹಿಂದೆ ರಾಹುಲ್ ಗಾಂಧಿಯವರ ಕಪಾಳಕ್ಕೆ ಬಾರಿಸಬೇಕು ಎಂದಿದ್ದರು. ವೇದವ್ಯಾಸ ಕಾಮತ್ ಜೆರೋಸಾ ಶಾಲೆಯಲ್ಲಿ ಗಲಾಟೆ ಮಾಡಿದ್ರು. ಇದೆಲ್ಲ ಈ ಅವರಿಗೆ ಆ […]
ಕಾರ್ಕಳ: ಯುವತಿಯನ್ನು ಅಪಹರಿಸಿ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಕಾರ್ಕಳದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಆರೋಪಿಗಳ ಬಂಧನದ ಕುರಿತು ಕುದ್ದು ಉಡುಪಿ ಜಿಲ್ಲಾ ಎಸ್ಪಿ ಕೆ ಅರುಣ್ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಆರೋಪಿಗಳಾದ ಅಲ್ತಾಫ್ ಹಾಗೂ ಇನ್ನೋರ್ವನನ್ನು ಬಂಧಿಸಲಾಗಿದ್ದು ಇವರು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಅಲ್ತಾಫ್ ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯವಾಗಿದ್ದರು. ಅಲ್ತಾಫ್ ಶುಕ್ರವಾರ ಸಂತ್ರಸ್ತೆಗೆ ಕರೆ ಮಾಡಿ ಒಂದು ಕಡೆಗೆ […]
ಸುಳ್ಯ; ಮಸೀದಿ ವಠಾರಕ್ಕೆ ಬಂದು ಕಿಡಿಗೇಡಿಗಳಿಂದ ಬೆದರಿಕೆ: ಪ್ರಕರಣ ದಾಖಲು

ಸುಳ್ಯ; ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ರಾತ್ರಿ ವೇಳೆ ಇಬ್ಬರು ದುಷ್ಕರ್ಮಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುವ ಬಗ್ಗೆ ಮಸೀದಿ ಕಮಿಟಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ. ಎಲಿಮಲೆ ಮಸೀದಿಗೆ ಗುರುವಾರ ರಾತ್ರಿ ಸುಮಾರು 11 ಗಂಟೆಗೆ ಸತೀಶ್ ಗುಡ್ಡನಮನೆ ಮತ್ತು ಇತರರು ಬಂದು ಮಸೀದಿಯ ಆವರಣದಲ್ಲಿ ನಿಂತು ಜೋರಾಗಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ […]