ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಜನತೆಗೆ ಪ್ರತಕ್ಷಲಾದ ಕಾವೇರಿ ಮಾತೆ

ಜನವಾಹಿನಿ NEWS ಮಡಿಕೇರಿ : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಗಂಟೆಗೆ ಸರಿಯಾಗಿ ತೀರ್ಥರೂಪಿಣಿಯಾಗಿ ಶ್ರೀ ಕಾವೇರಿ ಮಾತೆ ಭಕ್ತಾದಿಗಳಿಗೆ ದರ್ಶನ ನೀಡಿದಳು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಜೈ ಜೈ ಮಾತಾ, ಕಾವೇರಿ ಮತಾ ಜಯಘೋಷದ ನಡುವೆ ಶ್ರೀ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಕಂಡಳು. ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನಗಳು ಆರಂಭವಾಗಿದ್ದವು, ಭಕ್ತರು ತಂಡೋಪ ತಂಡವಾಗಿ ಆಗಿಮಿಸುತ್ತಿದ್ದು ಕಂಡು ಬಂದಿತ್ತು. ಮಧ್ಯಾಹ್ನ 1 ಗಂಟೆ […]
ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಆರ್.ಪುಷ್ಪಲತಾ ನೇಮಕ

ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಜಿ.ಆರ್.ಪುಷ್ಪಲತಾ ನೇಮಕಗೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಲಂಬಾ ರವರ ನಿರ್ದೇಶನದ ಮೇರೆಗೆ ಕರ್ನಾಟಕ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೌಮ್ಯ ರೆಡ್ಡಿಯವರು ನೇಮಕಾತಿ ಆದೇಶ ಜಾರಿಗೊಳಿಸಿದ್ದಾರೆ. ಪುಷ್ಪಲತಾ ರವರು ಈ ಹಿಂದೆ 2017-18 ರಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಈಗ ಎರಡನೇ ಬಾರಿಗೆ ಕೊಡಗು ಮಹಿಳಾ […]
ಮೂರ್ನಾಡು : ಕೈಲ್ ಮುಹೂರ್ತ ಹಬ್ಬದ ಆಟೋಟ

ಜನವಾಹಿನಿ NEWS ಮೂರ್ನಾಡು : ಇಲ್ಲಿನ ನಂ.೪೩೯ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ ೧೦೧ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್ನ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಮೂರ್ನಾಡು ಪೊಲೀಸ್ ಉಪಠಾಣೆಯ ಪೊಲೀಸ್ ಅಧಿಕಾರಿ ಪಟ್ರಪಂಡ ಮೊಣ್ಣಪ್ಪ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿ ಕೊಡಗಿನ ಯುವಜನತೆ ಎಲ್ಲರೂ ಕ್ರೀಡಾಪುಟುಗಳಾಗಬೇಕು. ಮೂರ್ನಾಡು ಪಕ್ಕದಲ್ಲಿಯೆ ಅಂತರಾಷ್ಟ್ರೀಯ […]
ಪ್ರವೀಣ್ ಗೆ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ – ಸಿದ್ದಾಪುರದಲ್ಲಿ ಸಂಭ್ರಮ

ಜನವಾಹಿನಿ NEWS ಸಿದ್ದಾಪುರ : ನ್ಯಾಶನಲ್ ಯೂತ್ ಅವಾರ್ಡ್ಸ್ ಪ್ರಶಸ್ತಿ ವಿಜೇತರಾದ ನಿಫಾ ಇಂಡಿಯಾ ತನ್ನ ಸಿಲ್ವರ್ ಜ್ಯೂಬಿಲಿ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ರಾಲಿಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಸಿದ್ದಾಪುರದ ಪ್ರವೀಣ್ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಗೆ ಭಾಜನರಾಗಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿಯನ್ನು ತಂದ ಪ್ರವೀಣ್ ದೆಹಲಿಯಿಂದ ತನ್ನ ಹುಟ್ಟೂರಾದ ಸಿದ್ಧಾಪುರ ನಗರಕ್ಕೆ ಬಂದ ಸಂದರ್ಭ ಚೆಂಡ ಮೇಳದೊಂದಿಗೆ ಬರಮಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸದರು. ಕೇಸರಿ ಯೂತ್ ಕ್ಲಬ್ ನ […]
ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಪದಗೃಹಣ

ಜನವಾಹಿನಿ NEWS ಬೆಂಗಳೂರು : ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಅಧಿಕೃತ ಕಚೇರಿಯಲ್ಲಿ, ಸನ್ಮಾನ್ಯ ಚೆಪ್ಪುಡೀರ ಅರುಣ್ ಮಾಚಯ್ಯರವರು ಪದಗ್ರಹಣಗೈದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸ ರಾಜು , ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಶ್ರೀಮತಿ ಕಾಂಚನ್ ಪೊನ್ನಣ್ಣ ಹಾಗೂ ಜಿಲ್ಲೆಯಿಂದ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಕರಿಸಲು ತೆರಳಿದ ಕಾಂಗ್ರೆಸ್ ಮುಖಂಡರುಗಳು, ಕ್ರೀಡಾ ಇಲಾಖೆಯ ಅಧಿಕಾರಿ ವರ್ಗದವರು […]
ತ್ಯಾಗಕ್ಕೆ ನಿಘಂಟಿನ ಮತ್ತೊಂದು ಸಮನಾರ್ಥಕ ಪದವೇ ಮಹಾತ್ಮ ಗಾಂಧಿ : ತೆನ್ನಿರ ಮೈನಾ ಬಣ್ಣನೆ

ಜನವಾಹಿನಿ NEWS ಮಡಿಕೇರಿ : ಜಗತ್ತಿನ ಎಲ್ಲಾ ನಿಘಂಟಿನಲ್ಲಿ ತ್ಯಾಗ ಎಂಬ ಪದದ ಸಮನಾರ್ಥಕ ಪದವೇ ಮಹಾತ್ಮ ಗಾಂಧಿ ಆಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಬಣ್ಣಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿಯವರ 156 ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ 121 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದಿಂದ ಬ್ರಿಟೀಷರನ್ನು ಹೊರಗಟ್ಟಲು ಲಕ್ಷಾಂತರ […]
ಪ್ರಪಂಚಕ್ಕೆ ಸತ್ಯ ಹಾಗೂ ಅಹಿಂಸಾ ಮಾರ್ಗ ಪ್ರತಿಪಾದಿಸಿದ ಮಹಾನ್ ಚೇತನ ಮಹಾತ್ಮ ಗಾಂಧೀಜಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅಭಿಮತ

ಜನವಾಹಿನಿ NEWS ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಬೆಳಕು ತೊರಿಸಿದ ಮಾಹಾನ್ ಚೇತನ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಪ್ರತಿಪಾದಿಸಿದ್ದಾರೆ. ಸತ್ಯ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಬ್ರಿಟೀಷರ ವಿರುದ್ದ ಹೋರಾಡಿದ ಮಹಾತ್ಮ ಗಾಂಧೀಜಿ, ಈ ಎರಡೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆದರು. ನೈತಿಕತೆಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಮಾದರಿಯಾಗಿದ್ದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ […]
ಕಾಫಿ ಬೆಳೆಗಾರರಿಗೆ ಮಳೆ ಹಾನಿ ಪರಿಹಾರ ಒದಗಿಸಲು ಕ್ರಮ : ಸಚಿವ ಭೋಸರಾಜು

ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯ ಬೆಳೆಗಾರರಿಗೂ ಮಳೆ ಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಪ್ರತಿಕ್ರಿಯಿಸಿದ್ದಾರೆ. ಮಡಿಕೇರಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆ ಈ ಹಿನ್ನೆಲೆ ಉತ್ತರ ಭಾಗಕ್ಕೆ ಈಗಾಗಲೇ ಸಿಎಂ ಭೇಟಿ ನೀಡಿದ್ದಾರೆ. ಎರಡೂವರೆ ಸಾವಿರ ಕೋಟಿ ಮಳೆಯಿಂದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಪರಿಹಾರಕ್ಕಾಗಿ ಮೌಲ್ಯಮಾಪನ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲೂ ಕಾಫಿ ಬೆಳೆಗಾರರಿಗೆ ಮಳೆಯಿಂದ […]
ಪತ್ರಕರ್ತ ಮೋಹನ್ ರಾಜ್ ರವರ ತಂದೆ ನಿಧನ

ಪತ್ರಕರ್ತ ಹಾಗೂ ಕೊಡಗು ತಮಿಳು ಸಂಘದ ಪ್ರಮುಖ ಮೋಹನ್ ರಾಜ್ ಅವರ ತಂದೆ ಕರುಪಯ್ಯ (76) ಪಳ್ಳಕೆರೆ ಟಾಟಾ ಕಾಫಿಯಲ್ಲಿ ಇಂದು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಪಳ್ಳಕೆರೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತೋಳುರುಶೆಟ್ಟಳ್ಳಿಯಲ್ಲಿ ಅದ್ದೂರಿ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ

ಜನವಾಹಿನಿ NEWS ಸೋಮವಾರಪೇಟೆ : ಸಮೀಪದ ತೋಳುರುಶೆಟ್ಟಳ್ಳಿಯ ಶುಭಾಸ್ ನಗರದಲ್ಲಿ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ 9ನೇ ವರ್ಷದ ಗೌರಿ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜಿಸಲಾಯಿತು. ಡಿಜೆ ಸೌಂಡ್ ಹಾಗೂ ಗೊಂಬೆ ಕುಣಿತದೊಂದಿಗೆ ವಿದ್ಯುತ್ ದೀಪಾಲಂಕಾರಗೊಂಡ ವಾಹನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ, ತೋಳುರುಶೆಟ್ಟಲ್ಲಿಯ ಬಸವೇಶ್ವರ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಟಿ.ಏನ್.ಬಸವರಾಜು, ಕಾರ್ಯದರ್ಶಿ ಕೆ.ಎಸ್.ನಂದೀಶ್, ಖಜಾಂಚಿ ಸತೀಶ್ (ದಾಮು), ಟಿ.ವಿ.ಅಭಿಜಿತ್, […]