ಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಶಾಸಕ ಮಂತರ್ ಗೌಡರವರಿಂದ ಚಾಲನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಮಕ್ಕಂದೂರು ಹೆಮ್ಮೆತಾಳ್ ಪರಿಶಿಷ್ಟ ಪಂಗಡದ ಕಾಲೋನಿಗೆ ರೂ.10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಶನಿವಾರ ಚಾಲನೆ ನೀಡಿದರು. ಮಕ್ಕಂದೂರು ಗಾಳೀಬೀಡು ಮಾದಾಪುರ ಶಾಂತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ವಿಭಿನ್ನವಾಗಿದ್ದು ಮುಖ್ಯ ರಸ್ತೆಯಿಂದ ದೂರದಲ್ಲಿ ಒಂದೊಂದು ಮನೆಗಳು ಇದ್ದು ರಸ್ತೆ ಮತ್ತು ವಿದ್ಯುತ್ ಸೌಕರ್ಯ ಗಳ ಸಮಸ್ಯೆಗಳನ್ನು ಅತಿಯಾಗಿ ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು ಇವುಗಳ ಪರಿಹಾರಕ್ಕೆ ವಿಶೇಷ ಕಾಳಜಿವಹಿಸಲಾಗುವುದು ಎಂದು ಮಂತರ್ ಗೌಡ […]
ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ

ಜನವಾಹಿನಿ News ಮಡಿಕೇರಿ : ಇದೇ ಮಾರ್ಚ್ 3 ರಂದು ಮಂಗಳವಾರ ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ದೇವಾಲಯ ಹಾಗೂ ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ದೇವರ ದರ್ಶನ ಹಾಗೂ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು, ಗ್ರಹಣದ ಹಿನ್ನಲೆ ದೇವಾಲಯದಲ್ಲಿ ಧಾರ್ಮಿಕ ಕ್ರಮ ಹಾಗೂ ವಿಧಿ ವಿಧಾನವನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ಓಂಕಾರೇಶ್ವರ ದೆವಾಲಯದ ವ್ಯವಸ್ಥಾಪನಾ ಸಮಿತಿ ಕೋರಿದೆ. ಮಾ.3 ರಂದು ಬೆಳಗ್ಗೆ 7.30 ರಿಂದ ಬೆಳಗ್ಗೆ […]
ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡರಿಂದ ಚಾಲನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣ ಹಾಗೂ ಕಾವೇರಿ ಕಾರು ಚಾಲಕ ಮಾಲೀಕರ ಸಂಘದ ಕಾರು ನಿಲ್ದಾಣಗಳಿಗೆ 11 ಲಕ್ಷ ರೂ ವೆಚ್ಚದ ಸುಸಜ್ಜಿತ ಮೇಲ್ಚಾವಣಿ ಹಾಗೂ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ 16 ಲಕ್ಷ ರೂ ವೆಚ್ಚದ ಸುಸಜ್ಜಿತ […]
ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಕೆ.ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕಚೇರಿ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರು ನಿರ್ದೇಶನ ನೀಡಿದ್ದಾರೆ. ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಮೊಟ್ಟೆ ಜಹಂಗೀರ್ ಪರಿಶಿಷ್ಟ ಜಾತಿ ಕಾಲೋನಿ ಜನರ ಮನೆಗೆ ಹೋಗುವ 10 ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೆ.ನಿಡುಗಣೆ ಪಂಚಾಯತ್ ಜಿಲ್ಲೆಯಲ್ಲಿ ಅತ್ಯಂತ ಆದಾಯ ಹೊಂದಿರುವ ಪಂಚಾಯತ್ ಆಗಿದ್ದು, […]
2025 ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ : ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ ಸೇರಿದಂತೆ ಮೂವರಿಗೆ ಪ್ರಶಸ್ತಿ

ಜನವಾಹಿನಿ News ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2025 ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಇದೇ ಮಾರ್ಚ್ 14 ರಂದು ಮಂಗಳೂರಿನ ಊರ್ವ ಸ್ಟೋರ್ ಸಮೀಪದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ […]
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ : ಕೆಲ ಕಾಲ ಕತ್ತಲಲ್ಲಿ ಮುಳುಗಿದ್ದ ಸಿದ್ದಾಪುರ, ನೆಲ್ಯಹುದಿಕೇರಿ

ಜನವಾಹಿನಿ News ಸಿದ್ದಾಪುರ : ವಿರಾಜಪೇಟೆಯಿಂದ ಕುಶಾಲನಗರಕ್ಕೆ ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ಹಳೆ ಸಿದ್ದಾಪುರ ಚರ್ಚ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದ್ದು, ಸಂಜೆ 7.15 ರ ನಂತರ ಸಿದ್ದಾಪುರ, ನೆಲ್ಯಹುದಿಕೇರಿ, ಗುಹ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಸುಮಾರು 2 ಗಂಟೆಗೂ ಅಧಿಕ ಕಾಲ ಕತ್ತಲಲ್ಲಿ ಮುಳುಗುವಂತಾಗಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿಗಳಾದ ಪರಶುರಾಮ್, ಆನಂದ, ಅಕ್ಷಯ ಮತ್ತಿತರರು ಸೇರಿ ತಾತ್ಕಾಲಿಕವಾಗಿ ಸಂಪರ್ಕವನ್ನು ಸರಿಪಡಿಸಿದ್ದು, ಬಳಿಕ ವಿದ್ಯುತ್ […]
ಮಂಗಳೂರು-ಮಡಿಕೇರಿ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ : ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಮೃತ ಪಟ್ಟ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಲು ಆಗ್ರಹ

ಅರಣ್ಯ ಅಧಿಕಾರಿಗಳ ಸಹಿ ಇಲ್ಲದ ಪರಿಹಾರದ ಚೆಕ್ಕ್ ವಿತರಣೆ :ಬೇಜವಾಬ್ದಾರಿ ಪ್ರದರ್ಶಿಸಿದ ಅಧಿಕಾರಿಗಳ ವಿರುದ್ಧ ಜನಾಕ್ರೋಶ ಜನವಾಹಿನಿ News ಮಡಿಕೇರಿ : ಶನಿವಾರ ಸಂಜೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಆನೆ ದಾಳಿಗೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಬೆಟ್ಟತೂರು ಗ್ರಾಮಸ್ಥರು ಮಡಿಕೇರಿ ಮಂಗಳೂರು ಹೆದ್ದಾರಿ ಮದೆ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅರಣ್ಯ ಅಧಿಕಾರಿಗಳು ಕುಟುಂಬಸ್ಥರಿಗೆ ಪರಿಹಾರದ ಚೆಕ್ಕನ್ನು […]
ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ : ಮಡಿಕೇರಿ ಸಮೀಪದ ಬೆಟ್ಟತ್ತೂರಿನಲ್ಲಿ ಘಟನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಶಾಲಾ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮೃತ ಬಾಲಕಿಯನ್ನು ಮದೆ ಬೆಟ್ಟತ್ತುರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (16) ಎಂದು ಗುರುತಿಸಲಾಗಿದೆ. ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ನಿನ್ನೆ ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಏಕಏಕಿ […]
ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ : ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು: ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ಜನವಾಹಿನಿ News ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ-ಸಂಸ್ಕೃತಿ, ಭಾಷೆಯ ರಕ್ಷಣೆ ಮುಖ್ಯವಾದ ಜವಾಬ್ದಾರಿಯಾಗಿದ್ದು, ಸತ್ಕಾರಣಕ್ಕಾಗಿ ಸರ್ಕಾರ ಅಕಾಡೆಮಿ ಗಳನ್ನು ರಚಿಸಿದೆ. ಇದಕ್ಕೆ ಪೂರಕವಾಗಿ ಕೊಡವ ಸಾಹಿತ್ಯ ಅಕಾಡೆಮಿಯು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯರವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಯಶಸ್ಸಾಗಿ ನಡೆಸುತ್ತಿದ್ದು, ಸರ್ವ ಸದಸ್ಯರ ಸಹಕಾರ ಎದ್ದು ಕಾಣುತ್ತಿದೆ. ಎಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತಾ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು. ಕರ್ನಾಟಕ ಕೊಡವ […]
ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ – ಜ್ಞಾನಕ್ಕೆ ಮಿತಿ ಇಲ್ಲ : ಶಾಸಕ ಮಂತರ್ ಗೌಡ

ಜನವಾಹಿನಿ News ಮಡಿಕೇರಿ : ಪತ್ರಕರ್ತರಿಗೆ ನಿರಂತರ ಕಲಿಕೆ ಮುಖ್ಯ. ಯಾವುದೇ ಸುದ್ದಿಯಾದರೂ ಸಕರಾತ್ಮಕ ವಿಮರ್ಶೆ ನೀಡಬೇಕು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕೊಡಗು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂ ನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು […]