Breaking News :

ಕೃತಕ ಬುದ್ಧಿಮತ್ತೆ (ಎಐ)ಯನ್ನು ಸದ್ಭಳಕೆ ಮಾಡಿಕೊಂಡು ಕೆಲಸವನ್ನು ಸುಲಭ ಮಾಡಿಕೊಳ್ಳಬೇಕು : ಶಾಸಕ ಎ.ಎಸ್.ಪೊನ್ನಣ್ಣ

    ಜನವಾಹಿನಿ News ಮಡಿಕೇರಿ : ಕೃತಕ ಬುದ್ಧಿಮತ್ತೆ (ಎಐ)ಯನ್ನು ಸದ್ಭಳಕೆ ಮಾಡಿಕೊಂಡು ನಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ‘ಸಂವಿಧಾನ ಮತ್ತು ಪತ್ರಿಕೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ‘ಈಗ ಕೃತಕ ಬುದ್ಧಿಮತ್ತೆ (ಎಐ) ಬಂದಿದೆಯಾದರೂ, ಅದು ಎಲ್ಲವನ್ನೂ ಮಾಡುತ್ತದೆ ಎಂದು ಹೇಳಲಾಗದು. […]

ನಾಪೋಕ್ಲು ಹಲ್ಲೆ ಪ್ರಕರಣದ ಆರೋಪಿಗಳ ಗಡಿಪಾರಿಗೆ ಜಿಲ್ಲಾ ಬಿಜೆಪಿ ಆಗ್ರಹ

ಜನವಾಹಿನಿ News ಮಡಿಕೇರಿ : ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದ ಆರೋಪಿತರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಬೇಕೆಂದು ಕೊಡಗು ಬಿಜೆಪಿ ಪೊಲೀಸ್ ಇಲಾಖೆಯನ್ನು ತಾಕೀತು ಮಾಡಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಪಕ್ಷಾತೀತವಾಗಿ ಎಲ್ಲರ ಬೆಂಬಲದೊಂದಿಗೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಮಾದಕ ದ್ರವ್ಯಗಳ ಬಳಕೆಯೂ ಹೆಚ್ಚುತ್ತಿರುವುದು ಇಂಥಹ ಘಟನೆಗಳಿಗೆ ಕಾರಣವಾಗುತ್ತಿದೆ. […]

ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ : ಸಂಸದ ಯದುವೀರ್ ಒಡೆಯರ್ ಖಂಡನೆ – ಕಾನೂನು ಕ್ರಮ ಕೈಗೊಳ್ಳಲು  ಸೂಚನೆ

  ಜನವಾಹಿನಿ News ಮಡಿಕೇರಿ : ಶನಿವಾರ ಬಲ್ಲಮಾವಟಿಯಲ್ಲಿ ಆಯೋಜಿಸಲಾದ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದ ಹಿಂದೂ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದನ್ನು ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್ ರವರು ಖಂಡಿಸಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಘಟನೆಯ ವಿವರವನ್ನು ಪಡೆದಿದ್ದು, ಶನಿವಾರ […]

ಹಿಂದೂ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ : ಎಡಿಕೇರಿ ಪ್ರಸನ್ನ

  ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು ಜನವಾಹಿನಿ News ಮಡಿಕೇರಿ : ಶನಿವಾರ ಬಲ್ಲಮಾವಟ್ಟಿಯಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ನಾಪೋಕ್ಲು ಪಟ್ಟಣದಲ್ಲಿ ಪ್ರಚಾರ ನಡೆಸುವ ವೇಳೆ ಶುಕ್ರವಾರ ಹಿಂದೂ ಕಾರ್ಯಕರ್ತ ಗೌತಮ್ ಎಂಬಾತನ ಮೇಲೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಗ ಸಿದ್ದಿಕ್ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಯತ್ನ ಮಾಡಿರುವುದು ಖಂಡನೀಯ ಹಾಗೂ ಎಂದಿಗೂ ಇಂತ ಘೋರ ಘಟನೆಯನ್ನು ಸಹಿಸಲಾಗದು ಎಂದು ಉದ್ಯಮಿ ಸಮಾಜ ಸೇವಕ, ಬಲ್ಲಮಾವಟ್ಟಿಯಲ್ಲಿ ಮೂಲದ ಎಡಿಕೇರಿ ಪ್ರಸನ್ನ ಆಕ್ರೋಶ […]

ನಾಪೋಕ್ಲು ಹಲ್ಲೆ  ಪ್ರಕರಣ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಖಂಡನೆ – ಶಾಂತಿ ಸುವ್ಯವಸ್ಥೆ  ಕಾಪಾಡಲು ಮನವಿ

  ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನು ಕ್ರಮ ಜರುಗಿಸಲಾಗುತ್ತೆ  ಉತ್ತಪ್ಪ ಜನವಾಹಿನಿ News ಮಡಿಕೇರಿ : ನಾಪೋಕ್ಲು ವಿನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಆರೋಪಿಗಳು ಎಷ್ಟೇ ಪ್ರಭಾವಶಾಲಿಗಾರೂ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತೆ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಧರ್ಮದವರಿಗೂ ಕೂಡ ಅವರವರ ಸಮಾವೇಶ, ಸಂಗಮ ಮಾಡಿಕೊಳ್ಳಲು ಅವಕಾಶವಿದೆ, ಇಂದು ನಡೆದ ಹಲ್ಲೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಜಿಲ್ಲೆಯ ವಿವಿಧಡೆ ಎಲ್ಲಾ ಕಡೆ […]

ಬಲಮಾವುಟಿ ಹಲ್ಲೆ ಪ್ರಕರಣ : ಆರೋಪಿಗಳ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು – ಓರ್ವ ಆರೋಪಿ ಅರೆಸ್ಟ್

    ಉಳಿದವರ ಬಂಧನಕ್ಕೆ ಪೊಲೀಸರ ತೀವ್ರ ಕಾರ್ಯಚರಣೆ ಜನವಾಹಿನಿ News ಮಡಿಕೇರಿ : ನಾಪೋಕ್ಲುವಿನಲ್ಲಿ ಬಿಗುವಿನ ವಾತವರಣ ಏರ್ಪಟ್ಟಿದ್ದು ಇದೀಗ ಹಿಂದೂ ಪರ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಕೊಲೆ ಯತ್ನ ಮೊಕದಮೆ ದಾಖಲು ಪಡಿಸಲಾಗಿ, ಅವರನ್ನು ಬಂಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಗೌತಮ್ ಎಂಬುವರು ಅಂಗಡಿ ಒಂದರಲ್ಲಿ ಸಾಮಗ್ರಿಗಳನ್ನು ತೆಗೆಯಲು ಹೋದಾಗ, ಅಂಗಡಿಯಲ್ಲಿದ್ದ ಹಂಸ ಅವರ ಪುತ್ರ ಸುಹೇಲ್ ಎಂಬಾತ ಗೌತಮ್ಮನ ಜೀಪಿನಲ್ಲಿ ಇದ್ದ ಕೇಸರಿ […]

ಹಿಂದೂ ಸಮಾವೇಶ ಪ್ರಚಾರ ವೇಳೆ ವ್ಯಕ್ತಿ ಮೇಲೆ ಹಲ್ಲೆ : ಆರೋಪಿ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ 

    ಜನವಾಹಿನಿ News ಮಡಿಕೇರಿ : ಬಲ್ಲಮಾವಟಿಯಲ್ಲಿ ನಾಳೆ ನಡೆಯಲಿರುವ ಹಿಂದು ಸಮಾವೇಶ ಹಿನ್ನೆಲೆ ಪ್ರಚಾರ ನಡೆಸುತ್ತಿದ್ದ ಸಂದರ್ಭ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ  ಅನ್ಯ ಕೋಮಿನ ವ್ಯಕ್ತಿಯೋರ್ವನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಪ್ರಚಾರ ವೇಳೆ ಮಾತಿನ ಚಕಮಕಿ ಉಂಟಾಗಿ ಸಿದ್ದೀಕ್ ಎಂಬಾತ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು  ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗಿದೆ. ಹಲ್ಲೆ ಘಟನೆ ಹಿನ್ನೆಲೆ ನಾಪೋಕ್ಲುವಿನಲ್ಲಿ ಹಿಂದೂ […]

ಭೀಕರ ರಸ್ತೆ ಅಪಘಾತ – ಓರ್ವ ಸ್ಥಳದಲ್ಲೇ ಸಾವು – ಮತ್ತೋರ್ವ ಗಂಭೀರ

ಜನವಾಹಿನಿ News ಸಿದ್ದಾಪುರ  ಭೀಕರ ರಸ್ತೆ ಅಪಘಾತ ಓರ್ವ ಸ್ಥಳದಲ್ಲೇ ಸಾವು ಮತ್ತೋರ್ವ ಗಂಭೀರ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ನಡೆದ ಘಟನೆ ಅಮ್ಮ ತ್ತಿ ಕಡೆಯಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ವ್ಯಕ್ತಿಗೆ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವ್ಯಕ್ತಿ ರಸ್ತೆಗೆ ಬಿದ್ದಿದ್ದಾನೆ. ರಸ್ತೆಗೆ ಬಿದ್ದ ಆತನ ಮೇಲೆ ಹಿಂಬದಿಯಿಂದ ಬಂದ ಕಾರೊಂದು ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆನಂದಪುರ ನಿವಾಸಿ ಏನೋಸ್ ಮನೋಹರ್ (ಮನು) 43 ಎಂಬಾತನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ […]

ಫೆ.28ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

  ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಚೆಟ್ಟಿಮಾನಿ ಮಂಡಲ ವತಿಯಿಂದ ಫೆ.೨೮ರಂದು ಪದಕಲ್ಲು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ವಿವೇಕ್ ಕೆದಂಬಾಡಿ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಬಾಂಧವರು ಒಗ್ಗಟ್ಟಾಗಿ ಹಿಂದು ಸಂಸ್ಕೃತಿ, ಆಚಾರ, ವಿಚಾರ ರಕ್ಷಿಸಿಸುವುದರ ಜತೆಗೆ ಸಮಾಜಿಕ ಬದ್ಧತೆಯನ್ನು ಪ್ರದರ್ಶಸಬೇಕಾಗಿದೆ. ಅಲ್ಲದೇ, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. […]

ಮಾ.11ರಿಂದ ಸರಕಾರಿ ವೈದ್ಯಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

  ಜನವಾಹಿನಿ News ಮಡಿಕೇರಿ : ಖಾಲಿ ಹುದ್ದೆಗಳ ಭರ್ತಿ, ಔಷಧಿ ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಆನಂದ್ ಎಚ್ಚರಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಎಲ್ಲಾ ವೃಂದದ ಅಧಿಕಾರಿ, […]