ಬೇಡಿಕೆ ಈಡೇರಿಕೆಗಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ ಆಶ್ರಮ ಶಾಲೆ ಶಿಕ್ಷಕರುಗಳ ನಿಯೋಗ

ಬೇಡಿಕೆ ಈಡೇರಿಕೆಗಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ ಆಶ್ರಮ ಶಾಲೆ ಶಿಕ್ಷಕರುಗಳ ನಿಯೋಗ ಬೆಂಗಳೂರು : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಶ್ರಮ ಶಾಲೆಯ ಶಿಕ್ಷಕರುಗಳ ನಿಯೋಗವು ಮಾನ್ಯ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಅವರ ನಿವಾಸ ಕೃಷ್ಣ ದಲ್ಲಿ ಭೇಟಿಯಾದರು. ಮಾನ್ಯ ಮುಖ್ಯಮಂತ್ರಿಗಳಲ್ಲಿ ಅವರುಗಳ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಹೇಳಿಕೊಂಡ ನಿಯೋಗದವರು, ಅವರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು. ಅವರ ಸಮಸ್ಯೆಗಳನ್ನು […]
ಹೃದಯಾಘಾತದಿಂದ ಮಡಿಕೇರಿ ಉದ್ಯಮಿ ಅಂಬಿಕಾ ಗಣೇಶ್ ಸಾವು

ಹೃದಯಾಘಾತದಿಂದ ಮಡಿಕೇರಿ ಉದ್ಯಮಿ ಅಂಬಿಕಾ ಗಣೇಶ್ ಸಾವು ಮಡಿಕೇರಿ : ಉದ್ಯಮಿ ಅಜ್ಜಿನಂಡ ಗಣೇಶ್ ಅಯ್ಯಣ್ಣ (68) ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಶ್ರೀ ದಂಡಿನ ಮಾರಿಯಮ್ಮ ದೇವಲಾಯದ ಟ್ರಸ್ಟಿ, ಹಾಗೂ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಗಣೇಶ್, ಮಡಿಕೇರಿಯ ಕಾಲೇಜ್ ರಸ್ತೆಯಲ್ಲಿ ಅಂಬಿಕಾ ವಿಡಿಯೋ, ಅಂಗಡಿಯನ್ನು ತೆರದು ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಪ್ರತಿಭೆಗಳ ಧ್ವನಿಮುದ್ರಿತ ಹಾಡುಗಳ ಕ್ಯಾಸೆಟ್ಗಳನ್ನು ಅತಿ ಹೆಚ್ಚು ಮಾರಾಟ ಮಾಡುತ್ತಾ ಪ್ರೋತ್ಸಾಹಿಸುತ್ತಿದ್ದರು. ಜಿಲ್ಲಾ ಚೇಂಬರ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿಗಲಾದ ಪತ್ನಿ ಮೊಂತಿ ಗಣೇಶ್ […]
ಸಿದ್ದಾಪುರ : ಆಟೋ ಮೇಲೆ ಕಾಡಾನೆ ದಾಳಿ : ಪ್ರಯಾಣಿಕನಿಗೆ ಗಾಯ : ತಪ್ಪಿದ ಭಾರಿ ಅನಾಹುತ

*ಜನವಾಹಿನಿ ಬ್ರೇಕಿಂಗ್* ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ *ನೆನ್ನೆಯಷ್ಟೇ ಬೈಕ್ ಸವಾರನ ಮೇಲೆ ದಾಳಿ ಮಾಡಿದ ಪ್ರಕರಣ ವರದಿಯಾಗಿತು.* *ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಆಟೋ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ* *ಇಂಜಲಗೆರೆ ಮುತ್ತಪ್ಪ ದೇವಾಲಯದ ಸಮೀಪ ನಡೆದ ಘಟನೆ.* *ಆಟೋದಲ್ಲಿದ್ದ ಪ್ರಯಾಣಿಕ ಪುಲಿಯೇರಿ ಗ್ರಾಮದ ಪ್ರದೀಪ್ ಎಂಬುವವರ ತೊಡೆಯ ಭಾಗಕ್ಕೆ ಗಾಯ* *ಇಂಜಲಗೆರೆ ಫಿರೋಜ್ ಎಂಬುವವರಿಗೆ ಸೇರಿದ ಆಟೋದ ಮೇಲೆ ಎರಗಿದ ಕಾಡಾನೆ* *ಆಟೋದ ಮೇಲೆ ದಂತದಿಂದ ತಿವಿದ ಪರಿಣಾಮ ಆಟೋ ಎಡಭಾಗ […]
ತಂಬಾಕು ಮುಕ್ತ-ಗ್ರಾಮ ಪಂಚಾಯತಿ ಸಭೆ

ತಂಬಾಕು ಮುಕ್ತ-ಗ್ರಾಮ ಪಂಚಾಯತಿ ಸಭೆ ಮಡಿಕೇರಿ : ಗಾಳಿಬೀಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಪುಪ್ಷವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪಂಚಾಯತಿ ವ್ಯಾಪ್ತಿಗೆ ಬರುವ ಕಂದಾಯ ಗ್ರಾಮಗಳಾದ ಕಾಲೂರು ಹಾಗೂ ಹಮಿಯಾಲ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸುವ ಕುರಿತು ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ರವರು ತಂಬಾಕು ಮುಕ್ತ ಗ್ರಾಮ ಘೋಷಣೆ, ಗೃಹ ಆರೋಗ್ಯ ಯೋಜನೆ, ಕುಷ್ಠರೋಗ […]
ಅಖಂಡ ಭಾರತ ಸಂಕಲ್ಪ : ಮಡಿಕೇರಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ

ಅಖಂಡ ಭಾರತ ಸಂಕಲ್ಪ : ಮಡಿಕೇರಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ ಮಡಿಕೇರಿ : ಕೊಡಗು ಜಿಲ್ಲಾ ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು. ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಅಖಂಡ ಭಾರತದ ಸಂಕಲ್ಪ ತೊಟ್ಟರು. ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ಪಂಜಿನ ಮೆರವಣಿಗೆ […]
ಪೋಟೋದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡಿ

ಪೋಟೋದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡಿ ವಿರಾಜಪೇಟೆ : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದ ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ತಿಳಿಸಲು ಕೋರಲಾಗಿದೆ. ಆರೋಪಿಯ ಹೆಸರು ದಿನೇಶ್. ತಂದೆ ಲೇಟ್ ರಾಜು 28 ವರ್ಷ ಕೂಲಿ ಕಾರ್ಮಿಕ. ಜೇನು ಕುರುಬ ಜಾತಿಗೆ ಸೇರಿದ ಈತನ ಸ್ವಂತ ಊರು ಕುಟ್ಟ ವ್ಯಾಪ್ತಿಯ ನಾಣಚಿ. ಈತ ಈ ಹಿಂದೆ ಅಮ್ಮತಿಯ ಸುವಿನ್ ಗಣಪತಿ ಅವರ ಲೈನ್ ಮನೆಯಲ್ಲಿ ವಾಸವಿದ್ದ, ಈತನ ಚಹರೆಯು […]
ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಮಡಿಕೇರಿ : ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ, ಪ್ರಧಾನಮಂತ್ರಿಯವರ ವಿಶ್ವಕರ್ಮ ಯೋಜನೆ ಜಿಲ್ಲಾ ಮಟ್ಟದ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಶ್ವಕರ್ಮ ಯೋಜನೆಯ ನಾಮ ನಿರ್ದೇಶಿತ ಸದಸ್ಯರಾದ ನಾಗೇಶ್ ಕುಂದಲ್ವಾಡಿ ಹಾಗೂ ರಾಬಿನ್ ದೇವಯ್ಯ ಅವರು ಸಭೆಯಲ್ಲಿ ಮಾತನಾಡಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಫಲಾನುಭವಿಗಳ ಯಶೋಗಾಥೆ ಒದಗಿಸುವಂತೆ ತಿಳಿಸಿದರು. ಸಭೆಯಲ್ಲಿ ಪ್ರಧಾನಮಂತ್ರಿಯವರ […]
ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಶಾಸಕ ಪೊನ್ನಣ್ಣ ಸ್ವಾಗತಿಸಿದರು

ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಶಾಸಕ ಪೊನ್ನಣ್ಣ ಸ್ವಾಗತಿಸಿದರು ಬೆಂಗಳೂರು : ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಸಂಸದರು ಹಾಗೂ ವಿರೋಧ ಪಕ್ಷದ ನಾಯಕರದ ರಾಹುಲ್ ಗಾಂಧಿಯವರನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಆತ್ಮೀಯವಾಗಿ ಬರಮಾಡಿಕೊಂಡರು.
ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ : ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ : ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ ಮಡಿಕೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಮಡಿಕೇರಿಯಲ್ಲಿ ಪ್ರತಿಭಟನಾ ಜಾಥ ನಡೆಸಿತು. ವೇದಿಕೆಯ ಸಂಚಾಲಕ ಅಗೋಳಿಕಜೆ ಧನಂಜಯ ಜಾಥಾದ […]
ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ

ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ ಮಡಿಕೇರಿ : ಜನ ವಿರೋಧದ ನಡುವೆ ರಾಜಾಸೀಟ್ ಉದ್ಯಾನವನದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ, ಪ್ರತಿಭಟನೆ ಮಾಡುವುದಾಗಿ ಮಾಜಿ ಸಚಿವ ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ. ರಾಜಾಸೀಟ್ ಉದ್ಯಾನವನ ಜನಸಂದಣಿ ಹೆಚ್ಚಿರುವ ಪ್ರದೇಶ. ಈಗಾಗಲೇ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ಸಮಸ್ಯೆ ಉದ್ಬವವಾಗಿದೆ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸದೇ ಜನರಿಗೆ ಸಮಸ್ಯೆಯಾಗಬಲ್ಲ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು […]