ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಕ್ರೀಡಾಕೂಟ ಪೂರಕ ಸಾಧನ : ಮಂತರ್ ಗೌಡ

ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಕ್ರೀಡಾಕೂಟ ಪೂರಕ ಸಾಧನ : ಮಂತರ್ ಗೌಡ ಸುಂಟಿಕೊಪ್ಪ : ಯಾವುದೇ ಒಂದು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಲು ಕ್ರೀಡಾಕೂಟ ಪೂರಕ ಸಾಧನವೆಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಗದ್ದೆಹಳ್ಳದ ವೈಎಂ.ಕರುಂಬಾಯ್ಯ ನವರ ಗದ್ದೆಯಲ್ಲಿ ಪ್ರಪಥಮ ಬಾರಿಗೆ ಅಯೋಜಿತವಾಗಿದ್ದ ಗದ್ದೆಹಳ್ಳಲಿ ಗದ್ದೆಆಟ ಮಳೆಗಾಲದ ಹಬ್ಬ 2025 ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭತ್ತದ ಬೇಸಾಯ […]
ಛತ್ತೀಸಗಢದಲ್ಲಿ ಕ್ರೈಸ್ತ ಸನ್ಯಾಸಿಗಳ ಬಂಧನ ಹಾಗೂ ದೌರ್ಜನ್ಯ ಖಂಡಿಸಿ ಸಿದ್ದಾಪುರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಛತ್ತೀಸಗಢದಲ್ಲಿ ಕ್ರೈಸ್ತ ಸನ್ಯಾಸಿಗಳ ಬಂಧನ ಹಾಗೂ ದೌರ್ಜನ್ಯ ಖಂಡಿಸಿ ಸಿದ್ದಾಪುರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಸಿದ್ದಾಪುರ : ಛತ್ತೀಸಗಢದಲ್ಲಿ ಇಬ್ಬರು ಕ್ಯಾಥೊಲಿಕ್ ಸನ್ಯಾಸಿನಿಯರ ಬಂಧನ ಹಾಗೂ ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಸಿದ್ದಾಪುರ ಪ್ರಗತಿಪರ ಸಂಘಟನೆಗಳಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ನಗರದ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಪ್ರಗತಿಪರ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಛತ್ತೀಸಗಢ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. […]
ಯುವನಿಧಿ ಪೋಸ್ಟರ್ ಬಿಡುಗಡೆ : ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಸಲಹೆ

ಯುವನಿಧಿ ಪೋಸ್ಟರ್ ಬಿಡುಗಡೆ : ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಸಲಹೆ ಮಡಿಕೇರಿ : ಪೊನ್ನಂಪೇಟೆಯ ತಾಲ್ಲೂಕು ಪಂಚಾಯತ್‍ನಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ 2025 ನೇ ಸಾಲಿನ ಯುವನಿಧಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡ ಪ್ರಯುಕ್ತ ಯುವನಿಧಿ ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಅನಾವರಣ ಮಾಡಲಾಯಿತು. ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಅವರು ಮಾತನಾಡಿ 2023, 2024 ಮತ್ತು 2025 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ ಪಡೆದು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರು […]
ಅಂಗನವಾಡಿ ಕಾರ್ಯಕರ್ತೆ ಬಿ.ಕೆ.ಸುಶೀಲ ರವರಿಗೆ ಬೀಳ್ಕೊಡುಗೆ

ಅಂಗನವಾಡಿ ಕಾರ್ಯಕರ್ತೆ ಬಿ.ಕೆ.ಸುಶೀಲ ಅವರಿಗೆ ಬೀಳ್ಕೊಡುಗೆ ಮಡಿಕೇರಿ : ಕತ್ತಲೆಕಾಡು ಅಂಗನವಾಡಿ ಕೇಂದ್ರದಲ್ಲಿ 31 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದ ಕಾರ್ಯಕರ್ತೆ ಬಿ.ಕೆ. ಸುಶೀಲ ಅವರನ್ನು ಮರಗೋಡು ವೃತ್ತದ ಕಾರ್ಯಕರ್ತರು ಹಾಗೂ ಸಹಾಯಕಿಯರು ಸನ್ಮಾನಿಸಿ ಬೀಳ್ಕೊಟ್ಟರು.
ಕಾವಾಡಿಯಲ್ಲಿ ಕಥೆ ಹೇಳುವ ಸ್ಪರ್ಧೆ : ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ – ಬಾಚರಣಿಯಂಡ .ಪಿ.ಅಪ್ಪಣ್ಣ.

ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘ , ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನಿಂದ ಕಥಾ ಸಮಯ ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ – ಬಾಚರಣಿಯಂಡ ಪಿ. ಅಪ್ಪಣ್ಣ ಮಡಿಕೇರಿ : ಜಾನಪದ ಕಥೆಗಳು ಪ್ರಕೖತ್ತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ […]
ಪೊನ್ನಂಪೇಟೆ ಸಮೀಪ ರಸ್ತೆ ಮಧ್ಯೆ ಮಗುಚಿ ಬಿದ್ದ ಲಾರಿ : ಕುಟ್ಟ ಪೊನ್ನಂಪೇಟೆ ಸಂಪರ್ಕ ಕಡಿತ

ಪೊನ್ನಂಪೇಟೆ ಸಮೀಪ ರಸ್ತೆ ಮಧ್ಯೆ ಮಗುಚಿ ಬಿದ್ದ ಲಾರಿ : ಕುಟ್ಟ ಪೊನ್ನಂಪೇಟೆ ಸಂಪರ್ಕ ಕಡಿತ ಮಡಿಕೇರಿ : ಪೊನ್ನಂಪೇಟೆ ಕುಟ್ಟ ರಾಜ್ಯ ಹೆದ್ದಾರಿ ಕಾನೂರು ಮಾರ್ಗದಲ್ಲಿ ಬೆಕ್ಕೆಸುಡ್ಲೂರು ಸಮೀಪ ಸರಕು ತುಂಬಿದ ಲಾರಿವೊಂದು ರಸ್ತೆ ಮಧ್ಯದಲ್ಲಿ ಮಗುಚಿಬಿದ್ದ ಘಟನೆ ನೆನ್ನೆ ತಡರಾತ್ರಿ ನಡೆದಿದೆ. ಲಾರಿ ಮಗುಚಿಬಿದ್ದ ಪರಿಣಾಮ ಕುಟ್ಟ ಪೊನ್ನಂಪೇಟೆ ನಡುವಿನ ರಸ್ತೆ ಸಂಪರ್ಕ ಕಡಿತವಾಗಿತ್ತು. ಲಾರಿಯಲ್ಲಿ ತುಂಬಲಾದ ಸರಕು ಹಾಗೂ ಇರುವವರ ಬಗ್ಗೆ ಮತ್ತು ಅವರ ಯೋಗ ಕ್ಷೇಮದ ಬಗ್ಗೆ ಯಾವುದೇ ಮಾಹಿತಿ ತಡರಾತ್ರಿವರೆಗೆ […]
ಕೊಡಗು ಜಿಲ್ಲಾ ವಲ್ಫ್ ಮಂಡಳಿ ಅಧ್ಯಕ್ಷರ ನೇಮಕ ವಿಚಾರ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಮಹತ್ವದ ಸಭೆ

ಕೊಡಗು ಜಿಲ್ಲಾ ವಲ್ಫ್ ಮಂಡಳಿ ಅಧ್ಯಕ್ಷರ ನೇಮಕ ವಿಚಾರ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಮಹತ್ವದ ಸಭೆ ಮಡಿಕೇರಿ : ಶೀಘ್ರದಲ್ಲೇ ತೆರವಾಗಲಿರುವ ಕೊಡಗು ಜಿಲ್ಲಾ ವಲ್ಫ್ ಸಲಹಾ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಇದೀಗ ದಿನೇ ದಿನೇ ಬಿರುಸುಕೊಳ್ಳುತ್ತಿದೆ. ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿರುವುದರಿಂದ ಪಕ್ಷದ ಹೈಕಮಾಂಡಿಗೆ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಜಿಲ್ಲೆಯ ಇಬ್ಬರು ಶಾಸಕರ ನಿರ್ದೇಶನದಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ […]
ಕಾಡಾನೆ ದಾಳಿ ಮನೆಯಲ್ಲಿದ್ದ ವಸ್ತುಗಳು ನಾಶ : ಪರಿಹಾರ ಒದಗಿಸಲು ಆಗ್ರಹ

ಕಾಡಾನೆ ದಾಳಿ ಮನೆಯಲ್ಲಿದ್ದ ವಸ್ತುಗಳು ನಾಶ : ಪರಿಹಾರ ಒದಗಿಸಲು ಆಗ್ರಹ ಸಿದ್ದಾಪುರ : ಕಾಡಾನೆಯೊಂದು ಮಧ್ಯರಾತ್ರಿ ವೇಳೆ ಮನೆ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರೆ ವಸ್ತುಗಳನ್ನ ತುಳಿದು ನಾಶ ಮಾಡುವುದರ ಮೂಲಕ ಹಾಡಿ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿದ ಕಾಡಾನೆ ಹಾವಳಿಯಿಂದ ಚನ್ನಂಗಿ ಚಕ್ಕ ರೇಷ್ಮೆ ಹಾಡಿ ನಿವಾಸಿಗಳು ಭಯಭೀತರಾಗಿದ್ದಾರೆ. ಕಾವೇರಿ ಎಂಬವರ ಮನೆ ಮೇಲೆ ದಾಳಿ ಮಾಡಿದ ಕಾಡಾನೆ ಬಾಗಿಲು ಮುರಿದು ಒಳನುಗ್ಗಿ ಅಕ್ಕಿ ಸೇರಿದಂತೆ ಅಹಾರ ಪದಾರ್ಥಗಳನ್ನು ತಿಂದು ಡ್ರಮ್ […]
ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ : ಪ್ರತಿಯೊಬ್ಬರು ಹಿರಿಯರ ಮಾರ್ಗದರ್ನದಲ್ಲಿ ಸಾಗುವಂತಾಗಬೇಕು : ಮಂತರ್ ಗೌಡ ಕಿವಿ ಮಾತು

ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ : ಪ್ರತಿಯೊಬ್ಬರು ಹಿರಿಯರ ಮಾರ್ಗದರ್ನದಲ್ಲಿ ಸಾಗುವಂತಾಗಬೇಕು : ಮಂತರ್ ಗೌಡ ಕಿವಿ ಮಾತು ಮಡಿಕೇರಿ : ಹಿರಿಯರ ಮಾರ್ಗದರ್ಶನಲ್ಲಿ ನಾವು ಸಾಗುವಂತಾಗಬೇಕು ಎಂದು ಮಡಿಕೇರಿ ವಿಧಾನ ಸಭಾಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಿವಿಮಾತು ಹೇಳಿದರು. ಮಡಿಕೇರಿ ಕೊಡವ ಸಮಾಜ, ಕೊಡವ ಸಮಾಜ ಪೊಮ್ಮಕ್ಕಡ ಕೂಟ ಮತ್ತು ಮಡಿಕೇರಿ ಕೊಡವ ಕೇರಿಯ ಸಂಯುಕ್ತಾಶ್ರಯದಲ್ಲಿ ನಗರದ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ […]
ಛತ್ತೀಸ್ಗಡದಲ್ಲಿ ಕ್ರಿಶ್ಚಿಯನ್ ಕನ್ಯಾ ಸ್ತ್ರೀಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನೆಲ್ಯಹುದಿಕೇರಿಯಲ್ಲಿ ಪ್ರತಿಭಟನೆ

ಸಿದ್ದಾಪುರ : ನೆಲ್ಯಹುದಿಕೇರಿ ಪ್ರಗತಿಪರ ಸಂಘಟನೆಯ ವತಿಯಿಂದ ಛತ್ತೀಸ್ಗಡದಲ್ಲಿ ಕ್ರಿಶ್ಚಿಯನ್ ಕನ್ಯಾ ಸ್ತ್ರೀಗಳ ಮೇಲೆ ನಡೆದ ದೌರ್ಜನ್ಯ ವನ್ನು ಖಂಡಿಸಿ ಮತ್ತು ಇವರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು (F.I.R) ಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಛತ್ತಿಸ್ಗಢ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡರಾದ ಪಿ .ಅರ್. ಭರತ್ ಹಾಗೂ ಕೆಪಿಸಿಸಿ ಸದಸ್ಯರಾದ ಜೋಸೆಫ್ ಶ್ಯಾಮ್ ಛತ್ತಿಸ್ಗಢ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಮುಖರಾದ ಉದಯಕುಮಾರ್, ಮೋನಪ್ಪ, ಜೋಸ್, ಸೌಕತ್, ಜೋಯಿ, […]