ಪುಲಿಯೇರಿ ಇಂಜಿಲಗೆರೆ ವಿನಾಯಕ ಮಿತ್ರ ಮಂಡಳಿಯಿಂದ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

ಸಿದ್ದಾಪುರ : ಗೌರಿ ಗಣೇಶ ಹಬ್ಬದ ಅಂಗವಾಗಿ ಸಿದ್ದಾಪುರ ಸಮೀಪದ ಪುಲಿಯೇರಿ ಇಂಜಲಗೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ 3ನೇ ವರ್ಷದ ಗೌರಿ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಬುಧವಾರ ನಡೆಯಿತು. ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಮಹಾಗಣಪತಿ ಹೋಮ, ಮಂಗಳಾರತಿ, ನೆರವೇರಿಸಿ ಪ್ರತಿಷ್ಠಾಪನೆ ಮಾಡಲಾಯಿತು. ಪೂಜಾ ಕೈಂಕರ್ಯಗಳನ್ನು ಹೊಳೆನರಸಿಪುರದ ಸಂಜಯ್ ಭಟ್ಟರು ನೆರವೇರಿಸಿದರು. ಗಣಪನಿಗೆ ಹಣ್ಣುಹಂಪಲು ಲಾಡು ಇನ್ನಿತರ ಸಿಹಿ ತಿನಿಸುಗಳನ್ನು ಅರ್ಪಣೆ ಮಾಡಲಾಯಿತು. ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ […]
ಎ.ಕೆ.ಸುಬ್ಬಯ್ಯನವರ ಪುಣ್ಯಸ್ಮರಣೆ : ಶಾಸಕ ಪೊನ್ನಣ್ಣರವರಿಂದ ತಂದೆಗೆ ಗೌರವ ನಮನ

ಜನವಾಹಿನಿ NEWS ಪೊನ್ನಂಪೇಟೆ : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ತಮ್ಮ ತಂದೆಯವರಾದ ದಿವಂಗತ ಎ.ಕೆ ಸುಬ್ಬಯ್ಯರವರ 6ನೇ ಪುಣ್ಯ ಸ್ಮರಣೆ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲೂಕು ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯವರ ಸಮಾಧಿ ಬಳಿಗೆ ತೆರಳಿದ ಮಾನ್ಯ ಶಾಸಕರು, ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಪುಣ್ಯ ಸ್ಮರಣೆ ದಿನದಂದು ಗೌರವಾರ್ಪಣೆ ಸಲ್ಲಿಸಿದರು. ಈ […]
ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕೋಪಕರಣ, ಕ್ರೀಡಾ ಸಾಮಗ್ರಿ ವಿತರಣೆ

ಜನವಾಹಿನಿ NEWS ಸಿದ್ದಾಪುರ: ಕೊಡಗು ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳ ಮನಸ್ಸಿನಲ್ಲಿ ನಗುವು ಮತ್ತು ಕಲಿಕೆಯ ಬೆಳಕು ತುಂಬುವ ಕಾರ್ಯವನ್ನು ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸ್ವಯಂಸೇವಕರು ಯಶಸ್ವಿಯಾಗಿ ನೆರವೇರಿಸಿದರು. ಆಗಸ್ಟ್ ತಿಂಗಳಲ್ಲಿ ನಡೆದ ಅಭಿಯಾನದಲ್ಲಿ 85 ಸಿಸ್ಕೋ ಸ್ವಯಂಸೇವಕರು ಪಾಲ್ಗೊಂಡು, ಐದು ಸರ್ಕಾರಿ ಶಾಲೆಗಳ 600ಕ್ಕೂ ಹೆಚ್ಚು ಮಕ್ಕಳಿಗೆ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಡೆಸಿದರು. ಆಗಸ್ಟ್ 14ರಂದು ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ […]
ಗೌರಿ ಗಣೇಶ ಹಬ್ಬಕ್ಕೆ ಕಂಗೊಳಿಸುತ್ತಿರುವ ಪಶ್ಚಿಮಘಟ್ಟದ ಗೌರಿ ಹೂ

✒️ ಲಕ್ಷ್ಮೀಕಾಂತ್ ಕೊಮಾರಪ್ಪ ಜನವಾಹಿನಿ NEWS ಸೋಮವಾರಪೇಟೆ : ತಾಲೂಕಿನೆಲ್ಲೆಡೆ ಗೌರಿ ಗಣೇಶ್ ಹಬ್ಬವು ಸಂಪ್ರದಾಯಿಕವಾಗಿ ಆಚರಿಸಲ್ಪಡುತ್ತಿದೆ. ಗೌರಿ ಹಬ್ಬದಂದು ಗೌರಿ ಹೂ ವೆಂದೆ ಕರೆಯಲ್ಪಡುವ ಗ್ಲೋರಿಯೊಸಾ ಸುಪರ್ಬಾ(ಅಗ್ನಿಶಿಖೆ) ಎಂಬ ಜಾತಿಯ ಹೂವನ್ನು ಪೂಜೆಯಲ್ಲಿ ಇಟ್ಟು ಪ್ರಾರ್ಥಿಸುವುದು ಗ್ರಾಮೀಣ ಭಾಗದ ವಿಶೇಷ.ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಲೆನಾಡ ಭಾಗದಲ್ಲಿ ಅರಳಿನಿಂತ ಗೌರಿ ಹೂವು ಹಬ್ಬದ ಸಂಭ್ರಮ ಹೆಚ್ಚಿಸುತ್ತಿವೆ. ಗೌರಿ ಹೂವು ಎಂದು ಕರೆಯಲ್ಪಡುವ ಕೆಂಪು ಅರಿಶಿಣ ಬಣ್ಣದ ಹೂವು ಪಶ್ಚಿಮಘಟ್ಟದ ಸಹಜ ಕಾಡಿನಲ್ಲಿ ತನ್ನಿಷ್ಟಕ್ಕೆ ಅರಳುವ ಒಂದು […]
ಗ್ಯಾರಂಟಿ ಯೋಜನೆ ; ಮಡಿಕೇರಿ ತಾಲ್ಲೂಕು ಅನುಷ್ಠಾನ ಸಮಿತಿ ಸಭೆ

ಮಡಿಕೇರಿ : ಮಡಿಕೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಭೆ ನಡೆಯಿತು. ಈ ಸಭೆಗೆ ಅನುಷ್ಠಾನ ಇಲಾಖೆಗಳಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಅಧಿಕಾರಿ, ಶಿಶು ಅಭಿವೃದ್ದಿ ಇಲಾಖಾ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮತ್ತು ವ್ಯವಸ್ಥಾಪಕರು ಕೆ.ಎಸ್.ಆರ್.ಟಿ.ಸಿ ರವರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು. ಗೃಹಲಕ್ಷ್ಮಿ ಯೋಜನೆ: ಶಿಶು ಅಭಿವೃದ್ದಿ ಅಧಿಕಾರಿಯವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ […]
ಜಿಲ್ಲೆಯ ವಿವಿಧ ಕಡೆ ಮದ್ಯ ಮಾರಾಟ ನಿಷೇಧ

ಜನವಾಹಿನಿ NEWS ಮಡಿಕೇರಿ : ಆಗಸ್ಟ್, 27 ರಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965 ರ ಕಲಂ 21 ರಲ್ಲಿ ದತ್ತವಾದ ಅಧಿಕಾರದಂತೆ ಆಗಸ್ಟ್, 27 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಹಾಕತ್ತೂರು ವ್ಯಾಪ್ತಿಯ 5 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ, ಆಗಸ್ಟ್, […]
ಪವಿತ್ರ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಗೌರಿ ಹಬ್ಬ ದಿನವಾದ ಮಂಗಳವಾರ ಬಾಗಿನ ಅರ್ಪಿಸಿದರು. ಶ್ರೀ ಸಿದ್ದೇಶ್ವರ, ಬಸವೇಶ್ವರ ಹಾಗೂ ತಾಯಿ ಹೊನ್ನಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾಸಕರಾದ ಡಾ.ಮಂತರ್ ಗೌಡ ಅವರು ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಶಾಸಕರು ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹಾಗೂ ತಾಯಿ ಹೊನ್ನಮ್ಮ ಕೆರೆಗೆ […]
ಆ.27 ರಂದು ಕೋಟೆ ಗಣಪತಿ ದೇವಾಲಯದಲ್ಲಿ ಮಹಾಪೂಜೆ

ಜನವಾಹಿನಿ NEWS ಮಡಿಕೇರಿ : ನಗರದ ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆಗಸ್ಟ್, 27 ರಂದು ಬೆಳಗ್ಗೆ 7 ಗಂಟೆಯಿಂದ ಭಕ್ತಾಧಿಗಳಿಗೆ ಗಣಪತಿ ಪೂಜೆ ಹಾಗೂ ಬೆಳಗ್ಗೆ 10 ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ರಾತ್ರಿ 7.30 ಗಂಟೆಗೆ ಮಹಾಪೂಜೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು […]
ಯುವನಿಧಿ ಭಿತ್ತಿ ಪತ್ರ ಬಿಡುಗಡೆ

ಜನವಾಹಿನಿ NEWS ಮಡಿಕೇರಿ : ಮಡಿಕೇರಿ ತಾಲ್ಲೂಕು ಪಂಚಾಯತ್‍ನಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ 2025ನೇ ಸಾಲಿನ ಯುವನಿಧಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡ ಪ್ರಯುಕ್ತ ಯುವನಿಧಿ ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಅನಾವರಣ ಮಾಡಲಾಯಿತು. ಉದ್ಯೋಗಾಧಿಕಾರಿ ಮಂಜುನಾಥ್ ಸಿ. ಬಿ ಅವರು ಮಾತಾನಾಡಿ 2023, 2024 ಮತ್ತು 25 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಯುವನಿಧಿ ಯೋಜನೆಯಡಿ […]
ಸಿಸ್ಕೊ ಸಂಸ್ಥೆಯಿಂದ ಹೆಗ್ಗಳ ಶಾಲೆಗೆ ಕೊಡುಗೆ

ಜನವಾಹಿನಿ NEWS ವಿರಾಜಪೇಟೆ : ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ ಸ್ವಯಂ ಸೇವಕರು ಆಗಮಿಸಿ ವಿದ್ಯಾರ್ಥಿಗಳಿಗೆ ಆಟದ ವಸ್ತುಗಳು, ಡ್ರಾಯಿಂಗ್ ಚಾರ್ಟ್, ಲೇಖನಿ, ಶಾಲೆಗೆ ಪೈಂಟಿಂಗ್, ಹಾಗೂ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಾತ್ರವಲ್ಲದೆ ಮಕ್ಕಳಿಗೆ ಮದ್ಯಾಹ್ನ ದ ಉಪಹಾರದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿದರು. ಒಟ್ಟು ಇಪ್ಪತ್ತು ಸ್ವಯಂ ಸೇವಕರನ್ನು ಒಳಗೊಂಡ ತಂಡದಲ್ಲಿ ಸಿಸ್ಕೊ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್ ನ ಅಧಿಕಾರಿ ಕಣ್ಣನ್, […]