ಧರ್ಮಸ್ಥಳ ಪ್ರಕರಣ : ಬೀದಿಗಿಳಿದು ಪ್ರತಿಭಟಿಸಿದ ಬಿಜೆಪಿ : ತಹಶೀಲ್ದಾರ್ ಗೆ ಮನವಿ : SIT ಅಂತರ್ ರಾಜ್ಯಗಳಲ್ಲಿಯು ತನಿಖೆ ನಡೆಸಲಿ ಸಂಸದ ಯದುವೀರ್ ಒತ್ತಾಯ

ಜನವಾಹಿನಿ NEWS ವಿರಾಜಪೇಟೆ : ಹಿಂದೂಗಳ ಶ್ರದ್ದಾ ಮತ್ತು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪಟ್ಟಭದ್ರ ಹಿತಾಶಕ್ತಿಗಳು ಅಪಮಾನ ಮಾಡುವ ರೀತಿಯಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಕೊಂಡು ಬಂದಿದೆ. ಪ್ರಸ್ತುತ ಸರ್ಕಾರವು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ತಾಲೂಕು ಭಾರತೀಯ ಜನತಾ ಪಕ್ಷವು ಧರ್ಮಸ್ಥಳ ಪ್ರಕರಣದ ವಿರುದ್ದ ಪ್ರತಿಭಟನೆ ನಡೆಸಿತು. ಭಾರತೀಯ ಜನತಾ ಪಕ್ಷ ವಿರಾಜಪೇಟೆ ಮಂಡಲದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಧರ್ಮದ ಉಳಿವಿಗಾಗಿ ಧರ್ಮಯುದ್ದ ಎಂಬ ಘೋಷವಾಖ್ಯದಡಿಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಖಂಡಿಸಿ ಬೃಹತ್ ಪ್ರತಿಭಟನೆ […]
ಆ.27 ರಂದು ಮೂರ್ನಾಡಿನ ವಿವಿಧೆಡೆ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ.

ಜನವಾಹಿನಿ NEWS ಮೂರ್ನಾಡು : ಮೂರ್ನಾಡಿನ ಪಟ್ಟಣ ಮತ್ತು ವಿವಿಧೆಡೆ ೨೭ರಂದು ವಿವಿಧ ಸಂಘ ಸಂಸ್ಥೆಗಳಿಂದ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ ೩೪ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವ ಮೂರ್ತಿಯನ್ನು ೧೦-೦೦ ಗಂಟೆಗೆ ಪ್ರತಿಷ್ಠಾಪಿಸಲಾಗುವುದು. ಮೂರ್ನಾಡು ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ೩೩ನೇ ವರ್ಷದ ಗೌರಿ-ಗಣೇಶೋತ್ಸವದ ಉತ್ಸವ ಗಣೇಶ ಮೂರ್ತಿಯನ್ನು ಗಾಂಧಿನಗರದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೮-೦೦ ಗಂಟೆಗೆ ಪ್ರತಿಷ್ಠಾಪಿಸಲಾಗುವುದು. […]
ಸೆ.19ರಂದು ರಾಜ್ಯ ಮಟ್ಟದ ಕಿವುಡರ ಸಂಘದ ಕ್ರೀಡಾಕೂಟ

ಜನವಾಹಿನಿ NEWS ವಿರಾಜಪೇಟೆ : ಗೋಣಿಕೊಪ್ಪಲುವಿನ ಕಾಲ್ಸ್ ಶಾಲಾ ಮೈದಾನದಲ್ಲಿ ಸೆಪ್ಟೆಂಬರ್ 19 ರಂದು ಕಿವುಡ ಸಮುದಾಯದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಿವುಡರ ಸಂಘದ ಗೌರವ ಅಧ್ಯಕ್ಷ ಜೋಸೆಫ್ ಸ್ಯಾಮ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಿವುಡ ಸಮುದಾಯದ ಸಬಲಿಕರಣಕ್ಕಾಗಿ ನಮ್ಮ ಸಂಘವು ಎಂಟು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಕಿವುಡ ರ ವಯುಕ್ತಿಕ ಬೆಳವಣಿಗೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ 2025ರ […]
ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಅಪಾರ : ಸಂಸದ ಯದುವೀರ್

ಜನವಾಹಿನಿ NEWS ಸೋಮವಾರಪೇಟೆ : ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಸಮೀಪದ ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ಸಹಯೋಗದೊಂದಿಗೆ ಗ್ರಾಮದ ಐಮುಡಿಯಂಡ ಗಣೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ 7 ನೇ ವರ್ಷದ ನಾಟಿ ಹಬ್ಬ ಹಾಗೂ ಕೆಸರು ಗದ್ದೆ ಕ್ರೀಡಾಕೂಟವನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸದ ಯದುವೀರ್ ಅವರು, ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಉದ್ಯೋಗ ಸೇರಿದಂತೆ ಇನ್ನಿತರ […]
ಯಿಫಾ ಸಂಘಟನೆಯ ನೇತೃತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ

ಜನವಾಹಿನಿ NEWS : ಸೋಮವಾರಪೇಟೆಯ ಯಂಗ್ ಇಂಡಿಯನ್ಸ್ ಫಾಮರ‍್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ಆಶ್ರಯದಲ್ಲಿ, ಹುದುಗೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣಾ ಸಮಾರಂಭ ಯುವಕ ಸಂಘದ ಮೈದಾನದಲ್ಲಿ ನಡೆಯಿತು.ಗ್ರಾಮದ ಐಮುಡಿಯಂಡ ಗಣೇಶ್ ಅವರ ಕೆಸರು ಗದ್ದೆಯಲ್ಲಿ ನಡೆದ ಪುರುಷರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಟೀಮ್ ಪೊನ್ನಂಪೇಟೆ ತಂಡ ಪ್ರಥಮ, ಕೂಡುಮಂಗಳೂರು ಮಾರುತಿ ಫ್ರೆಂಡ್ಸ್ ತಂಡ ದ್ವೀತೀಯ ಸ್ಥಾನ ಗಳಿಸಿತು. […]
ಮುಕ್ಕೋಡು ಗ್ರಾಮದಲ್ಲಿ ರೈತರ ಬೆಳೆ ನಾಶ – ಅರಣ್ಯ ಇಲಾಖೆಯ ಕ್ರಮಕ್ಕೆ ರೈತರ ಆಕ್ರೋಶ:20 ವರ್ಷದ ತೋಟ ನೆಲಸಮ – ಅರಣ್ಯ ಇಲಾಖೆಯ ವಿರುದ್ಧ ‘ಅರಣ್ಯ ಭವನ ಚಲೋ’ ಎಚ್ಚರಿಕೆ

ಜನವಾಹಿನಿ NEWS ಸೋಮವಾರಪೇಟೆ : ಮಡಿಕೇರಿ ತಾಲೂಕಿನ ಮುಕ್ಕೋಡು ಗ್ರಾಮದ ಕಲ್ಲೊಟ್ಸ್ ಗ್ರಾಮದಲ್ಲಿ ಪೈಸಾರಿ ಜಾಗದಲ್ಲಿ ಬೆಳೆದಿದ್ದ ಏಲಕ್ಕಿ ಹಾಗೂ ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯವರು ಕಡಿದು ಸಂಪೂರ್ಣ ನಾಶಪಡಿಸಿದ ಸ್ಥಳಕ್ಕೆ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಪೈಸಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದ ಕಾಳಚಂಡ ನಾಣಿಯಪ್ಪ ವೃದ್ಧ ದಂಪತಿಯ ಮೇಲೆ ಅರಣ್ಯ ಇಲಾಖೆ ಅಮಾನುಷ ಕೃತ್ಯ ಎಸಗಿದ್ದು, ಫಸಲು ಕೊಡುವ ಹಂತದಲ್ಲಿದ್ದ ಏಲಕ್ಕಿ […]
ಕೊಡವ ಕೂಟಾಳಿಯಡ ಕೂಟ ಸಂಘಟನೆಯ ಅಧ್ಯಕ್ಷರಾಗಿ ಚೊಟ್ಟಂಡ ಪ್ರಭು ಸೋಮಯ್ಯ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ನೇಮಕ

ಮಡಿಕೇರಿ : ಕೊಡವ ಕೂಟಾಳಿಯಡ ಕೂಟ ಸಂಘಟನೆಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ಗುರುವಾರ ಪೊನ್ನಂಪೇಟೆಯ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಸಂಘಟನೆಯ ಅಧ್ಯಕ್ಷರಾಗಿದ್ದ ಚೆಟ್ಟೋಳಿರ ಶರತ್ ಸೋಮಣ್ಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಂಘಟನೆಯ ನೂತನ ಅಧ್ಯಕ್ಷರಾಗಿ ಚೊಟ್ಟಂಡ ಪ್ರಭು ಸೋಮಯ್ಯ ಉಪಾಧ್ಯಕ್ಷರಾಗಿ ಚೆಕ್ಕೆರ ರಾಜೇಶ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಮಾಚಿಮಡ ಡಿಂಪಲ್ ಅವರು ನೇಮಕಗೊಂಡರು. ಸಂಘಟನೆಯ ನಿರ್ದೇಶಕರುಗಳಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್, ಚೇಂದಿರ ಪ್ರಿಯಾ ಲೋಹಿತ್, […]
ಕೊಡವಾಮೆರ ಆರ ಬೇರ ಕಾರ್ಯಕ್ರಮ

ಜನವಾಹಿನಿ NEWS ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಮೈಸೂರು ಇವರ ಸಹಯೋಗದಲ್ಲಿ ಇಂದು ಮೈಸೂರು ಕೊಡವ ಸಮಾಜದಲ್ಲಿ “ಕೊಡವಾಮೆರ ಆರ ಬೇರ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ […]
ಧರ್ಮಸ್ಥಳ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ : ಮಾಸ್ಕ್ ಮ್ಯಾನ್ ಮುಖವಾಡ ಕಳಚಿದ SIT – 10 ದಿನಗಳ ಕಾಲ ಕಸ್ಟಡಿಗೆ

ಬೆಳ್ತಂಗಡಿ : ಕಳೆದೆರಡು ತಿಂಗಳಿನಿಂದ ದೇಶದೆಲ್ಲೆಡೆ ಕುತೂಹಲಕ್ಕೆ ಕಾರಣವಾಗಿದ್ದ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣ ಇದೀಗ ಮಹತ್ವದ ತಿರುವು ಪಡೆದಿದೆ. ಬುರುಡೆ ಹಿಡಿದುಕೊಂಡು ಬಂದು ದೂರು ನೀಡಿದ್ದ ಅನಾಮಿಕ ದೂರುದಾರನನ್ನೇ ಇದೀಗ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ (ಆ.23) ದೂರುದಾರ ಮಾಸ್ಕ್‌ಮ್ಯಾನ್ (ಸಿ.ಎನ್.ಚಿನ್ನಯ್ಯ) ನನ್ನು ಎಸ್‌ಐಟಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ. ಬೆಳಗ್ಗೆ ವೈದ್ಯಕೀಯ ತಪಾಸಣೆಯ ಬಳಿಕ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜೆಎಂಎಫ್‌ಎಸ್ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಅಲ್ಲಿ ಆತನನ್ನು 10 ದಿನಗಳ ಕಾಲ […]
ಪ್ರೀತಿಸಿದ ಯುವತಿಯನ್ನೇ ಸುಟ್ಟು ಹಾಕಿದ ಭೂಪ : ಕೊಲೆಯಾದ ಯುವತಿ 8 ತಿಂಗಳ ಗರ್ಭಿಣಿ

ಚಿತ್ರದುರ್ಗ : ತಾಲ್ಲೂಕಿನ ಗೋನೂರು ಬಳಿ ಕೊಲೆಯಾದ ಪದವಿ ವಿದ್ಯಾರ್ಥಿನಿ ವರ್ಷಿತಾ ಕೊಲೆ ಕೇಸ್ಗೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ಮುಂದೆ ಕೊಲೆ ರಹಸ್ಯ ಆರೋಪಿ ಚೇತನ್ ಬಾಯ್ಬಿಟ್ಟಿದ್ದಾನೆ. ಯುವತಿಯನ್ನ ಗರ್ಭಿಣಿ ಮಾಡಿ ಮೋಸ ಮಾಡಲು ಆರೋಪಿ ಮುಂದಾಗಿದ್ದ. ನಿನ್ನಿಂದ ಗರ್ಭಿಣಿ ಆಗಿದ್ದೇನೆ, ಈಗ ಮದುವೆ ಆಗು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದ ಚೇತನ್ ಮದುವೆ ಆಗಲು ಆರೋಪಿ ನಿರಾಕರಿಸಿದ್ದಾನೆ. ಇದೇ […]