Breaking News :

ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಸಂಸದ ಯದುವೀರ್ ಒಡೆಯರ್ ರಿಂದ ಭೂಮಿಪೂಜೆ 

  ಜನವಾಹಿನಿ News ಮಡಿಕೇರಿ : ರಾಷ್ಟ್ರೀಯ ಹೆದ್ದಾರಿ 275 ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ 21 ಕಡೆಗಳಲ್ಲಿ ಸುಮಾರು 94 ಕೋಟಿ ರೂ. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಮಡಿಕೇರಿ ತಾಲ್ಲೂಕಿನ ಮದೆನಾಡು ಬಳಿಯ ಕರ್ತೋಜಿ ಬಳಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದರು ಸ್ಥಳೀಯರ ಬೇಡಿಕೆಯಂತೆ 21 ಕಡೆಗಳಲ್ಲಿ ರಕ್ಷಣಾ […]

ಮಾ.1 ರಂದು ಕಡಗದಾಳುವಿನಲ್ಲಿ ಹಿಂದು ಸಂಗಮ ಶೋಭಾಯಾತ್ರೆ

ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿ ಕಡಗದಾಳು ವತಿಯಿಂದ ಮಾರ್ಚ್ 1 ರಂದು ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮಾತೃಭೂಮಿ, ಹಿಂದೂ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯವನ್ನು ರಕ್ಷಣೆ ಮಾಡುವುದರ ಜೊತೆಗೆ ಉಳಿಸಿ ಬೆಳೆಸುವ ಮೂಲಕ ಸುಭದ್ರವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಸಂಘಟಿತವಾಗುವ […]

ಚೊಕಂಡಳ್ಳಿ ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಸಂಸದರಿಗೆ ಮನವಿ

    ಜನವಾಹಿನಿ News ಸಿದ್ದಾಪುರ : ಚೊಕಂಡಳ್ಳಿ ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಗೆ ಅನುದಾನ ಒದಗಿಸಲು ಸಂಸದ ಯದುವೀರ್ ಒಡೆಯರ್ ಅವರಿಗೆ ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಾಸಖ್ಯಾತರ ಘಟಕ ಮನವಿ ಪತ್ರ ಸಲ್ಲಿಸಿದೆ ಸಿದ್ದಾಪುರದ ಎಸ್ .ಎನ್. ಡಿ .ಪಿ (ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ) ಸಭಾಂಗಣದಲ್ಲಿ ನಡೆದ ಎಸ್. ಎನ್. ಡಿ. ಪಿ .ವನಿತಾ ಮಹಿಳಾ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಯದುವೀರ್ ಚಾಮರಾಜ ದತ್ತ […]

ನಿರ್ಲಕ್ಷ್ಯ ಆರೋಪ : ಮಡಿಕೇರಿ ನಗರ ಸಭೆ ಎದುರು SDPI ಪ್ರತಿಭಟನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ನಗರದಲ್ಲಿ ವಿವಿಧ ಕಾಮಗಾರಿಗಳು ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರಸಭೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಲಾಯಿತು. ನಗರಸಭೆ ಮುಂಭಾಗ ಜಮಾಯಿಸಿದ ಪ್ರತಿಭಟನಾ ನಿರತರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಹಿಲ್ ರಸ್ತೆ, ತೆನಲ್ ಆಶ್ರಮ ದಾರಿ, ತ್ಯಾಗರಾಜ ಕಾಲನಿ, ಉಕ್ಕುಡರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಕಾವೇರಿ ಕಲಾಕ್ಷೇತ್ರ […]

ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ರಜೆ ನೀಡಲು ಸೂಚನೆ

ಜನವಾಹಿನಿ News ಮಡಿಕೇರಿ : ಕರ್ನಾಟಕ ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು)ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961 ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ಗುತ್ತಿಗೆ/ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಆರೋಗ್ಯ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ […]

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ : ಭಾಷೆ ಉಳಿಯಬೇಕಾದರೆ ಸಾಹಿತ್ಯ ಬೆಳೆಯಬೇಕು : ಡಾ.ಕೆ. ವಿ .ಚಿದಾನಂದ

  ಜನವಾಹಿನಿ News ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಫೆ. 24ರಂದು ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮಾತನಾಡುತ್ತಾ, ಭಾಷೆಗಳು ಉಳಿಯಬೇಕಾದರೆ ಅದನ್ನು ಹೆಚ್ಚೆಚ್ಚು ಬಳಸಬೇಕು, ಮುಂದಿನ ತಲೆಮಾರಿಗೆ ಪಸರಿಸುವ ಕೆಲಸ ಆಗಬೇಕು. ಆಧುನೀಕರಣದಿಂದ ಭಾಷೆ ನಾಶ […]

ಸರಕಾರ ಬಾಕಿ ಉಳಿಸಿಕೊಂಡಿರೋ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಸಂಘದಿಂದ ಮಾ.6ರಂದು ಬೃಹತ್ ಪ್ರತಿಭಟನೆ

  ಜನವಾಹಿನಿ News ಮಡಿಕೇರಿ : ಕಳೆದ ೩ ವರ್ಷಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿ ರೂಪಾಯಿ ಬಿಲ್ ತಕ್ಷಣ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆದಾರರ ಸಂಘವು ಮಾ.೬ರಂದು ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಂಘದ ಕಾರ್ಯಧ್ಯಕ್ಷ ವಿ.ಎ.ಲಾರೆನ್ಸ್ ಹೇಳಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ೩೭ ಸಾವಿರ ಕೋಟಿ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದೆ. ಗುತ್ತಿಗೆದಾರರು ರಾಜ್ಯಪಾಲರ ಆದೇಶದನ್ವಯ ಕಾಮಗಾರಿಗಳನ್ನು ನಿರ್ವಹಿಸುತ್ತಾರೆ. ಸರ್ಕಾರವೇ ಹಣಕ್ಕೆ ನೇರ […]

ಫೆ.26, 27ರಂದು ವನಚಾಮುಂಡೇಶ್ವರಿಯ ಕ್ಷೇತ್ರದ ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಜನವಾಹಿನಿ News ಮಡಿಕೇರಿ : ನಗರದ ಜ್ಯೋತಿನಗರದಲ್ಲಿ ನೆಲೆನಿಂತಿರುವ ವನಚಾಮುಂಡೇಶ್ವರಿಯ ಕ್ಷೇತ್ರದಲ್ಲಿ ಬಹ್ಮಕಳಶ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಫೆ.೨೬, ೨೭ ರಂದು ನಡೆಯಲಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಕೆ.ಸುದೀರ್, ಮಡಿಕೇರಿಯ ಜ್ಯೋತಿನಗರದಲ್ಲಿ ಸುಮಾರು ೪೨೬ ವರ್ಷಗಳಿಂದ ವನಚಾಮುಂಡೇಶ್ವರಿ ನೆಲೆನಿಂತಿದೆ. ಜೀರ್ಣೋದ್ಧಾರ ಕೈಗೊಂಡ ಹಿನ್ನೆಲೆ ಪುನರ್ ಪ್ರತಿಷ್ಠಾ ಅಷ್ಟಬಂದ ಬ್ರಹ್ಮಕಳಸ ಪೂಜಾ ಕಾರ್ಯಕ್ರಮವನ್ನು ತಂತ್ರಿಗಳಾದ ಬ್ರಹ್ಮಶ್ರಿ ಶ್ರೀಕಾಂತ್ ಭಟ್ಟತಿರಿ ಚಾಲೋಡ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. […]

ಕೇರಳ ಚುನಾವಣಾ ಪ್ರಚಾರದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ

ಜನವಾಹಿನಿ News ಮಡಿಕೇರಿ : ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿಯಲ್ಲಿ, ಇಂದು ನಡೆದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ.ಜೆ ಜಾರ್ಜ್, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡರು.

ಅಜ್ಞಾತ ದಿಕ್ಕಿನಿಂದ ಹಾರಿಬಂದ ಗುಂಡು ತಗುಲಿ ವ್ಯಕ್ತಿ ಗಂಭೀರ : ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಘಟನೆ

ಜನವಾಹಿನಿ News ಮಡಿಕೇರಿ : ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಅಜ್ಞಾತ ದಿಕ್ಕಿನಿಂದ ಹಾರಿಬಂದ ಗುಂಡು ತಗಲಿ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ನಡೆದಿದೆ. ಪುಲಿಯೇರಿ ಗ್ರಾಮ ವ್ಯಾಪ್ತಿಗೆ ಒಳಪಡುವ ಆನಂದಪುರದ ನಿವಾಸಿ ಆನೆಸ್‌ಡಿಕುಂಞ (63) ಎಂಬುವರು ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ತಮ್ಮಮನೆಯ ಹಿಂಭಾಗದಲ್ಲಿ ಅವರ ತೋಟದಿಂದ ಬಚ್ಚಲೂ ಕೊಠಡಿಗೆ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದಿಡೀರನೆ ತೂರಿ ಬಂದ ಗುಂಡು(ಚಿಲ್ಲು) ತಗಲಿ ಎದೆ ಭಾಗಕ್ಕೆ ಕಾಲಿಗೆ ಗಂಭೀರ ಗಾಯವಾಗಿದ್ದು […]