Breaking News :

ಬೆಟೋಳಿಯ ನಾಗೇಂದ್ರರಾವ್ ನಿಧನ

  ವಿರಾಜಪೇಟೆ : ಬೆಟೋಳಿ ಗ್ರಾಮದ ನಿವಾಸಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರಾದ ಶಾಂತಿ ಭೂಷಣ್ ರವರ ತಂದೆ ಬಿ. ಎಸ್ ನಾಗೇಂದ್ರರಾವ್ ತೀವ್ರ ಅನಾರೋಗ್ಯದಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಹದಲ್ಲಿ ಮಧ್ಯಾಹ್ನ 12 ಘಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

  ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ  ಮಡಿಕೇರಿ : ವಿರಾಜಪೇಟೆ ನಗರದ ಮಲ್ಮ ಕಾಂಪ್ಲೆಕ್ಸ್ ಆವರಣದಲ್ಲಿ ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಪ್ರಕಾಶ್ ಅಪ್ಪಯ್ಯ, ಖ್ಯಾತ ವಕೀಲರಾದ ವಿಶ್ವನಾಥ್, ಡಾಕ್ಟರ್ ಬೊಪಣ್ಣ, ಕೋಲತಂಡ ಬೊಪ್ಪಯ್ಯ, ಎಂ ಸಿ ಕಾವೇರಮ್ಮ, ಸುದರ್ಶನ್ ರೈ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅತಿಥಿ ಗಣ್ಯರಾಗಿ ಪುರಸಭೆ ಹಿರಿಯ ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ಕುರ್ಗ್ […]

ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವ

  ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವ ಮಡಿಕೇರಿ : ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು ನಗರಸಭಾ ಸದಸ್ಯರಾದ ಶ್ರೀ ಮುಸ್ತಫಾರವರು ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿನ ಪದಾಧಿಕಾರಿಗಳು ರಾಮಾ ಸೇವಾ ಸಮಿತಿ ಪದಾಧಿಕಾರಿಗಳು ಜ್ಯೋತಿ ಯುವಕ ಸಂಘದ ಸದಸ್ಯರು ಹಾಗೂ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.

ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದಲ್ಲಿ 79ನೇ ಸ್ವಾತಂತ್ರೋತ್ಸವ

  ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದಲ್ಲಿ 79ನೇ ಸ್ವಾತಂತ್ರೋತ್ಸವ ಮಡಿಕೇರಿ : ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದ ಹತ್ತಿರ ನಗರಸಭಾ ಸದಸ್ಯರಾದ ಮುಸ್ತಫಾನವರು 79ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಅಲ್ಲಿ ನೆರೆದಿದ್ದ ನಿವಾಸಿಗಳಿಗೆ ಸಿಹಿ ಮತ್ತು ಮಧ್ಯಾಹ್ನದ ಉಪಹಾರವನ್ನು ನೀಡಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

  ಮಡಿಕೇರಿ : ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೇಜರ್. ಡಾ. ಕುಶ್ವಂತ್ ಕೋಳಿಬೈಲು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಸ್.ಎಸ್.ಮಾದಯ್ಯ, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

  ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಸುಂಟಿಕೊಪ್ಪ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಆಟೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎ.ಎಂ. ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಕಿಟ್ಟಣ್ಣ ರೈ ಹಾಗೂ ಇತರರು ಭಾಗವಹಿಸಿದ್ದರು. ಮಳೆಯ ನಡುವೆಯೂ ಆಟೋಚಾಲಕರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆ

  ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ  ಶಾಲೆಯ ಎನ್.ಎಸ್.ಎಸ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿ ಎಂ ಸಿ ಸಹಯೋಗದಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರೋತ್ಸವ ಆಚರಣೆ 

  ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರೋತ್ಸವ ಆಚರಣೆ   ಸಿದ್ದಾಪುರ : ಮಡಿಕೇರಿ ರಸ್ತೆಯಲ್ಲಿ ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಾಜಿ ಯೋಧ ಶಬೀರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಪಡೆಯಲು ಹಿರಿಯರು ಅನುಭವಿಸಿದ ನೋವು ಅವರ ತ್ಯಾಗ ಬಲಿದಾವನ್ನು ಸ್ಮರಿಸಿದರು ಇದೇ ಸಂದರ್ಭ ಮಾಜಿ ಸೈನಿಕ ಶಬೀರ್ ಹಾಗೂ ಸಿದ್ದಾಪುರ ಪಂಚಾಯ್ತಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೂರಿಸ್ಟ್ ಟ್ಯಾಕ್ಸಿ ಚಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

  ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೊನ್ನಂಪೇಟೆ : ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಆಲೀರ ರಶೀದ್ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೂಕಳೇರ ಸುಮಿತ, ಕೋಳೇರ ಭಾರತಿ, ಕರ್ತಮಾಡ ರಶಿಕ, ಮೂಕಳೇರ ಮಧುಕುಮಾರ್, ರಾಮಕೃಷ್ಣ ವಿಜಯಕುಮಾರ್, ಎ. ಎ. ಅಜೀಜ್, ಮಚ್ಚಮಾಡ ವಿಲ್ಮ, ಆರತಿ ಸುರೇಶ್, ಮುಖ್ಯಾಧಿಕಾರಿ ಗೋಪಿ, ಪೊನ್ನಂಪೇಟೆ […]

ನಾವು ಅನುಭವಿಸುತ್ತಿರುವ ಸ್ವಾಂತಂತ್ರ್ಯ ನಮ್ಮ ಪೂರ್ವಿಕರ ಕೊಡುಗೆ : ಚಂಗಪ್ಪ

ನಾವು ಅನುಭವಿಸುತ್ತಿರುವ ಸ್ವಾಂತಂತ್ರ್ಯ ನಮ್ಮ ಪೂರ್ವಿಕರ ಕೊಡುಗೆ : ಚಂಗಪ್ಪ ಸಿದ್ದಾಪುರ : ನಮ್ಮ ಪೂರ್ವಿಕರು ಹೋರಾಟ ಪ್ರಾಣ ತ್ಯಾಗ ಮಾಡಿ ನಮಗೆ ಕೊಡುಗೆಯಾಗಿ ನೀಡಿರುವ ಸ್ವಾತಂತ್ರ್ಯವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂಬುವುದನ್ನು ಯಾರೂ ಮರೆಯುವಂತಿಲ್ಲ ಎಂದು ಆನಂದಪುರ ಎಸ್ಟೇಟಿನ ಡೆಪ್ಯೂಟಿ ಮೆನೇಜರ್ ಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಆನಂದಪುರ ಎಸ್ಟೇಟಿನ ಪಳ್ಳಕೆರೆ ವಿಭಾಗದಲ್ಲಿ ಏರ್ಪಡಿಸಿದ್ದ 79ನೇಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಫೀಲ್ಡ್ ಆಫೀಸರ್ ಪ್ರದೀಪ್, ತೋಟದ […]