ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಶಾಸಕ ಪೊನ್ನಣ್ಣ ಸ್ವಾಗತಿಸಿದರು

ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಶಾಸಕ ಪೊನ್ನಣ್ಣ ಸ್ವಾಗತಿಸಿದರು ಬೆಂಗಳೂರು : ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಸಂಸದರು ಹಾಗೂ ವಿರೋಧ ಪಕ್ಷದ ನಾಯಕರದ ರಾಹುಲ್ ಗಾಂಧಿಯವರನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಆತ್ಮೀಯವಾಗಿ ಬರಮಾಡಿಕೊಂಡರು.
ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ : ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ : ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ ಮಡಿಕೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಮಡಿಕೇರಿಯಲ್ಲಿ ಪ್ರತಿಭಟನಾ ಜಾಥ ನಡೆಸಿತು. ವೇದಿಕೆಯ ಸಂಚಾಲಕ ಅಗೋಳಿಕಜೆ ಧನಂಜಯ ಜಾಥಾದ […]
ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ

ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ ಮಡಿಕೇರಿ : ಜನ ವಿರೋಧದ ನಡುವೆ ರಾಜಾಸೀಟ್ ಉದ್ಯಾನವನದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ, ಪ್ರತಿಭಟನೆ ಮಾಡುವುದಾಗಿ ಮಾಜಿ ಸಚಿವ ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ. ರಾಜಾಸೀಟ್ ಉದ್ಯಾನವನ ಜನಸಂದಣಿ ಹೆಚ್ಚಿರುವ ಪ್ರದೇಶ. ಈಗಾಗಲೇ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ಸಮಸ್ಯೆ ಉದ್ಬವವಾಗಿದೆ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸದೇ ಜನರಿಗೆ ಸಮಸ್ಯೆಯಾಗಬಲ್ಲ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು […]
ರಾಜ್ಯದಾದ್ಯಂತ ಆ.೧೨ರಿಂದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ : ಜಿಲ್ಲೆಯಲ್ಲೂ ನಡೆಯಲಿದೆ ಪ್ರತಿಭಟನಾ – ಸಮಾವೇಶ

ರಾಜ್ಯದಾದ್ಯಂತ ಆ.೧೨ರಿಂದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ : ಜಿಲ್ಲೆಯಲ್ಲೂ ನಡೆಯಲಿದೆ ಪ್ರತಿಭಟನಾ – ಸಮಾವೇಶ ಮಡಿಕೇರಿ : ಮಾಸಿಕ ಕನಿಷ್ಠ ರೂ.೧೦ ಸಾವಿರ ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಆ.೧೨ರಿಂದ ೧೪ರವರೆಗೆ ರಾಜ್ಯದಾದ್ಯಂತ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಎಂ.ಉಮಾದೇವಿ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. […]
ಮಾನವ – ವನ್ಯಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿ ಸಭೆ – ಮಂತರ್ ಗೌಡ ಭಾಗಿ

ಮಾನವ – ವನ್ಯಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿ ಸಭೆ – ಮಂತರ್ ಗೌಡ ಭಾಗಿ ಮಡಿಕೇರಿ : ಕೊಡಗು ಮಾನವ – ವನ್ಯಪ್ರಾಣಿ ಸಂಘರ್ಷ (kodagu Man – Animal conflict mitigation foundation) ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿಯ ಉಪ ಶಮನ ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೊಡಗು ಮಾನವ – ವನ್ಯ ಪ್ರಾಣಿ ಸಂಘರ್ಷ ಉಪ ಶಮನ […]
ದಶಕಗಳಿಂದ ಈ ಗ್ರಾಮಕ್ಕಿಲ್ಲ ಸುಸಜ್ಜಿತ ರಸ್ತೆ : ಜನಪ್ರತಿನಿಧಿಗಳು ಬದಲಾದರೂ ಬದಲಾಗದ ಪರಿಸ್ಥಿತಿ..!

ದಶಕಗಳಿಂದ ಬಗೆ ಹರಿಯದ ರಸ್ತೆ ಸಮಸ್ಯೆ : ಕಾಡು ಪ್ರಾಣಿಗಳ ಹಾವಳಿ ನಡುವೆ ದಿನ ಕಳೆಯುತ್ತಿರುವ ಗ್ರಾಮಸ್ಥರು..! ಸಿದ್ದಾಪುರ : ನೆಲ್ಯಾಹುದಿಕೇರಿ ವ್ಯಾಪ್ತಿಯ ನಲುವತ್ತೆಕ್ರೆ ಗ್ರಾಮದ 2ನೇ ವಾರ್ಡಿಗೆ ಸೇರಿದ ಕೊಂಗೇರಿ ಬೊಪ್ಪಯ್ಯನವರ ತೋಟದ ಹತ್ತಿರವಿರುವ ಪುಟ್ಟ ಗ್ರಾಮದಲ್ಲಿರುವ ಸುಮಾರು 14ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಗೆ ತೆರಳುವ ಕಿರುದಾರಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಇದರಿಂದಾಗಿ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದ್ದು, ಜನ ಅತ್ತಿತ್ತ ನಡೆದಾಡಲು ಕೂಡ ಅಸಾಧ್ಯವಾದ ರೀತಿಯಲ್ಲಿದೆ. ಸುಮಾರು […]
ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ

ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ ಕುಶಾಲನಗರ :ಸೋಮವಾರಪೇಟ ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಸೋಸಿಯೇಷನ್ ಅಧ್ಯಕ್ಷರಾದ ಸಿ.ಕೆ ರೋಹಿತ್ ಅವರು ಅನಾವರಣ ಗೊಳಿಸಿದರು. ನಂತರ ಮಾತನಾಡಿದ ರೋಹಿತ್ ಅವರು ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ಅಸೋಸಿಯೇಷನ್ ವತಿಯಿಂದ ನಡೆಸಿಕೊಂಡು ಬರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯೋಗೇಶ್ ಪಟೇಲ್ ಕಾರ್ಯದರ್ಶಿ ಅಭಿನಂದ್, ವಿಟ್ಟಲ್,ಹೇಮಂತ್, ಲೋಹಿತ್ ಮೂದ್ರವಳ್ಳಿ ಮತ್ತು ಅಸೋಸಿಯೇಷನ್ ಸದಸ್ಯರುಗಳು […]
ಆನೆ ತುಳಿತಕ್ಕೆ ಬಲಿಯಾದ ರೈತನ ಅಂತಿಮ ದರ್ಶನ ಪಡೆದ ಶಾಸಕ ಪೊನ್ನಣ್ಣ

ಆನೆ ತುಳಿತಕ್ಕೆ ಬಲಿಯಾದ ರೈತನ ಅಂತಿಮ ದರ್ಶನ ಪಡೆದ ಶಾಸಕ ಪೊನ್ನಣ್ಣ ಮಡಿಕೇರಿ : ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ನೆನ್ನೆ ರಾತ್ರಿ ಆನೆ ದಾಳಿಯಿಂದ ಮೃತಪಟ್ಟ ಕೊಪ್ಪದ ಶಿವಪ್ಪ (72) ಎಂಬ ರೈತನ ಪಾರ್ಥಿವ ಶರೀರವನ್ನು ಇಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅಂತಿಮ ದರ್ಶನ ಪಡೆದರು. ನೆನ್ನೆ ಘಟನೆ ನಡೆದ ಕೂಡಲೇ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ […]
ಕೊಡವ ಸಂಸ್ಕೃತಿ, ಕಲೆಗಳ ಶ್ರೀಮಂತಿಕೆಗೆ ಎಲ್ಲೆಡೆ ಗೌರವ : ಎ.ಎಸ್.ಪೊನ್ನಣ್ಣ

ಕೊಡವ ಸಂಸ್ಕೃತಿ, ಕಲೆಗಳ ಶ್ರೀಮಂತಿಕೆಗೆ ಎಲ್ಲೆಡೆ ಗೌರವ : ಎ.ಎಸ್.ಪೊನ್ನಣ್ಣ ಮಡಿಕೇರಿ : ಕೊಡಗಿನ ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಿರುವ ಕೃಷಿ ಪದ್ಧತಿ, ಸಂಸ್ಕೃತಿ, ಕಲೆ, ಪರಂಪರೆಗಳನ್ನು ಇಂದಿನ ಯುವಜನರು ಮರೆಯದೆ ಮುಂದುವರಿಸಿಕೊಂಡು ಹೋಗುವಂತಾಗಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬಿದ್ದಾಟಂಡ ಕುಟುಂಬ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಸೋಸಿಯೇಷನ್ ಮತ್ತು ಕೊಡವ ಸಮಾಜ ಸಂಸ್ಕøತಿ ಮತ್ತು […]
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಖಂಡಿಸಿ ಮಡಿಕೇರಿಯಲ್ಲಿ ನಾಳೆ ಭಕ್ತರಿಂದ ಬೃಹತ್ ಜಾಥಾ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಖಂಡಿಸಿ ಮಡಿಕೇರಿಯಲ್ಲಿ ನಾಳೆ ಭಕ್ತರಿಂದ ಬೃಹತ್ ಜಾಥಾ ಮಡಿಕೇರಿ : ಧರ್ಮಸ್ಥಳ ಕ್ಷೇತ್ರಕ್ಕೆ ಹಾಗೂ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೆ ನಿರಂತರವಾಗಿ ಕಳಂಕ ತರುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಬೆಳವಣಿಗೆಯಿಂದಾಗಿ ಕ್ಷೇತ್ರದ ಭಕ್ತರಿಗೆ ನೋವುಂಟಾಗಿದೆ. ಭಕ್ತರ ಮನಸಿನಲ್ಲಿ ಆಕ್ರೋಶ , ಯುವ ಜನಾಂಗದಲ್ಲಿ ಕೋಮು ಭಾವನೆ ವ್ಯಕ್ತವಾಗುತ್ತಿದ್ದು ಸಮಾಜದಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗುತ್ತಿದೆ. ಈ ರೀತಿಯ ಅಪಪ್ರಚಾರ ಮಾಡುತ್ತಿರುವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ […]