Breaking News :

ಫೆ.21ರಂದು ಮರಗೋಡು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಮರಗೋಡು ಮಂಡಲ ವತಿಯಿಂದ ಫೆ.೨೧ರಂದು ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಪಿ.ವೈ.ಆನಂದ ರಘು ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ ಮರಗೋಡು ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ […]

ನೆಲ್ಯಹುದಿಕೇರಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ

ಜನವಾಹಿನಿ News ಸಿದ್ದಾಪುರ : ಐನ್ ಆಪ್ಟಿಕಲ್ಸ್ ಅಪ್ರೋಮೆಟ್ರಿ ಕ್ಲಿನಿಕ್, ಕುಶಾಲನಗರ ಇವರ ಆಶ್ರಯದಲ್ಲಿ  ಅಭ್ಯತ್ ಮಂಗಳ ಗ್ರಾಮೀಣಕೃಷಿಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ, ಹಾಗೂ ಚಿಕಿತ್ಸೆ ಶಿಬಿರವನ್ನು ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು, ನೆಲ್ಯಹುದಿಕೇರಿ ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್ ಉದ್ಘಾಟಿಸಿದರು. ಬಳಿಕಮಾತನಾಡಿದ ಅವರು ಸಂಸ್ಥೆಯು ನೀಡುತ್ತಿರುವ ಕಣ್ಣಿನ ತಪಾಸಣೆ ಹಾಗೂಉಚಿತ ಸೇವೆಯನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು. 50ಕ್ಕಿಂತಲೂ ಅಧಿಕ ಮಂದಿ ಉಚಿತ ತಪಾಸಣಾ ಶಿಬಿರದಲ್ಲಿ […]

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮನ್ ರೇಗಾ ಬಚಾವ್ ಸಂಗ್ರಾಮ : ಬಡವರ ಮೇಲೆ ಬಿಜೆಪಿ ದಾಳಿ : ಶಾಸಕ ಪೊನ್ನಣ್ಣ ಆರೋಪ 

ಜನವಾಹಿನಿ News ವಿರಾಜಪೇಟೆ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಿಂದ ಮಹಾತ್ಮಗಾಂಧಿ ಹೆಸರನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರದ ವಿರುದ್ಧ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾವೇರಿ ಕಾಲೇಜು ಸಮೀಪದಿಂದ ಆರಂಭವಾದ ಮನ್ ರೇಗಾ ಬಚಾವ್ ಸಂಗ್ರಾಮದ ಪಾದಯಾತ್ರೆಯು ವಿರಾಜಪೇಟೆ ಕಾರುನಿಲ್ದಾಣದಲ್ಲಿ ಸಮಾರೋಪಗೊಂಡಿತು. ಈ ವೇಳೆ ಪ್ರತಿಭಟನಾನಿರತರು ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ […]

ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

  ಜನವಾಹಿನಿ News ಮಡಿಕೇರಿ : ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇಗಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.3 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್‍ಗಳು/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿದೆ. ನಗರ ಪ್ರದೇಶದ ವಿಧಾನಸಭಾ ಕ್ಷೇತ್ರವಾದ ಮಡಿಕೇರಿ ವಿಧಾನಸಭಾ […]

ಫೆ.28 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ : ಸುಗಮ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ: ಎಸ್.ಜೆ.ಸೋಮಶೇಖರ್ 

  ಜನವಾಹಿನಿ News ಮಡಿಕೇರಿ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಇದೇ ಫೆಬ್ರವರಿ, 28 ರಿಂದ ಮಾರ್ಚ್, 17 ರವರೆಗೆ ನಡೆಯಲಿದ್ದು., ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಯಾವುದೇ ರೀತಿ ಗೊಂದಲ ಉಂಟಾಗದೆ ಸುಗಮ […]

ಅಗಲಿದ ಗೆಳೆಯನಿಗೆ ಸ್ನೇಹಿತರಿಂದ ಭಾವನಾತ್ಮಕ ವಿದಾಯ : ಅಂತಿಮ ಯಾತ್ರೆಯಲ್ಲಿ ಸರದಿ ಸಾಲಿನಲ್ಲಿ ಸಾಗಿದ ಬೈಕ್ ಹಾಗೂ ಆಟೋಗಳು

  ಜನವಾಹಿನಿ News ಸಿದ್ದಾಪುರ : ಅಗಲಿದ ಗೆಳೆಯನ ಅಂತಿಮ ಯಾತ್ರೆಯಲ್ಲಿ ಆಟೋ ಹಾಗೂ ಬೈಕ್ ಗಳು ಸರದಿ ಸಾಲಿನಲ್ಲಿ ಸಾಗುವ ಮೂಲಕ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ ಭಾವನಾತ್ಮಕ ದೃಶ್ಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಕಂಡುಂಬಂತು. ಕಳೆದ ಕೆಳ ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಾಪುರ ಆಟೋ ಚಾಲಕ ಕಾರ್ತಿಕ್ (33) ಭಾನುವಾರ ಮೃತಪಟ್ಟಿದ್ದು, ಅವರ ಅಂತಿಮ ಕ್ರಿಯೆ ಸೋಮವಾರ ಸಿದ್ದಾಪುರದ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು. ಇದಕ್ಕೂ ಮುನ್ನ ಗುಹ್ಯ ಗ್ರಾಮದ ನೇತಾಜಿ ಬಡಾವಣೆಯಲ್ಲಿರುವ […]

ಫೆ.೧೫ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್

ಜನವಾಹಿನಿ News ಮಡಿಕೇರಿ  : ಕಾರುಗುಂದದ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಫೆ.೧೫ ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ ನಡೆಯಲಿದೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಂಬಾಣೆ ಗೌಡ ಯುವ ವೇದಿಕೆಯ ಅಧ್ಯಕ್ಷ ಪಾರೆಮಜಲು ಪ್ರದೀಪ್ ಹಾಗೂ ಕಾರ್ಯದರ್ಶಿ ಯಶವಂತ್ ಕೇಟೋಳಿ ಕ್ಯಾರಂಬೋರ್ಡ್ ಕ್ರೀಡಾಕೂಟ ಗೌಡ ಜನಾಂಗಗಳಿಗೆ ಸೀಮಿತವಾಗಿದ್ದು, ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ […]

ಮಡಿಕೇರಿಯಲ್ಲಿ ಆರೋಗ್ಯ ಹಕ್ಕಿನ ಜಾಥಾ..!

  ಜನವಾಹಿನಿ News ಮಡಿಕೇರಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಹಾಗೂ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಹಕ್ಕಿನ ಜಾಥಾ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೇರು ಬೆವರು ಸಾಂಸ್ಕೃತಿಕ ಬಳಗದ ಸಂಚಾಲಕ ಸೋರಪಲ್ಲಿ ಚಂದ್ರಶೇಖರ್, ಕರ್ನಾಟಕದಲ್ಲಿ ಔಷಧಿಗಳು ಉಚಿತವಾಗಿ ಸಿಗುವಂತೆ ಮಾಡಲು ಸರ್ಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಅನ್ನು ೨೦೦೩ರಲ್ಲೇ ಸ್ಥಾಪಿಸಿದೆ. ಈ ಕಂಪೆನಿಯು […]

ಕೊಡಗು ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ : ಕಳವಾದ ಬರೋಬ್ಬರಿ 100 ಮೊಬೈಲ್ ಪತ್ತೆ.!

  ಜನವಾಹಿನಿ News ಮಡಿಕೇರಿ : ಕಳೆದ ಒಂದು ತಿಂಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೊಡಗು ಪೊಲೀಸರು ಜಿಲ್ಲೆಯ ವಿವಿಧೆಡೆಗಳಿಂದ ಕಳುವಾಗಿದ್ದ ಸುಮಾರು 11 ಲಕ್ಷ ರೂ.ಮೌಲ್ಯದ 100 ಮೊಬೈಲ್‌’ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ವಾರಸುದಾರರಿಗೆ ಪೊಲೀಸ್‌ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಂಗಳವಾರ ಈ ಮೊಬೈಲ್‌ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಎಸ್‌ಪಿ ಬಿಂದುಮಣಿ, ಮೊಬೈಲ್ ಫೋನ್‌ಗಳ ಪತ್ತೆಗೆ ಒಂದು ತಿಂಗಳ ಕಾರ್ಯಾಚರಣೆ ಆರಂಭಿಸಲಾಗಿತ್ತು. 2021-22 ರಲ್ಲಿ ಕೆಲವು ಮೊಬೈಲ್‌ಗಳು […]

ಶಾಸಕ ಪೊನ್ನಣ್ಣರಿಂದ ರಸ್ತೆ ದುರಸ್ತಿಗೆ ಭೂಮಿ ಪೂಜೆ 

  ಜನವಾಹಿನಿ News ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕರಡಿಗೋಡು ಗ್ರಾಮಕ್ಕೆ ತೆರಳುವ ರಸ್ತೆ ದುರಸ್ತಿ ಕಾರ್ಯಕ್ಕೆ ಭಾನುವಾರ ಶಾಸಕ ಪೊನ್ನಣ್ಣ ಗುದ್ದಲಿ ಪೂಜೆ ನೆರವೇರಿಸಿದರು. ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದಿದ್ದ ಈ ರಸ್ತೆಗೆ ಸುಮಾರು 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಸೇಕ್ರೆಡ್ ಹಾರ್ಟ್ ಹಾಸ್ಪಿಟಲ್ ಸಮೀಪದಿಂದ ಬಸವೇಶ್ವರ ದೇವಾಲಯದ ವರೆಗಿನ ಸುಮಾರು ಒಂದು ಕಿಲೋ ಮೀಟರ್ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಇದರಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಡಾಂಬರು […]