ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಉದ್ಘಾಟನೆ : ಕೊಡ್ಲಿಪೇಟೆಯಲ್ಲಿಯೂ ಜಾಗ ಒದಗಿಸಿದ್ದಲ್ಲಿ ಬಸ್ ನಿಲ್ದಾಣ ನಿರ್ಮಾಣ: ರಾಮಲಿಂಗಾರೆಡ್ಡಿ

ಜನವಾಹಿನಿ News ಮಡಿಕೇರಿ : ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣಕ್ಕೆ ರಾಷ್ಟ್ರದ ಪ್ರಥಮ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಶನಿವಾರಸಂತೆಯಲ್ಲಿ 105 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು. ಶನಿವಾರಸಂತೆ ಗ್ರಾಮದಲ್ಲಿ ಹುಟ್ಟಿ ಬೆಳೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಸೇನಾ ಕ್ಷೇತ್ರದಲ್ಲಿನ ಸೇವೆಯನ್ನು ಸ್ಮರಿಸಿ […]
ಫೆ.10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ: 1,31,783 ಮಕ್ಕಳಿಗೆ ಮಾತ್ರೆ ವಿತರ

ಜನವಾಹಿನಿ News ಮಡಿಕೇರಿ : ಮಕ್ಕಳಿಗೆ ಹುಟ್ಟಿನಿಂದ 16 ವರ್ಷಗಳ ವರೆಗೆ ನೀಡುವ ವಿವಿಧ ಲಸಿಕೆಗಳನ್ನು ನೀಡಿರುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ನಿಗದಿತ ಗುರಿ ತಲುಪಿರುವುದಿಲ್ಲ, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲಾ ಮಕ್ಕಳಿಗೂ ಎಲ್ಲಾ ನಿಗದಿತ ಲಸಿಕೆಗಳನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು. ನಂತರ ವಿಪಿಡಿ ಸರ್ವೇಕ್ಷಣಾ ಕಾರ್ಯಕರ್ಮದಲ್ಲಿ ನಿಗದಿತ ಗುರಿ ತಲುಪಿರುವುದಾಗಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಅವರು ಮಾಹಿತಿ ನೀಡಿದರು. […]
ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ ನಲ್ಲಿ ಇತಿಹಾಸ ಬರೆದ ಕೊಡಗಿನ ಗಗನ್

ಐತಿಹಾಸಿಕ ಸಾಧನೆ ಗೈದ “ಗಗನ್ – ಡೀನ್ ” ಜೋಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ ಜನವಾಹಿನಿ News ಮಡಿಕೇರಿ : ಹಾಕಿ, ಕ್ರಿಕೆಟ್, ಟೆನಿಸ್ ಹೀಗೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಕೊಡಗಿನವರ ಸಾಧನೆ ಅಪಾರ. ಇದೀಗ ಈ ಪಟ್ಟಿಯಲ್ಲಿ ಮೋಟಾರ್ ಸ್ಪೋರ್ಟ್ಸ್ ಭಾರತೀಯ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ (INRC) ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಕೊಡಗಿನ ಯುವನೋರ್ವ ಪ್ರಥಮ ಬಾರಿಗೆ ಇತಿಹಾಸ ಸೃಷ್ಟಿಸಿದ್ದಾರೆ. ಅಮ್ಮತ್ತಿ-ಹೊಸೂರಿನ ಕೊಂಗಂಡ ಕುಟುಂಬಕ್ಕೆ ಸೇರಿದ ಗಗನ್ ಕರುಂಬಯ್ಯ ರವರೆ ಈ ಸಾಧನೆ […]
ನಾಳೆ ಶನಿವಾರಸಂತೆಯ ನೂತನ ಸುಸಜ್ಜಿತ ಬಸ್ ನಿಲ್ದಾಣ ಲೋಕಾರ್ಪಣೆ

ಜನವಾಹಿನಿ News ಮಡಿಕೇರಿ : ಶನಿವಾರಸಂತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಸುಸಜ್ಜಿತ ಬಸ್ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಫೆ.೭ರಂದು ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧.೦೫ ರೂ. ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಆ ಭಾಗದ ಜನರ ನಾಲ್ಕು ದಶಕದ ಕನಸನ್ನು ಶಾಸಕರು ನನಸಾಗಿಸಿದ್ದಾರೆ. ಅಪ್ರತಿಮ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರು ಜನ್ಮಭೂಮಿ ಶನಿವಾರಸಂತೆಯ ಮೂಲಕ ೭೦ಕ್ಕೂ ಹೆಚ್ಚು ಬಸ್ ಪ್ರತಿನಿತ್ಯ […]
ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.೭ ರಿಂದ ಮಹಾಶಿವರಾತ್ರಿ ಉತ್ಸವ

ಜನವಾಹಿನಿ News ಮಡಿಕೇರಿ : ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.೭ ರಿಂದ ಫೆ.೧೫ರ ವರೆಗೆ ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಕೆ.ಕೆ.ಪೂವಯ್ಯ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಸಂಜೆ ೬.೩೦ ಗಂಟೆಗೆ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.೮ರಂದು ದೇವರಕೊಲ್ಲಿ ಚಾಮುಂಡೇಶ್ವರಿ ಭಜನಾ ಸಮಿತಿಯಿಂದ […]
ಕೂಡುಗದ್ದೆ ಲೆಜೆಂಡ್ಸ್ ಕ್ರಿಕೆಟ್ ಲೀಗ್ : ಗುಹ್ಯ ಟೈಟನ್ಸ್ ಚಾಂಪಿಯನ್ – ಸ್ಟಾರ್ ಸ್ಟ್ರೈಕರ್ ರನ್ನರ್ಸ್

ಜನವಾಹಿನಿ News ಸಿದ್ದಾಪುರ : ಅಲ್ ಅಮೀನ್ ಸಂಘದ ವತಿಯಿಂದ ಸಿದ್ದಾಪುರ ಗ್ರಾಮದ ಗುಹ್ಯ ಕೂಡುಗದ್ದೆಯ, ರಾಮಣ್ಣರವರ ಗೆದ್ದೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಚಾಂಪಿಯನ್ಸ್ ಪಟ್ಟವನ್ನು ಗುಹ್ಯ ಟೈಟನ್ಸ್ ತಂಡ ತನ್ನದಾಗಿಸಿಕೊಂಡರೆ. ಸ್ಟಾರ್ ಸ್ಟ್ರೈಕರ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದು , ಸುಮಾರು ಆರು ತಂಡಗಳು ಭಾಗವಹಿಸಿದ್ದವು. ಆರು ತಂಡಗಳ ಪೈಕಿ ಗುಹ್ಯ ಟೈಟಾನ್ಸ್ ಹಾಗೂ ಸ್ಟಾರ್ ಸ್ಟ್ರೈಕರ್ […]
ಕ್ಲೋಸ್‌ಬರ್ನ್ ಸಹಿಪ್ರಾ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಜನವಾಹಿನಿ News ಮಡಿಕೇರಿ : ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕಡಗದಾಳು ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎನ್. ಪುಷ್ಪಾವತಿ ರೈ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನೆರವೇರಿತು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ. ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಎಂ.ಟಿ. ಲಕ್ಷ್ಮೀ ದಿನದ ಮಹತ್ವದ ಕುರಿತಾಗಿ ಮಾತನಾಡಿದರು. ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ […]
ಆಟೋಗೆ ಹಿಂದಿನಿಂದ ಕಾರು ಡಿಕ್ಕಿ : ಆಟೋ ಚಾಲಕನ ಮೇಲೆ ಹರಿದ ಲಾರಿ – ಚಾಲಕ ಸ್ಥಳದಲ್ಲೇ ಸಾವು

ಜನವಾಹಿನಿ News ಮಡಿಕೇರಿ: ಕಾರೊಂದು ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ರಸ್ತೆ ಮೇಲೆ ಬಿದ್ದಿದ್ದು, ಈ ವೇಳೆ ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಈ ಭೀಕರ ಸರಣಿ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆ ಗೇಟಿನ ಬಳಿ ಸಂಭವಿಸಿದೆ. ಸುಂದರ ಚಿಟ್ಟಿಕಾನ ಎಂಬುವವರೇ ಮೃತ ದುರ್ದೈವಿ. ಅವರಿಗೆ 62 ವರ್ಷ ವಯಸ್ಸಾಗಿತ್ತು. ದಿ.ಬಿಸಿಲುಮನೆ ರಾಮಣ್ಣ ಗೌಡರ ಪುತ್ರರಾದ ಸುಂದರರವರು ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ […]
ಕಂಬಳದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಪೃಥ್ವಿರಾಜ್

ಜನವಾಹಿನಿ News ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣ ಓಡಿಸುವ ವೇಗದಲ್ಲಿ ಹೊಸ ದಾಖಲೆ ನಿರ್ಮಾಣ ಗೊಂಡಿದೆ ಎಂದು ಕಂಬಳದ ಆಯೋಜಕರು ತಿಳಿಸಿದ್ದಾರೆ. ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ – ಕಾಲೆ ಕೋಣಗಳ ಜೋಡಿ ನೇಗಿಲು ಕಿರಿಯ ವಿಭಾಗ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಕೋಣಗಳನ್ನು ಪಡು ಸಾಂತೂರಿನ 22 ವರ್ಷ ಪ್ರಾಯದ ಪೃಥ್ವಿರಾಜ್ ಪೂಜಾರಿ ಎಂಬ ಯುವಕ […]
ಫೆನಾಯಿಲ್ ಘಟಕದ ಹೆಸರಲ್ಲಿ ಡ್ರಗ್ಸ್ ತಯಾರಿಕೆ : ಗುಜರಾತ್ ಪೆಡ್ಲರ್‌ನಿಂದ ಸಿಕ್ಕ ಮಾಹಿತಿ – ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಅಧಿಕಾರಿಗಳಿಂದ ದಾಳಿ

ಜನವಾಹಿನಿ News ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಡ್ರಗ್ಸ್ ತಯಾರಿಕೆಗೆ ಸೇಫ್ ಜೋನ್ ಆಗ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇವತ್ತು ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಭಾರೀ ಪ್ರಮಾಣದ ಡ್ರಗ್ಸ್ ತಯಾರಿಕೆಯ ಘಟಕದ ಮೇಲೆ ದಾಳಿ ಮಾಡಿದ್ದಾರೆ. ನಗರದ ಹೆಬ್ಬಾಳದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕದ ಮೇಲೆ ಈ ದಾಳಿ ನಡೆದಿದೆ. ಈ ಘಟಕ ಬೋರೇಗೌಡ ಎಂಬ ವ್ಯಕ್ತಿಗೆ ಸೇರಿದ್ದು, 1 ವರ್ಷದ ಹಿಂದೆ […]