Breaking News :

ವಾರ್ಷಿಕ ಸಭೆ : ಒಕ್ಕಲಿಗರ ಸೌಹಾರ್ಧ ಸಹಕಾರಿ ಸಂಘಕ್ಕೆ 4,19,119 ರೂ ಲಾಭ 

  ಜನವಾಹಿನಿ NEWS ಸೋಮವಾರಪೇಟೆ : ಇಲ್ಲಿನ ಒಕ್ಕಲಿಗರ ಸೌಹಾರ್ಧ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಸಮೀಪದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಜೆ.ದೀಪಕ್ ಅವರ ನೇತೃತ್ವದ ಶನಿವಾರ ನಡೆಯಿತು. ದೀಪಕ್ ಮಾತನಾಡಿ, ಸಹಕಾರಿ ಸಂಘದಲ್ಲಿ ಇವರೆಗೆ ಒಟ್ಟು ೩೩೯ ಸದಸ್ಯರಿದ್ದಾರೆ. ೨೦೨೪-೨೫ನೇ ಸಾಲಿನಲ್ಲಿ ಸಂಘವು ಒಟ್ಟು ೪,೧೯,೧೧೯ ರೂ ಲಾಭಗಳಿಸಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲಾಗುವುದರೊಂದಿಗೆ ಸದಸ್ಯರನ್ನ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ […]

ಕೊಳವೆ ಬಾವಿ ನಿರ್ಮಿಸಿಕೊಡಲು ಲಂಚದ ಬೇಡಿಕೆ : ಪಂಚಾಯತಿ ಅಧ್ಯಕ್ಷೆ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

  ಜನವಾಹಿನಿ NEWS ಕರಾವಳಿ: ಕೃಷಿ ಜಮೀನಿಗೆ ಕೊಳವೆ ಬಾವಿ ನಿರ್ಮಿಸಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಬಂಟ್ವಾಳ ತಾಲ್ಲೂಕು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ, ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ‘ನಮ್ಮ ಮಾವನಿಗೆ ಪೆರುವಾಯಿ ಗ್ರಾಮದಲ್ಲಿ ಒಂದು ಎಕರೆ ಕೃಷಿ ಜಮೀನು ಇದ್ದು, ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೊಳವೆ ಬಾವಿ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ಮಾವನಿಗೆ […]

ಹೃದಯಘಾತದಿಂದ ಕಾರಿನಲೇ ಕೊನೆಯುಸಿರೆಳೆದ ಯೋಜನಾಧಿಕಾರಿ

ಜನವಾಹಿನಿ NEWS ಮಡಿಕೇರಿ : ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಆಲ್ಟೋ ಕಾರಿನಲ್ಲಿ ಇಂದು ಸಂಜೆ 4ರ ಸಮಯಕ್ಕೆ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಹೃದಯಘಾತದಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೂಲತಃ ಬೆಂಗಳೂರಿನವರಾದ, ತಿತಿಮಿತಿಯಲ್ಲಿ ಕುಟುಂಬ ಸಹಿತ ವಾಸಿಸುತ್ತಿದ್ದ ಮನಮೋಹನ್ (46) ನಿಧನ ಹೊಂದಿದ್ದಾರೆ. ಪೊನ್ನಪ್ಪ ಸಂತೆ, ನಿಟ್ಟೂರು ಬಾಳಲೆ,ಸೋಮವಾರ ಪೇಟೆ ಸಿದ್ದಾಪುರದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದುವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೂರ್ನಾಡುವಿನಲ್ಲಿ ಗಮನ ಸೆಳೆದ ಗೌರಿ ಗಣೇಶ ಮೂರ್ತಿಗಳ ಶೋಭಾಯಾತ್ರೆ

      ಜನವಾಹಿನಿ NEWS ಮೂರ್ನಾಡು : ಗೌರಿ ಗಣೇಶ ಹಬ್ಬದ ಅಂಗವಾಗಿ ಮೂರ್ನಾಡು ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ೭ ದಿನಗಳವರೆಗೆ ಪೂಜಾ ಕಾರ್ಯಗಳನ್ನು ನಡೆಸಿ ಬಲಮುರಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ ೩೪ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವ ಮೂರ್ತಿ, ಮೂರ್ನಾಡು ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ೩೩ನೇ ವರ್ಷದ ಗೌರಿ-ಗಣೇಶೋತ್ಸವದ ಉತ್ಸವ ಗಣೇಶ ಮೂರ್ತಿ, […]

ರಣ ಭೀಕರ ಮಳೆಗೆ ಉತ್ತರ ಭಾರತ ತತ್ತರ : 30ಕ್ಕೂ ಅಧಿಕ ಮಂದಿ ಸಾವು 

  ಜನವಾಹಿನಿ NEWS ನವದೆಹಲಿ : ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ರಾಜಧಾನಿಯ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ. ಯಮುನಾ ನದಿ ನೀರಿನ ಮಟ್ಟವು 206.83 ಮೀಟರ್‌ ದಾಖಲಾಗಿದೆ. ನಿವಾಸಿಗಳ ಪರದಾಟ ಬುಧವಾರವೂ ಮುಂದುವರಿದಿದೆ. ಬೀದಿಗಳು ಹೊಳೆಯಂತಾಗಿದ್ದು, ಮಾರುಕಟ್ಟೆ ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ನಿವಾಸಿಗಳನ್ನು ರಕ್ಷಿಸಲಾಗಿದ್ದರೂ ಕೆಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಜೀರಾಬಾದ್‌ ಮತ್ತು ಹತ್ನಿಕುಂಡ್‌ ಬ್ಯಾರೇಜ್‌ಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ನೀರಿನ ಮಟ್ಟ […]

ತೋಟಂ ಕೊಚ್ಚಿ ಕಾಲೋನಿಯಲ್ಲಿ ಮನೆಗೋಡೆ ಕುಸಿದು ಹಾನಿ

  ಜನವಾಹಿನಿ NEWS ಮಡಿಕೇರಿ : ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಗಡಿ ಗ್ರಾಮ ಕರಿಕೆಯ ತೋಟಂ ಕೊಚ್ಚಿ ಕಾಲೋನಿ ನಿವಾಸಿ ಬೆಳ್ಳಚ್ಚಿ ಎಂಬುವವರ ಮನೆ ಮೇಲ್ಚಾವಣಿ ಬಿದ್ದು ಅಡಿಗೆ ಕೋಣೆ ಸಂಪೂರ್ಣ ಹಾನಿಯಾಗಿದೆ. ಮಕ್ಕಳು ಸೇರಿದಂತೆ ಏಳು ಮಂದಿ ವಾಸವಿದ್ದು , ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಬಡತನದಲ್ಲಿರುವ ತಮ್ಮ ಮನೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಮನೆ ಮಂಜೂರು ಮಾಡಲಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕರಿಕೆ ಹೆಲ್ಪ್ […]

ಕೂತಿ ಗ್ರಾಮದಲ್ಲಿ ಗೌರಿ–ಗಣೇಶ ಮೂರ್ತಿ ವಿಸರ್ಜನೆ

ಜನವಾಹಿನಿ NEWS ಸೋಮವಾರಪೇಟೆ : ಸಮೀಪದ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ–ಗಣೇಶ ಮೂರ್ತಿಗಳನ್ನು ಇಂದು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗ್ರಾಮದ ದೇವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ. ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್,ಖಜಾಂಚಿ ಲಕ್ಷ್ಮಯ್ಯ, ಅರ್ಚಕ ಅನಂತ್ ರಾಮ್, ಕೆ.ಎಂ. ಅಶ್ವತ್, ಸಿ.ಯು. ಭರತ್, ರಾಜೇಶ್, ಬಾನುಪ್ರಸಾದ್ ಹಾಗೂ ಗ್ರಾಮಸ್ಥರು ಇದ್ದರು.

ಸಂಪಾಜೆಯಲ್ಲಿ ಭೀಕರ ರಸ್ತೆ ಅಪಘಾತ : ನೆಲ್ಯಹುದಿಕೇರಿ ಗ್ರಾಮದ ಯುವತಿ ( ಶೋಭಾ) ಸಾವು 

ಜನವಾಹಿನಿ NEWS ಮಡಿಕೇರಿ : ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಸಮೀಪ ಕಡೆಪಾಲ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಟ್ಯಾಂಕರ್ ಮತ್ತು ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ನೆಲ್ಯಹುದಿಕೇರಿ ಗ್ರಾಮದ ಶೋಭಾ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತಕ್ಕೆ ತುತ್ತಾದ ಕಾರು ಗಾಯಾಳುಗಳಿಗೆ […]

ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ : ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಓದಿನ ಕಡೆಗೆ ಗಮನ ಹರಿಸಿ ಠಾಣಾಧಿಕಾರಿ ಮಂಜುನಾಥ್ ಕಿವಿ ಮಾತು 

ಜನವಾಹಿನಿ NEWS ಸಿದ್ದಾಪುರ : ಜೀವನದಲ್ಲಿ ಸಾಧನೆ ಮಾಡಲು ಹೊರಟಿರುವ ನೀವು ದುಶ್ಚಟಕ್ಕೆ ಬಲಿಯಾಗದೆ ಓದಿನ ಕಡೆಗೆ ಗಮನ ಹರಿಸಿ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ ಇಲಾಖೆ ಕೊಡಗು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ವಿರಾಜಪೇಟೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಿದ್ದಾಪುರ ಪಟ್ಟಣದಲ್ಲಿ […]

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ : ಅರೋಗ್ಯವಂತ ಮಗು ದೇಶದ ಸಂಪತ್ತು – ತನ್ಮಯಿ ಪ್ರವೀಣ್

  ಜನವಾಹಿನಿ NEWS ಸೋಮವಾರಪೇಟೆ : ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗು ಬಾಣಂತಿಯರಿಗೆ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಇನ್ನರ್‌ವೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರೋಗ್ಯವಂತ ಮಗು ದೇಶದ ಸಂಪತ್ತು. ಗರ್ಭಿಣಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕು. ಒತ್ತಡ ಮುಕ್ತವಾಗಿ ಜೀವನ ಶೈಲಿ ಬೆಳೆಸಿಕೊಳ್ಳುವ ಮೂಲಕ ಅರೋಗ್ಯವಂತ ಮಗು ಜನನಕ್ಕೆ ತಮ್ಮ […]