ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ : ವಿಡಿಯೋ ವೈರಲ್ – ಎಲ್ಲೆಡೆ ಬಾರಿ ಪ್ರಶಂಸೆ ವ್ಯಕ್ತ

ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ : ವಿಡಿಯೋ ವೈರಲ್ – ಎಲ್ಲೆಡೆ ಬಾರಿ ಪ್ರಶಂಸೆ ವ್ಯಕ್ತ ಜನವಾಹಿನಿ NEWS ಮಡಿಕೇರಿ : ನಗರದ ಪ್ರಮುಖ ಪ್ರವಾಸಿ ತಾಣವಾದ ಅಬ್ಬಿ ಜಲಪಾತಕ್ಕೆ ತೆರಳುವ ರಸ್ತೆಯು ಭಗವತಿ ನಗರದ ಸಮೀಪ ಗುಂಡಿಮಯವಾಗಿದ್ದನ್ನು ಮನಗಂಡ ಕರ್ತವ್ಯದಲ್ಲಿರುವ ಮಡಿಕೇರಿ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ […]
ಶಾಸಕ ಪೊನ್ನಣ್ಣರವರಿಂದ ಪರಿಹಾರ ಚೆಕ್ ವಿತರಣೆ

ಜನವಾಹಿನಿ NEWS ವಿರಾಜಪೇಟೆ : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ರೈತರುಗಳಾದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬುವವರ ಹಸುಗಳು ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ರೈತರ ಕುಟುಂಬಕ್ಕೆ ₹ 1.62ಲಕ್ಷ ಪರಿಹಾರದ ಚೆಕ್ ಅನ್ನು ಶಾಸಕ ಪೊನ್ನಣ್ಣ ಇಂದು ವಿತರಿಸಿದರು.
ಶಾಸಕ ಪೊನ್ನಣ್ಣನವರಿಂದ KSRTC 8 ಹೊಸ ಬಸ್ ಮಾರ್ಗ ಹಾಗೂ ಬಸ್ ಗಳ ಉದ್ಘಾಟನೆ

ಜನವಾಹಿನಿ NEWS ವಿರಾಜಪೇಟೆ : ನಗರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ, 8 ಹೊಸ ಮಾರ್ಗಗಳನ್ನು ಹಾಗೂ 8 ಹೊಸ ಬಸ್ ಗಳ ಉದ್ಘಾಟನೆ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ನೆರವೇರಿಸಿದರು. ವೇಗವಾಗಿ ಬೆಳೆಯುತ್ತಿರುವ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಹಾಗೂ ಏರಿಕೆಯಾಗಿರುವ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ನೂತನ ಬಸ್ ಮಾರ್ಗಗಳನ್ನು ಹಾಗೂ […]
ಬೆಟೋಳಿಯ ನಾಗೇಂದ್ರರಾವ್ ನಿಧನ

ವಿರಾಜಪೇಟೆ : ಬೆಟೋಳಿ ಗ್ರಾಮದ ನಿವಾಸಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರಾದ ಶಾಂತಿ ಭೂಷಣ್ ರವರ ತಂದೆ ಬಿ. ಎಸ್ ನಾಗೇಂದ್ರರಾವ್ ತೀವ್ರ ಅನಾರೋಗ್ಯದಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಹದಲ್ಲಿ ಮಧ್ಯಾಹ್ನ 12 ಘಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.
ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಮಡಿಕೇರಿ : ವಿರಾಜಪೇಟೆ ನಗರದ ಮಲ್ಮ ಕಾಂಪ್ಲೆಕ್ಸ್ ಆವರಣದಲ್ಲಿ ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಪ್ರಕಾಶ್ ಅಪ್ಪಯ್ಯ, ಖ್ಯಾತ ವಕೀಲರಾದ ವಿಶ್ವನಾಥ್, ಡಾಕ್ಟರ್ ಬೊಪಣ್ಣ, ಕೋಲತಂಡ ಬೊಪ್ಪಯ್ಯ, ಎಂ ಸಿ ಕಾವೇರಮ್ಮ, ಸುದರ್ಶನ್ ರೈ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅತಿಥಿ ಗಣ್ಯರಾಗಿ ಪುರಸಭೆ ಹಿರಿಯ ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ಕುರ್ಗ್ […]
ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವ

ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವ ಮಡಿಕೇರಿ : ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು ನಗರಸಭಾ ಸದಸ್ಯರಾದ ಶ್ರೀ ಮುಸ್ತಫಾರವರು ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿನ ಪದಾಧಿಕಾರಿಗಳು ರಾಮಾ ಸೇವಾ ಸಮಿತಿ ಪದಾಧಿಕಾರಿಗಳು ಜ್ಯೋತಿ ಯುವಕ ಸಂಘದ ಸದಸ್ಯರು ಹಾಗೂ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.
ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದಲ್ಲಿ 79ನೇ ಸ್ವಾತಂತ್ರೋತ್ಸವ

ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದಲ್ಲಿ 79ನೇ ಸ್ವಾತಂತ್ರೋತ್ಸವ ಮಡಿಕೇರಿ : ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದ ಹತ್ತಿರ ನಗರಸಭಾ ಸದಸ್ಯರಾದ ಮುಸ್ತಫಾನವರು 79ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಅಲ್ಲಿ ನೆರೆದಿದ್ದ ನಿವಾಸಿಗಳಿಗೆ ಸಿಹಿ ಮತ್ತು ಮಧ್ಯಾಹ್ನದ ಉಪಹಾರವನ್ನು ನೀಡಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಡಿಕೇರಿ : ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೇಜರ್. ಡಾ. ಕುಶ್ವಂತ್ ಕೋಳಿಬೈಲು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಸ್.ಎಸ್.ಮಾದಯ್ಯ, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಸುಂಟಿಕೊಪ್ಪ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಆಟೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎ.ಎಂ. ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಕಿಟ್ಟಣ್ಣ ರೈ ಹಾಗೂ ಇತರರು ಭಾಗವಹಿಸಿದ್ದರು. ಮಳೆಯ ನಡುವೆಯೂ ಆಟೋಚಾಲಕರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಎನ್.ಎಸ್.ಎಸ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿ ಎಂ ಸಿ ಸಹಯೋಗದಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.