Breaking News :

ಜಿಲ್ಲೆಯ ಅಭಿವೃದ್ಧಿ ಸಂಬಂಧ ಸಚಿವರು, ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ

ಜಿಲ್ಲೆಯ ಅಭಿವೃದ್ಧಿ ಸಂಬಂಧ ಸಚಿವರು, ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ಮಡಿಕೇರಿ : ಕೊಡಗು ಜಿಲ್ಲೆಯ ಅಭಿವೃದ್ಧಿ ಸಂಬಂಧ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಅವರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳ ಜೊತೆ ಸಭೆ ನಡೆಸಿ, ಜಿಲ್ಲಾ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳು ಉಂಟುಮಾಡಿರುವ ಧನಾತ್ಮಕ ಬದಲಾವಣೆಯ ಮಾಹಿತಿ ಪಡೆದು, ವಿವಿಧ ಇಲಾಖೆಗಳ […]

ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ

ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ ಮಡಿಕೇರಿ : ಹೈ೫ ಸ್ಟುಡಿಯೋಸ್ ಹಾಗೂ ಎಸಿಇ ೨೨ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ಎಲ್ಟು ಮುತ್ತಾ ಚಿತ್ರ ಆ.೧ಕ್ಕೆ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೊಡಗಿನವರಾದ ರಾ.ಸೂರ್ಯ ನಿರ್ದೇಶನದ ಚಿತ್ರ ಪೂರ್ಣ ಪ್ರಮಾಣದಲ್ಲಿ ಕೊಡಗಿನ ಸೊಗಡನ್ನೇ ಇಟ್ಟುಕೊಂಡು ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನ ಇದಾಗಿದ್ದು, ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಪ್ರಸನ್ನ […]

ಅಸ್ಸಾಂನವರ ಸೋಗಿನಲ್ಲಿರುವ ಬಾಂಗ್ಲಾ ವಲಸಿಗರಿಂದ ಕಾನೂನು ಬಾಹಿರ ಚಟುವಟಿಕೆಗಳ ಹೆಚ್ಚಳ : ಗಡಿಪಾರಿಗೆ ಜಿಲ್ಲಾ ಬಿಜೆಪಿ ಆಗ್ರಹ 

ಅಸ್ಸಾಂನವರ ಸೋಗಿನಲ್ಲಿರುವ ಬಾಂಗ್ಲಾ ವಲಸಿಗರಿಂದ ಕಾನೂನು ಬಾಹಿರ ಚಟುವಟಿಕೆಗಳ ಹೆಚ್ಚಳ : ಗಡಿಪಾರಿಗೆ ಜಿಲ್ಲಾ ಬಿಜೆಪಿ ಆಗ್ರಹ ಮಡಿಕೇರಿ : ಜಿಲ್ಲೆಯಲ್ಲಿ ಅಸ್ಸಾಂನವರ ಸೋಗಿನಲ್ಲಿ ಬಾಂಗ್ಲದೇಶ ವಲಸಿಗರು ಸೇರಿಕೊಂಡಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ, ಗೋಮಾಂಸ ಮಾರಾಟ, ಹಲ್ಲೆ ಪ್ರಕರಣಗಳು ವಲಸೆ ಕಾರ್ಮಿಕರಿಂದ ಹೆಚ್ಚಾಗಿ ನಡೆಯುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಲಸೆ ಕಾರ್ಮಿಕರ ದಾಖಲಾತಿ ಸಂಗ್ರಹಿಸಲು ಸೂಚನೆ ನೀಡಬೇಕೆಂದು ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಒತ್ತಾಯಿಸಿದ್ದಾರೆ. ನಗರದ […]

ಚನ್ನಯ್ಯನಕೋಟೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಚನ್ನಯ್ಯನಕೋಟೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮಡಿಕೇರಿ : ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ದೂರವಿದ್ದು ಗುಣಮಟ್ಟದ ಆಹಾರ ಸೇವನೆ ಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಮೈಸೂರು ಅಲ್ ಅನ್ಸರ್ ಆಸ್ಪತ್ರೆಯ ವೈದ್ಯ ಡಾ. ಜಾವೀದ್ ಸಲಹೆ ನೀಡಿದ್ದಾರೆ. ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ಚೆನ್ನ ಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ […]

ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ

ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ವಿರಾಜಪೇಟೆ : ಸಮೀಪದ ಬೇಟೋಳಿ ಗ್ರಾಮದ ರಾಮನಗರ ದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ನಾಗ ದೇವರ ಗುಡಿಯಲ್ಲಿ ನಾಗರ ಪಂಚಮಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಿತು. ಅರ್ಚಕರು ಸಂಕಲ್ಪ ಪೂಜೆ ಹಾಗೂ ಪ್ರಾರ್ಥನೆ ಯನ್ನು ಮಾಡಿದರು. ತದನಂತರ ಅಲಂಕಾರ ಪೂಜೆ, ಕ್ಷೀರಾಭಿಷೇಕ, ಪಂಚಾಂಬ್ರುತ ಅಭಿಷೇಕ, ಕುಂಕುಮಾರ್ಚನೆ, ಸೀಯಾಳ ಅಭಿಷೇಕ ವು ಜರುಗಿತು. ಅರ್ಚಕರು ನಾಗ ತಂಬಿಲವನ್ನು ನೆರವೇರಿಸಿದರು. […]

ಹೆಗ್ಗಳ ಪಾಲ್ಟ್ ಮಕ್ಕಿಯಲ್ಲಿ ಶ್ರೀ ನಾಗರ ಪಂಚಮಿ

ಹೆಗ್ಗಳ ಪಾಲ್ಟ್ ಮಕ್ಕಿಯಲ್ಲಿ ಶ್ರೀ ನಾಗರ ಪಂಚಮಿ ವಿರಾಜಪೇಟೆ :ಸಮೀಪದ ಹೆಗ್ಗಳ ಗ್ರಾಮದ ಪಾಲ್ಟ್ ಮಕ್ಕಿಯಲ್ಲಿರುವ ಶ್ರೀ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು. ಅರ್ಚಕರಾದ ವೇಣುಗೋಪಾಲ್ ಭಟ್ ರವರು ಪೂಜಾ ವಿಧಾನಗಳನ್ನು ನಡೆಸಿದರು. ಅರ್ಚಕರು ಮೊದಲಿಗೆ ಸಂಕಲ್ಪ ಪೂಜೆ, ಅಲಂಕಾರ, ಶ್ರೀ ನಾಗ ದೇವರಿಗೆ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಪುಷ್ಪರ್ಚನೆ ಯನ್ನು ನೆರವೇರಿಸಿದರು. ತದನಂತರ ನಾಗ ತಂಬಿಲವನ್ನು ನಡೆಸಲಾಯಿತು. ದೇವಸ್ಥಾನದ ಸಮೀಪವಿರುವ ಹುತ್ತಕ್ಕೆ ಗ್ರಾಮದ ಮಹಿಳೆಯರು […]

ಪದವಿ ಫಲಿತಾಂಶದಲ್ಲಿ ಸಂಶುಲ್ ಉಲಮ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಪದವಿ ಫಲಿತಾಂಶದಲ್ಲಿ ಸಂಶುಲ್ ಉಲಮ ಕಾಲೇಜು ವಿದ್ಯಾರ್ಥಿಗಳ ಸಾಧನೆ ವಿರಾಜಪೇಟೆ : ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ವಿರಾಜಪೇಟೆ ತಾಲ್ಲೂಕಿನ ಪೇರುಂಬಾಡಿಯ ಸಂಸಲ್ ಉಲಮ ಎಜುಕೇಶನಲ್ ಅಕಾಡೆಮಿಯ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿಭಾಗದಲ್ಲಿ ಶೇ100ರ ಫಲಿತಾಂಶ ಪಡೆದು ನಾಲ್ವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ 2024- 25 ನೇ ಸಾಲಿನ ಫಲಿತಾಂಶದಲ್ಲಿ ಅಂತಿಮ ಬಿ.ಕಾಂ ವಿಭಾಗದಲ್ಲಿ  ವಿದ್ಯಾರ್ಥಿನಿ ಜಸೀಲ ಎಂ. ಕೆ. ಶೇ 93ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ, ನೇಹಾ ಶೇ 90ರಷ್ಟು ಅಂಕಗಳನ್ನು ಗಳಿಸಿ […]

ಕಾವೇರಿ ಕಾಲೇಜಿನ ದೈಹಿಕ ನಿರ್ದೇಶಕ ಕೆ. ಎಸ್. ತಮ್ಮಯ್ಯ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ 

ಕಾವೇರಿ ಕಾಲೇಜಿನ ದೈಹಿಕ ನಿರ್ದೇಶಕ ಕೆ. ಎಸ್. ತಮ್ಮಯ್ಯ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ  ವಿರಾಜಪೇಟೆ : ಕಾವೇರಿ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಬೇಗೂರು ಕೆಚೆಟ್ಟಿರ .ಎಸ್. ತಮ್ಮಯ್ಯನವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ(ರಿ) ಮಂಗಳೂರು ವಿಭಾಗ ವತಿಯಿಂದ ನೀಡಲಾಗುವ ಅಧ್ಯಾಪಕ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಮೂಡಬಿದಿರೆ ಆಳ್ವಾಸ್ ಕ್ಯಾಂಪನ್ ನಲ್ಲಿ ನಡೆದ ಪ್ರೇರಣ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕ್ರೀಡಾ […]

ಬಂಟರ ಶಾಂತಿ ಧಾಮ ಅಭಿವೃದ್ಧಿ ಗೆ ಡಾ.ಮಂತರ್ ಗೌಡ ರಿಂದ 10 ಲಕ್ಷ ರೂಗಳ ಅನುದಾನ

ಬಂಟರ ಶಾಂತಿ ಧಾಮ ಅಭಿವೃದ್ಧಿ ಗೆ ಡಾ.ಮಂತರ್ ಗೌಡ ರಿಂದ 10 ಲಕ್ಷ ರೂಗಳ ಅನುದಾನ ಮಡಿಕೇರಿ : ನಗರದಲ್ಲಿರುವ ಕೊಡಗು ಜಿಲ್ಲಾ ಬಂಟರ ಶಾಂತಿ ಧಾಮ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಹತ್ತು ಲಕ್ಷರೂಗಳ ಅನುದಾನವನ್ನು ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ್ದಾರೆ. ಮಡಿಕೇರಿ ನಗರ ಬಂಟರ ಸಂಘದ ಕೋರಿಕೆ ಮೇರೆಗೆ ಕಾಂಕ್ರೀಟ್ ರಸ್ತೆ,ಇಂಟರ್ ಲಾಕ್ ಅಳವಡಿಕೆ ಮತ್ತು ಶೆಡ್ ನಿರ್ಮಾಣದ ಉದ್ದೇಶಕ್ಕೆ ಅನುದಾನವನ್ನು ನೀಡಿದ್ದು ಇಂದು […]

ಕರಿಕೆ ವನಶಾಸ್ತವ್ ದೇವಾಲಯದಲ್ಲಿ ವಿಶೇಷ ಪೂಜೆ

ಮಡಿಕೇರಿ : ಕೊಡಗು ಗಡಿ ಭಾಗದ ಕರಿಕೆ ಗ್ರಾಮದಲ್ಲಿ ವನಶಾಸ್ತವ್ ದೇವಾಲಯದಲ್ಲಿ ನಾಗರ ಪಂಚಮಿ ಪ್ರಯುಕ್ತ ಶಾಸ್ತಪೂಜೆ ಹಾಗೂ ನಾಗರಾಜ ದೇವನಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸುತ್ತಮುತ್ತಲ ಭಾಗದ ಭಕ್ತರು ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.