ಪ್ರವಾಸೋದ್ಯಮ/ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಜನವಾಹಿನಿ NEWS ಮಡಿಕೇರಿ : ಪ್ರವಾಸೋದ್ಯಮ ಇಲಾಖೆಯಿಂದ 2024-25 ಹಾಗೂ 2025-26 ನೇ ಸಾಲಿನಲ್ಲಿ ಪ್ರವಾಸೋದ್ಯಮ/ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಪ್ಟ್ ಇನ್ಸ್‍ಟ್ಯೂಟ್(ಎಫ್‍ಸಿಐ), ಮೈಸೂರು ಇನ್ಸ್‍ಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (ಐಎಚ್‍ಎಂ) ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮಗಳ ವಿವರ –ಆಹಾರ ಮತ್ತು ಪಾನೀಯ ಸೇವೆಯ ಉಸ್ತುವಾರಿ, ಕನಿಷ್ಟ […]
ವಿಶ್ವ ಆನೆ ದಿನ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ

ವಿಶ್ವ ಆನೆ ದಿನ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಡಿಕೇರಿ : ಭಾರತೀಯ ಅಂಚೆ ಇಲಾಖೆ ವತಿಯಿಂದ ವಿಶ್ವ ಆನೆ ದಿನ-2025 ಪ್ರಯುಕ್ತ ವಿಶೇಷ ಅಂಚೆ ಲಕೋಟೆಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು. ಈ ವಿಶೇಷ ಅಂಚೆ ಲಕೋಟೆಯನ್ನು ಹರ್ಷ ಎಂಬ ಆನೆ ಹೊತ್ತಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಿಸಿಎಫ್ ಕೊಡಗು ವೃತ್ತ, ಡಿಸಿಎಫ್ ಮಡಿಕೇರಿ ವಿಭಾಗ, ಎಸಿಎಫ್ ಮಡಿಕೇರಿ, ಆರ್‍ಎಫ್‍ಒ ಕುಶಾಲನಗರ […]
ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ

ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ – ಪ್ರತಿಭಟನೆ : ಅಪ್ಪಚ್ಚು ರಂಜನ್ ಎಚ್ಚರಿಕೆ ಮಡಿಕೇರಿ : ಜನ ವಿರೋಧದ ನಡುವೆ ರಾಜಾಸೀಟ್ ಉದ್ಯಾನವನದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ, ಪ್ರತಿಭಟನೆ ಮಾಡುವುದಾಗಿ ಮಾಜಿ ಸಚಿವ ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ. ರಾಜಾಸೀಟ್ ಉದ್ಯಾನವನ ಜನಸಂದಣಿ ಹೆಚ್ಚಿರುವ ಪ್ರದೇಶ. ಈಗಾಗಲೇ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ಸಮಸ್ಯೆ ಉದ್ಬವವಾಗಿದೆ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸದೇ ಜನರಿಗೆ ಸಮಸ್ಯೆಯಾಗಬಲ್ಲ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು […]
ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ

ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ ಕುಶಾಲನಗರ :ಸೋಮವಾರಪೇಟ ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಸೋಸಿಯೇಷನ್ ಅಧ್ಯಕ್ಷರಾದ ಸಿ.ಕೆ ರೋಹಿತ್ ಅವರು ಅನಾವರಣ ಗೊಳಿಸಿದರು. ನಂತರ ಮಾತನಾಡಿದ ರೋಹಿತ್ ಅವರು ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ಅಸೋಸಿಯೇಷನ್ ವತಿಯಿಂದ ನಡೆಸಿಕೊಂಡು ಬರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯೋಗೇಶ್ ಪಟೇಲ್ ಕಾರ್ಯದರ್ಶಿ ಅಭಿನಂದ್, ವಿಟ್ಟಲ್,ಹೇಮಂತ್, ಲೋಹಿತ್ ಮೂದ್ರವಳ್ಳಿ ಮತ್ತು ಅಸೋಸಿಯೇಷನ್ ಸದಸ್ಯರುಗಳು […]