BIG NEWS ವಕ್ಪ್ ಕಾಯಿದೆಗೆ ತಿದ್ದುಪಡಿ ತರಲು ಮುಂದಾದ ಕೇಂದ್ರ ಸರಕಾರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯಿದೆಗೆ ಬದಲಾವಣೆಗಳನ್ನು ತರಲು ಸಜ್ಜಾಗಿದೆ, ಆ ಮೂಲಕ ವಕ್ಫ್ ಮಂಡಳಿಯ ಅಧಿಕಾರವನ್ನು ಮರುವ್ಯಾಖ್ಯಾನಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ News18 ವರದಿ ಮಾಡಿದೆ. ಶುಕ್ರವಾರ ಕೇಂದ್ರ ಸಚಿವ ಸಂಪುಟವು ವಕ್ಫ್ ಕಾಯ್ದೆಗೆ ಸುಮಾರು 40 ತಿದ್ದುಪಡಿಗಳನ್ನು ಅಂಗೀಕರಿಸಿದೆ. ಉದ್ದೇಶಿತ ತಿದ್ದುಪಡಿಗಳ ಪ್ರಕಾರ, ವಕ್ಫ್ ಮಂಡಳಿಗಳು ಮಾಡಿದ ಆಸ್ತಿಗಳ ಮೇಲಿನ ಹಕ್ಕುಗಳನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ. ಅಂತೆಯೇ, ವಕ್ಫ್ ಬೋರ್ಡ್‌ಗಳ ವಿವಾದಿತ ಆಸ್ತಿಗಳಿಗೆ ಕಡ್ಡಾಯ ಪರಿಶೀಲನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಕ್ಫ್ […]
ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಯುವಕ ಆತ್ಮಹತ್ಯೆ ಪ್ರಕರಣ; ಕಾರಣ ಬಯಲು

ನಮ್ಮ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ನಿನ್ನೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಯುವಕನ ಆತ್ಮಹತ್ಯೆಗೆ ಕಾರಣ ಬಯಲಾಗಿದೆ. 35ರ ಹರೆಯದ ನವೀನ್ ಕುಮಾರ್ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೀನ್ ಕುಮಾರ್ ಬೆಂಗಳೂರಿನಲ್ಲಿ ಹಾರ್ಡ್ ವೇರ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ಬ್ಯುಸಿನೆಸ್ ನಲ್ಲಿ ನಷ್ಟವಾದ ಹಿನ್ನೆಲೆ, ಸಾಲ ತೀರಿಸಲು ಸಾಧ್ಯವಾಗಿಲ್ಲ. ಸಾಲ ಕೊಟ್ಟವರು ದಿನಾ ವಾಪಾಸ್ಸು ಕೇಳುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಾಲಕನಿಗೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಥಳಿತ; ರಾಜ್ಯದಲ್ಲೊಂದು ಅಮಾನವೀಯ ಘಟನೆ ವರದಿ

ಪೆನ್ನು ಕದ್ದಿದ್ದಾನೆಂದು ಆರೋಪಿಸಿ ಬಡ ಪುಟ್ಟ ವಿದ್ಯಾರ್ಥಿಯೋರ್ವನ ಮೇಲೆ ಮಠದ ಗುರೂಜಿ ಮನಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಯಚೂರು ನಗರದ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ. ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕ. ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ್ ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರವಣ್ ಕುಮಾರ್ ನನ್ನು ಬಡತನದ ಕಾರಣಕ್ಕೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ನಿನ್ನೆ ಆಕಸ್ಮಿಕವಾಗಿ ತಾಯಿ ಆಶ್ರಮಕ್ಕೆ ಭೇಟಿ ನೀಡಿ ಮಗುವನ್ನು ನೋಡಿದಾಗ […]
ಮುಂಡಕ್ಕೈ ದುರಂತದ ಮತ್ತಷ್ಟು ಭೀಕರತೆ ಬಯಲು: ಒಂದೇ ಕುಟುಂಬದ 16 ಮಂದಿ ಬಲಿ

ಮೇಪ್ಪಾಡಿ: ವಯನಾಡು ಭೀಕರ ಭೂಕುಸಿತಕ್ಕೆ ಮೃತರ ಸಂಖ್ಯೆ 350ರ ಗಡಿ ದಾಟಿದೆ. 200 ಕ್ಕೂ ಅಧಿಕ ಮಂದಿ ಇನ್ನು ಕೂಡ ನಾಪತ್ತೆಯಾಗಿದ್ದಾರೆ. ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕಳತ್ತಿಂಗಲ್ ನೌಶೀಬಾ ಅವರ ಕುಟುಂಬದ 16 ಮಂದಿ ಮುಂಡಕ್ಕೈ ಭೂಕುಸಿತದ ವೇಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ನೌಶಿಬಾ ಅವರ ತಂದೆ, ತಾಯಿ ಸಹೋದರ, ಸೊಸೆಯಂದಿರು, ಗಂಡನ ಕುಟುಂಬದ ಸದಸ್ಯರು ಸೇರಿ 16 ಮಂದಿಯನ್ನು ದುರಂತದಲ್ಲಿ ಕಳೆದುಕೊಂಡಿದ್ದಾರೆ. ನೌಶೀಬಾ (40) ಕಳೆದ ಮೂರು […]
ಕುಂದಾಪುರ: ಪತ್ನಿಯನ್ನು ಕೂಡಿ ಹಾಕಿ ಕೊಲೆಗೆ ಯತ್ನಿಸಿದ ಪತಿ; ಮಹಿಳೆಯನ್ನು ರಕ್ಷಿಸಲು ಹರಸಾಹಸ ಪಟ್ಟ ಪೊಲೀಸರು

ಕುಂದಾಪುರದಲ್ಲಿ; ಪತ್ನಿಯನ್ನು ಕೂಡಿಹಾಕಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಸಾಹಸಸಿಯವಾಗಿ ಬಂಧಿಸಿದ ಘಟನೆ ಬಸ್ರೂರಿನಲ್ಲಿ ನಡೆದಿದೆ. ಲಕ್ಷ್ಮಣ (38) ಬಂಧಿತ ಆರೋಪಿ. ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಬಳಿಕ ಆರೋಪಿಯು ಮನೆಯ ಒಳಗಿನಿಂದ ಬಾಗಿಲನ್ನು ಹಾಕಿ ಕೊಠಡಿಗೆ ಯಾರೂ ಪ್ರವೇಶಿಸದಂತೆ ಕೂಡಿ ಹಾಕಿ ಬೆದರಿಸಿದ್ದಾನೆ. ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆಯಲು ಹರಸಾಹಸಪಟ್ಟಿದ್ದಾರೆ. ಆರೋಪಿಯು ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಆತನಿದ್ದ […]
ನಮ್ಮ ಮೆಟ್ರೋ ಟ್ರ್ಯಾಕ್ ಗೆ ಹಾರಿ ಯುವಕನೋರ್ವ ಆತ್ಮಹತ್ಯೆ

ಬೆಂಗಳೂರು: ‘ನಮ್ಮ ಮೆಟ್ರೋ’ ಟ್ರ್ಯಾಕ್ಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜೆ 5.45ರ ಸುಮಾರಿಗೆ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತು ನಮ್ಮ ಮೆಟ್ರೋ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 35 ವರ್ಷದ ವ್ಯಕ್ತಿಯೊಬ್ಬರು ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 5.45 ಗಂಟೆಗೆ ಸಮೀಪಿಸುತ್ತಿರುವ ರೈಲಿನ ಮುಂದೆ ಜಿಗಿದಿದ್ದಾರೆ. ಘಟನೆಯಿಂದ ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಉಳಿದ ಮಾರ್ಗದಲ್ಲಿ ಸೇವೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದೆ.
ಗಡ್ಡ ಬಿಟ್ಟುಕೊಂಡಿದ್ದಕ್ಕೆ ವಿದ್ಯಾರ್ಥಿಯನ್ನು ಕಾಲೇಜಿನಿಂದ ಹೊರಹಾಕಿದ ಪ್ರಾಂಶುಪಾಲ; ಆರೋಪ

ವಿದ್ಯಾರ್ಥಿಯೋರ್ವ ಗಡ್ಡ ಬಿಟ್ಟುಕೊಂಡು ಕಾಲೇಜಿಗೆ ಬಂದಿದ್ದಕ್ಕೆ ಆತನನ್ನು ಕಾಲೇಜಿನಿಂದ ಪ್ರಾಂಶುಪಾಲರು ಹೊರಹಾಕಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹೋಬಿಗಂಜ್‌ನ ಆಜಾದ್ ನೌರಂಗ್ ಇಂಟರ್ ಕಾಲೇಜಿನ ವಿದ್ಯಾರ್ಥಿ ಫರ್ಮಾನ್ ಅಲಿಯನ್ನು ಪ್ರಾಂಶುಪಾಲರು ಗಡ್ಡ ಬಿಟ್ಟುಕೊಂಡಿದ್ದಕ್ಕೆ ಕಾಲೇಜಿನಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ಉಚ್ಚಾಟಿತ ವಿದ್ಯಾರ್ಥಿಯ ಹಿರಿಯ ಸಹೋದರ ಜೀಶನ್ ಅಲಿ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳಿಗೆ ಔಪಚಾರಿಕ ದೂರುಗಳನ್ನು ಸಲ್ಲಿಸಿದ್ದಾರೆ. ಪ್ರಾಂಶುಪಾಲರು ಫರ್ಮಾನ್‌ಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿರುವುದನ್ನು ತೋರಿಸುವ ವೀಡಿಯೋ ವ್ಯಾಪಕವಾಗಿ ಪ್ರಸಾರವಾಗಿದ್ದು, ಕ್ರಮಕ್ಕಾಗಿ ವ್ಯಾಪಕ ಆಗ್ರಹ […]
ಹಮಾಸ್ ನಾಯಕ ಇಸ್ಮಾಯಿಲ್ ಹತ್ಯೆ; ಭದ್ರತಾ ಲೋಪದ ಹಿನ್ನೆಲೆ 20ಕ್ಕೂ ಅಧಿಕ ಅಧಿಕಾರಿಗಳ ಬಂಧನ

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ ಬೆನ್ನಲ್ಲಿ ಇರಾನ್ ಕೆಂಡಾಮಂಡಲವಾಗಿದೆ. ಈ ಮಧ್ಯೆ ಭದ್ರತೆಯಲ್ಲಿ ಉಂಟಾದ ಲೋಪಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಹಾಗೂ ರಾಜಧಾನಿಯಲ್ಲಿರುವ ಸೇನೆಯ ಅತಿಥಿ ಗೃಹದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಇರಾನ್‌ನಲ್ಲಿ ಬಂಧಿಸಲಾಗಿದೆ. ಟೆಹರಾನ್‌ನಲ್ಲಿರುವ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಹನಿಯೆ ಅವರನ್ನು ಬುಧವಾರ ಹತ್ಯೆ ಮಾಡಲಾಗಿತ್ತು. ಹನಿಯೆ ಅವರು ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇರಾನ್ ರಾಷ್ಟ್ರ […]
ವಯನಾಡು ಭೂ ಕುಸಿತ ದುರಂತಕ್ಕೆ ಗೋಹತ್ಯೆ ಜೊತೆ ಸಂಬಂಧ ಕಲ್ಪಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ವಯನಾಡು ಭೂಕುಸಿತಕ್ಕೂ ಕೇರಳದ ಗೋಹತ್ಯೆ ಪದ್ಧತಿಗೂ ಸಂಬಂಧ ಕಲ್ಪಿಸಿ ಬಿಜೆಪಿಯ ಹಿರಿಯ ನಾಯಕ ಜ್ಞಾನದೇವ್ ಅಹುಜಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಗೋಹತ್ಯೆ ಎಲ್ಲಿ ನಡೆದರೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ರಾಜಸ್ಥಾನದ ಮಾಜಿ ಶಾಸಕ ಅಹುಜಾ ಹೇಳಿದ್ದಾರೆ. ಜುಲೈ 30 ರಂದು, ಮುಂಡಕೈ, ಚುರಲಾಮಲ ಮತ್ತು ಮೆಪ್ಪಾಡಿ ಸೇರಿದಂತೆ ವಯನಾಡಿನ ಗ್ರಾಮಗಳಲ್ಲಿ ಅನೇಕ ಭೂಕುಸಿತಗಳು ಸಂಭವಿಸಿದವು. ಕೇರಳದ ವಯನಾಡ್ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಶನಿವಾರ 358ಕ್ಕೆ ತಲುಪಿದೆ,. ವಯನಾಡು ಭೂಕುಸಿತವು ಗೋವಧೆಯ ನೇರ ಪರಿಣಾಮವಾಗಿದ್ದು, ಕೇರಳದಲ್ಲಿ […]
ವಯನಾಡು ದುರಂತದ ಸಂತ್ರಸ್ತರಿಗೆ 100 ಮನೆ ನಿರ್ಮಿಸಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ

ವಯನಾಡ್ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ ಮಾಡಿಕೊಡುವುದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸಿದ್ದರಾಮಯ್ಯ,’ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ […]